IPL 2025: CSK ಕೆಲ ತಪ್ಪುಗಳು ಪಂದ್ಯ ನೋಡಲು ನೋವುಂಟು ಮಾಡಿತು-ರಾಯುಡು

CSK ಕೆಲವು ಅದ್ಭುತ ಕ್ಯಾಚ್‌ ಪಡೆದಂತೆ ಕೆಲವು ಕ್ಯಾಚ್ ಗಳನ್ನು ಕೈಬಿಟ್ಟರು. ಆದರೆ ರಾಜಸ್ಥಾನ ರಾಯಲ್ಸ್ ದೊರೆತ ಅವಕಾಶವನ್ನು ಸರಿಯಾಗಿ ಬಳಸಿಕೊಂಡರು.
Ambati Rayudu
ಅಂಬಟಿ ರಾಯುಡು
Updated on

ನವದೆಹಲಿ: ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರು ರನ್ ಗಳ ಸೋಲಿಗೆ ಶರಣಾದ ನಂತರ ಐದು ಬಾರಿಯ ಚಾಂಪಿಯನ್ಸ್ ತಂಡ ಫೀಲ್ಡಿಂಗ್ ನಲ್ಲಿ ಮಾಡಿದ ಕೆಲವು ತಪ್ಪುಗಳು ಪಂದ್ಯ ನೋಡಲು ನೋವುಂಟು ಮಾಡಿತು ಎಂದು ಮಾಜಿ ಕ್ರಿಕೆಟ್ ಆಟಗಾರ ಅಂಬಟಿ ರಾಯುಡು ಹೇಳಿದ್ದಾರೆ.

ಭಾನುವಾರ ಸಂಜೆ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ, ನಿತೀಶ್ ರಾಣಾ 81 ರನ್ ಮತ್ತು ವನಿಂದು ಹಸರಂಗ ಅವರ 4 ವಿಕೆಟ್ ಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್ ಮೊದಲ ಬಾರಿಗೆ ಗೆಲುವು ಸಾಧಿಸುವುದರೊಂದಿಗೆ ಸಿಎಸ್‌ಕೆ ಸತತ ಎರಡನೇ ಸೋಲನ್ನು ಅನುಭವಿಸಿತು. CSK ಕೆಲವು ಅದ್ಭುತ ಕ್ಯಾಚ್‌ ಪಡೆದಂತೆ ಕೆಲವು ಕ್ಯಾಚ್ ಗಳನ್ನು ಕೈಬಿಟ್ಟರು. ಆದರೆ ರಾಜಸ್ಥಾನ ರಾಯಲ್ಸ್ ದೊರೆತ ಅವಕಾಶವನ್ನು ಸರಿಯಾಗಿ ಬಳಸಿಕೊಂಡರು.

