
ಫಿಟ್ ನೆಸ್, ಫ್ಯಾಷನ್ ಅಲ್ಲದೇ ವೈಯಕ್ತಿಕ ಜೀವನ ವಿಚಾರದಲ್ಲಿ ಆಗಾಗ್ಗೆ ಸುದ್ದಿಯಾಗುವ ಬಾಲಿವುಡ್ ನಟಿ ಮಲೈಕಾ ಅರೋರಾ, ಈಗ 51ನೇ ವಯಸ್ಸಿನಲ್ಲೂ ಡೇಟಿಂಗ್ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದಾರೆ. ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಜೊತೆಗೆ ಅವರ ಹೆಸರು ಕೇಳಿಬಂದಿದ್ದು, ಅವರಿಬ್ಬರೂ ಡೇಟಿಂಗ್ ನಲ್ಲಿದ್ದಾರಾ? ಎಂಬ ಉಹಾಪೋಹಗಳು ಹರಿದಾಡುತ್ತಿವೆ.
ಮಾರ್ಚ್ 30 ರಂದು ಗುವಾಹಟಿ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಪಂದ್ಯದಲ್ಲಿ ಡಾಗ್ ಹೌಟ್ ನಲ್ಲಿ ಕುಮಾರ ಸಂಗಕ್ಕಾರ ಜೊತೆಗೆ ಮಲೈಕಾ ಕಾಣಿಸಿಕೊಂಡ ನಂತರ ಈ ವದಂತಿಗಳು ಹಬ್ಬಿವೆ.
ಈ ಹಿಂದೆ ರಾಜಸ್ಥಾನ ರಾಯಲ್ಸ್ ನ ಮುಖ್ಯ ಕೋಚ್ ಆಗಿದ್ದ ಸಂಗಕ್ಕಾರ ಈಗ ಪಂದ್ಯದ ವೇಳೆ ತಂಡವನ್ನು ಬೆಂಬಲಿಸುತ್ತಿರುವುದು ಕಂಡುಬಂದಿದೆ. ಕುತೂಹಲಕಾರಿಯಾಗಿ, ಮಲೈಕಾ ಕೂಡಾ ರಾಜಸ್ಥಾನ ರಾಯಲ್ಸ್ ತಂಡದ ಬೆಂಬಲಿಗರಾಗಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಅವರಿಬ್ಬರ ಒಡನಾಟವನ್ನು ಶೀಘ್ರವಾಗಿ ಪ್ರಶ್ನಿಸುತ್ತಿದ್ದಾರೆ, ಕೆಲವರು ಇಬ್ಬರೂ ಡೇಟಿಂಗ್ ಮಾಡುತ್ತಿದ್ದೀರಾ ಎಂದು ಕೇಳುತ್ತಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ಜರ್ನಿಯಲ್ಲಿ ಕುಮಾರ ಸಂಗಕ್ಕಾರ ಅವರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ರಾಹುಲ್ ದ್ರಾವಿಡ್ ಗೂ ಮುನ್ನಾ ಹಲವು ಸೀಸನ್ ಗಳಿಗೆ RR ತರಬೇತುದಾರರಾಗಿದ್ದರು.
ಮಲೈಕಾ ಅರೋರಾ ಈ ಹಿಂದೆ ನಟ ಅರ್ಜುನ್ ಕಪೂರ್ ಅವರೊಂದಿಗೆ ದೀರ್ಘಾವಧಿಯ ಡೇಟಿಂಗ್ ನಲ್ಲಿದ್ದರು. ವಯಸ್ಸಿನ ಅಂತರದ ಹೊರತಾಗಿಯೂ ಅವರಿಬ್ಬರೂ ಬಹಳ ವರ್ಷಗಳಿಂದ ಬಹಿರಂಗವಾಗಿಯೇ ಡೇಟಿಂಗ್ ನಲ್ಲಿದ್ದರು. ಆದಾಗ್ಯೂ, ಕೊನೆಗೆ ಇಬ್ಬರು ಬೇರ್ಪಟ್ಟಿದ್ದರು.
ಮಲೈಕಾ ಅಥವಾ ಸಂಗಕ್ಕಾರ ಡೇಟಿಂಗ್ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಸಂಬಂಧ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.
Advertisement