
ಲಖನೌ: ಲಕ್ನೋ ಸೂಪರ್ ಜೈಂಟ್ಸ್ (LSG) ಸ್ಪಿನ್ನರ್ ದಿಗ್ವೇಶ್ ರಾಠಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ತಮ್ಮ 'ನೋಟ್‌ಬುಕ್' ಸಂಭ್ರಮಾಚರಣೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಏಕಾನ ಸ್ಟೇಡಿಯಂನಲ್ಲಿ ಇಂದು ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ದಿಗ್ವೇಶ್ ರಾಠಿ ಕಣಕ್ಕಿಳಿದಿದ್ದಾರೆ. ಇದಕ್ಕೂ ಮುನ್ನಾ ಕೊಹ್ಲಿ ಮುಂದೆ ನೋಟ್‌ಬುಕ್' ಸಂಭ್ರಮಾಚರಣೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
ಕ್ರೀಡಾಂಗಣದಲ್ಲಿ ಅಭಿಮಾನಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ದ್ವಿಗೇಶ್ ರಾಠಿ, 'ಟೂರ್ನಮೆಂಟ್ ಇದ್ದಾಗ, ನೋಟ್‌ಬುಕ್ ತೆಗೆದುಕೊಂಡು ಹೋಗುತ್ತಿದೆ. ಅದರಲ್ಲಿ ಎಲ್ಲರ ಹೆಸರನ್ನು ಬರೆಯುತ್ತಿದೆ ಎಂದು ತಿಳಿಸಿದರು.
ನಿಮ್ಮ'ನೋಟ್‌ಬುಕ್'ನಲ್ಲಿ ಮುಂದಿನ ಹೆಸರು ವಿರಾಟ್ ಕೊಹ್ಲಿಯೇ ಎಂದು ಪ್ರೇಕ್ಷಕರು ಕೇಳಿದಾಗ, ನಗುತ್ತಾ, ಇಲ್ಲ ಎಂದು ತಲೆಯಾಡಿಸಿದರು.
ಮೂರು ಪಂದ್ಯಗಳಲ್ಲಿ ನೋಟ್ ಬುಕ್ ಸೆಲೆಬ್ರೇಷನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದ ದಿಗ್ವೇಶ್ ವಿರುದ್ಧ ವ್ಯಾಪಕ ಚರ್ಚೆ ಹಾಗೂ ಟೀಕೆಗಳು ಕೇಳಿಬರುತ್ತಿದ್ದಂತೆಯೇ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಿಂದ ಅಮಾನತುಗೊಳಿಸಲಾಗಿತ್ತು.ಅಲ್ಲದೇ ಬರೋಬ್ಬರಿ 9.37 ಲಕ್ಷ ರೂ. ದಂಡ ಕೂಡಾ ಕಟ್ಟಿದ್ದಾರೆ.
ಇದೀಗ ದಿಗ್ವೇಶ್ ರಾಠಿ ವಿರುದ್ಧದ ಒಂದು ಪಂದ್ಯದ ಬ್ಯಾನ್ ತೆರವಾಗಿದ್ದು, ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ.
Advertisement