ನಿಕಟವಾದ ಆಟವನ್ನು ಆಡುತ್ತಿರುವಾಗ, ಈ ಒಂದು-ಪರ್ಸೆಂಟ್ ನಿಜವಾಗಿಯೂ ಮುಖ್ಯವಾಗುತ್ತವೆ. ಈ ಪಂದ್ಯದಲ್ಲಿ ನಾವು ಕೆಲವು ಅದ್ಭುತ ಕ್ಯಾಚ್‌ಗಳನ್ನು ನೋಡಿದ್ದೇವೆ-ಅದನ್ನು ನೋಡುವುದು ಅಪರೂಪ! ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ಉತ್ತಮವಾಗಿ ಫೀಲ್ಡಿಂಗ್ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ರಾಜಸ್ಥಾನ್ ರಾಯಲ್ಸ್ ನಿಜವಾಗಿಯೂ ಇದಕ್ಕೆ ಸಿದ್ಧವಾಗಿತ್ತು. ಶಿವಂ ದುಬೆ ಗಟ್ಟಿಯಾಗುತ್ತಿದ್ದಂತೆ ರಿಯಾನ್ ಪರಾಗ್ ಪಡೆದ ಕ್ಯಾಚ್ ನಿಜವಾದ ಗೇಮ್ ಚೇಂಜರ್. ಚೆನ್ನೈ ಸೂಪರ್ ಕಿಂಗ್ಸ್ ಈ ಹಿಂದೆ ಎಂದಿಗೂ ಈ ರೀತಿಯ ಫೀಲ್ಡಿಂಗ್ ಮಾಡಿರಲಿಲ್ಲ. ಈ ಸೀಸನ್ ನ ಅವರ ಮೊದಲ ಎರಡು ಪಂದ್ಯಗಳಲ್ಲಿ ತೀರಾ ಕಳಪೆ ಫೀಲ್ಡಿಂಗ್ ಮಾಡಿದ್ದಾರೆ. ಸುಲಭವಾಗಿ ಸಿಗಬಹುದಾದ ಕ್ಯಾಚ್ ಕೈ ಚೆಲ್ಲಿದ್ದಾರೆ. ಅವರ ಕೆಲವೊಂದು ತಪ್ಪುಗಳು ಪಂದ್ಯ ವೀಕ್ಷಿಸಲು ಸಾಕಷ್ಟು ನೋವುಂಟು ಮಾಡಿತು ಎಂದು JioHotstar ನಲ್ಲಿ ರಾಯುಡು ಹೇಳಿದರು.

Ambati Rayudu
ಎಂಎಸ್ ಧೋನಿ ಮೇಲಿನ ಕ್ರೇಜ್‌ನಿಂದ CSK ಗೆ ಹಾನಿ?: 'ಆಂತರಿಕವಾಗಿ, ಬಹಳಷ್ಟು ಜನರು...'; ಅಂಬಟಿ ರಾಯುಡು

ಸೋಮವಾರ ಸಂಜೆ ವಾಂಖೆಡೆ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ (MI)ಸೆಣಸಾಟ ಕುರಿತು ಪ್ರತಿಕ್ರಿಯಿಸಿದ ರಾಯುಡು, ಈ ವರ್ಷ ಮುಂಬೈ ಇಂಡಿಯನ್ಸ್ ಗಟ್ಟಿಯಾದ ತಂಡವನ್ನು ಹೊಂದಿದೆ. ಅವರು ಸರಿಯಾದ ಆಟಗಾರರನ್ನು ಹೊಂದಿದ್ದಾರೆ. ಬಹುಶಃ ನಮನ್ ಧೀರ್ ಅವರನ್ನು ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಕಳುಹಿಸುವುದು ಮತ್ತು ಹಾರ್ದಿಕ್ ಪಾಂಡ್ಯ ಅವರ ಕ್ರಮಾಂಕವನ್ನು ಹೆಚ್ಚಿಸುವುದರಿಂದ ಬ್ಯಾಟಿಂಗ್ ಲೈನ್-ಅಪ್ ಅನ್ನು ಬಲಪಡಿಸಬಹುದು ಎಂದರು.

ಹಾರ್ದಿಕ್ ಪಾಂಡ್ಯ ಈಗಾಗಲೇ ಅತ್ಯುತ್ತಮ ನಾಯಕ ಎಂದು ಸಾಬೀತುಪಡಿಸಿದ್ದಾರೆ. ಅದ್ಭುತವಾದ ಮಾನಸಿಕ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಈಗ, ಮುಂಬೈ ಇಂಡಿಯನ್ಸ್ ಮುನ್ನಡೆಸುವುದು ಅವರ ಸ್ಥಿತಿಸ್ಥಾಪಕತ್ವಕ್ಕೆ ಮತ್ತೊಂದು ಸಾಕ್ಷಿಯಾಗಲಿದೆ. ಮುಂಬೈ ಇಂಡಿಯನ್ಸ್ ಮತ್ತೆ ಕಂಬ್ಯಾಕ್ ಆಗಲಿದೆ ಎನ್ನುವ ವಿಶ್ವಾಸವಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com