

ನವದೆಹಲಿ: ಬದ್ಧ ವೈರಿ ಕ್ರಿಕೆಟ್ ತಂಡಗಳಾದ ಭಾರತ- ಪಾಕಿಸ್ತಾನ ಕೊಲಂಬೋದಲ್ಲಿ ಫೆ.15 ರಂದು ಮುಖಾಮುಖಿಯಾಗಲಿವೆ. ಐಸಿಸಿ ಈ ವೇಳಾಪಟ್ಟಿಯನ್ನು ಘೋಷಿಸಿದ್ದು ಟಿ20 ವಿಶ್ವಕಪ್ ನ ಭಾಗವಾಗಿ ಉಭಯ ತಂಡಗಳ ಪಂದ್ಯವನ್ನು ದೃಢಪಡಿಸಿದೆ.
ಮುಂಬೈನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಶ್ರೀಲಂಕಾ ಸಹ-ಆತಿಥ್ಯ ವಹಿಸುತ್ತಿರುವ 20 ತಂಡಗಳ ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್ ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿವೆ.
ಯುಎಇಯಲ್ಲಿ ನಡೆದ 2025 ರ ಏಷ್ಯಾ ಕಪ್‌ನಲ್ಲಿ ಮೂರು ಬಾರಿ ಪಂದ್ಯಗಳು ನಡೆದ ನಂತರ ಉಭಯ ತಂಡಗಳು ಪರಸ್ಪರ ಆಡುತ್ತಿರುವುದು ಇದೇ ಮೊದಲಾಗಿದ್ದು, ಟಾಸ್ ಮಾಡುವಾಗ ಮತ್ತು ಪಂದ್ಯದ ನಂತರದ ಶುಭಾಶಯ ಕೋರುವಾಗ ಸಾಂಪ್ರದಾಯಿಕ ಹ್ಯಾಂಡ್‌ಶೇಕ್ ನ್ನು ಕಳೆದ ಪಂದ್ಯಗಳಲ್ಲಿ ತಪ್ಪಿಸಲಾಗಿತ್ತು.
ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಮ್ಮ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ, ಇದು ಭಾರತ ಮತ್ತು ಪಾಕಿಸ್ತಾನ ಎರಡೂ ಬಹು-ರಾಷ್ಟ್ರಗಳ ಪಂದ್ಯಾವಳಿಗಳಲ್ಲಿ ತಟಸ್ಥ ಸ್ಥಳಗಳಲ್ಲಿ ಆಡಲು ಅನುವು ಮಾಡಿಕೊಡುವ ರಾಜಿ ಒಪ್ಪಂದದ ಭಾಗವಾಗಿದೆ.
ಪಂದ್ಯಾವಳಿಯ ಪಂದ್ಯಗಳು ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತದ ಐದು ಸ್ಥಳಗಳಲ್ಲಿ ಮತ್ತು ಶ್ರೀಲಂಕಾದಲ್ಲಿ ಮೂರು ಸ್ಥಳಗಳಲ್ಲಿ ನಡೆಯಲಿವೆ. ಪಂದ್ಯಾವಳಿಯು ದೆಹಲಿ, ಕೋಲ್ಕತ್ತಾ, ಅಹಮದಾಬಾದ್, ಚೆನ್ನೈ, ಮುಂಬೈ, ಕೊಲಂಬೊ ಮತ್ತು ಕ್ಯಾಂಡಿಯಲ್ಲಿ 55 ಪಂದ್ಯಗಳನ್ನು ಒಳಗೊಂಡಿರುತ್ತದೆ.
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾದ ಭಾರತವು ತನ್ನ ಲಾಭದಾಯಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೂಲಕ ಟಿ20 ಪಂದ್ಯದ ಕೇಂದ್ರಬಿಂದುವಾಗಿದ್ದು, ಇದು ಉನ್ನತ ಜಾಗತಿಕ ತಾರೆಗಳನ್ನು ಹೊಂದಿದೆ.
Advertisement