

ಮುಂಬೈ: ಇದೇ 27 ರಂದು ನವದೆಹಲಿಯಲ್ಲಿ ನಡೆಯಲಿರುವ ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ (WPL) ಹರಾಜು ಪ್ರಕ್ರಿಯೆಯಲ್ಲಿ ಯಾರಿಗೆ ಡಿಮ್ಯಾಂಡ್ ಹೆಚ್ಚಾಗಲಿದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಒಟ್ಟು 277 ಆಟಗಾರ್ತಿಯರಲ್ಲಿ 194 ಭಾರತೀಯರು ಮತ್ತು 83 ವಿದೇಶಿ ಕ್ರಿಕೆಟಿಗರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು, ಈ ಬಾರಿ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಹೆಚ್ಚಿನ ಬೇಡಿಕೆಯ ಆಟಗಾರ್ತಿಯಾಗಲಿದ್ದಾರೆ ಎಂದು ಮಾಜಿ ಭಾರತೀಯ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
WPL 2026 ಹರಾಜಿನಲ್ಲಿ ಗರಿಷ್ಠ 73 ಸ್ಲಾಟ್ ಗಳು ಲಭ್ಯವಿದೆ. ಪ್ರತಿ ತಂಡವು 18 ಆಟಗಾರರನ್ನು ಹೊಂದಬಹುದು, ಅದರಲ್ಲಿ ಆರು ಮಂದಿ ವಿದೇಶಿ ಆಟಗಾರರಾಗಿರಬಹುದು. ಜಿಯೋಹಾಟ್‌ಸ್ಟಾರ್‌ನ ವಿಶೇಷ ಕಾರ್ಯಕ್ರಮ ಮೋಸ್ಟ್ ವಾಂಟೆಡ್ ಆಟಗಾರರ ಕುರಿತು ಚರ್ಚೆಯಲ್ಲಿ ಮಾತನಾಡಿದ ವೇದ ಕೃಷ್ಣಮೂರ್ತಿ, ಭಾರತೀಯ ಆಲ್ ರೌಂಡರ್ ಆಟಗಾರ್ತಿ ದೀಪ್ತಿ ಶರ್ಮಾ ಅವರ ಕೌಶಲ್ಯವನ್ನು ಗುಣಗಾನ ಮಾಡಿದರು. ಅಲ್ಲದೇ ಅವರು ಯಾಕೆ ಮೋಸ್ಟ್ ವಾಂಟೆಡ್ ಆಟಗಾರ್ತಿಯಾಗ್ತಾರೆ ಎಂಬುದಕ್ಕೆ ವಿವರಣೆ ನೀಡಿದರು.
ದೀಪ್ತಿ ಶರ್ಮಾ ಈ ಹಿಂದಿನ ಆವೃತ್ತಿಗಳಲ್ಲಿ ಮ್ಯಾಚ್ ವಿನ್ನರ್ ಎಂಬುದನ್ನು ತೋರಿಸಿದ್ದಾರೆ. ಬ್ಯಾಟಿಂಗ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಮಹಿಳಾ ODI ವಿಶ್ವಕಪ್‌ನಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೆಗಾ ಹರಾಜಿನಲ್ಲಿ ಖಂಡಿತವಾಗಿಯೂ ಅವರ ಬೇಡಿಕೆ ಹೆಚ್ಚಾಗಲಿದೆ. ಪ್ರತಿ ಫ್ರಾಂಚೈಸಿಯೂ ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವೇದಾ ಹೇಳಿದರು.
ಮೆಗಾ-ಹರಾಜಿನಲ್ಲಿ ಗುಜರಾತ್, ದೀಪ್ತಿಯನ್ನು ಖರೀದಿಸಬೇಕು ಎಂದು ಜಿಯೋಸ್ಟಾರ್ ತಜ್ಞೆ ಅಂಜುಮ್ ಚೋಪ್ರಾ ಹೇಳಿದರು.
ಗುಜರಾತ್ ಜೊತೆಗೆ, ಡೆಲ್ಲಿ ಕ್ಯಾಪಿಟಲ್ಸ್ ಕೂಡ ಶರ್ಮಾ ಅವರನ್ನು ಖರೀದಿಸಲು ಎದುರು ನೋಡುತ್ತಿದೆ. ಏಕೆಂದರೆ ಇದು ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ ಅನ್ನು ಬಲಪಡಿಸುತ್ತದೆ. ತದನಂತರ ಮೂರನೇ ತಂಡವಾಗಿ ಯುಪಿ ವಾರಿಯರ್ಸ್ ಕೂಡಾ ದೀಪ್ತಿ ಖರೀದಿಸಲು ಆಸಕ್ತಿ ಹೊಂದಿದೆ ಎಂದು ಅಂಜುಮ್ ಹೇಳಿದರು.
ಭಾರತೀಯ ಬ್ಯಾಟರ್ ಹರ್ಲೀನ್ ಡಿಯೋಲ್ ಅವರನ್ನು ಬಿಡುಗಡೆ ಮಾಡುವ ಗುಜರಾತ್ ನಿರ್ಧಾರದ ಬಗ್ಗೆ ಚೋಪ್ರಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
Advertisement