

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ ನಂತರ ಮತ್ತೋರ್ವ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. WBBL ಸೀಸನ್ ನ ಉಳಿದ ಪಂದ್ಯಗಳಲ್ಲಿ ಆಡುತ್ತಿಲ್ಲ ಎಂದು Brisbane Heat ದೃಢಪಡಿಸಿದೆ.
ಕಳೆದ 10 ದಿನಗಳ ಹಿಂದೆ ಹೋಬಾರ್ಟ್ ಹರಿಕೇನ್ಸ್ ಜೊತೆಗಿನ ಪಂದ್ಯದ ನಂತರ ಸ್ಮೃತಿ ಮಂಧಾನ ವಿವಾಹ ಮಹೋತ್ಸವದಲ್ಲಿ ಭಾಗವಹಿಸಲು ರೊಡ್ರಿಗಸ್ ತವರಿಗೆ ಮರಳಿದ್ದರು. ಆದರೆ, ಮಂಧಾನ ಅವರ ತಂದೆ ಅನಾರೋಗ್ಯಕ್ಕೆ ಒಳಗಾದ ನಂತರ ಮಂಧಾನ ವಿವಾಹ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.
ಮಂಧಾನ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಲು ಭಾರತದಲ್ಲಿಯೇ ಇರಲು ಜೆಮಿಮಾ ನಿರ್ಧರಿಸಿದ್ದಾರೆ. ಆಕೆಯ ನಿರ್ಧಾರವನ್ನು ಗೌರವಿಸುವುದಾಗಿ Brisbane Heat ತಿಳಿಸಿದೆ.
ಈ ವರ್ಷ ಕ್ಲಬ್‌ನ ಅಗ್ರ ಅಂತರರಾಷ್ಟ್ರೀಯ ಆಟಗಾರ್ತಿಯಾಗಿದ್ದ ಮತ್ತು ಬ್ರಿಸ್ಬೇನ್‌ನೊಂದಿಗೆ ಎರಡನೇ ಅವಧಿಯಲ್ಲಿ ರೊಡ್ರಿಗಸ್ ಅವರನ್ನು ಇನ್ನಷ್ಟು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಅವರ ನಿರ್ಧಾರದಿಂದ ಹತಾಸೆಯಾಗಿದೆ ಎಂದು ಸಿಇಒ ಟೆರ್ರಿ ಸ್ವೆನ್ಸನ್ ಹೇಳಿದ್ದಾರೆ. ಆದರೆ ಅವರ ಯೋಗಕ್ಷೇಮವೇ ಫ್ರಾಂಚೈಸಿಯ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಜೆಮಿಮಾಗೆ ಇದು ಸವಾಲಿನ ಸಮಯವಾಗಿತ್ತು ಎಂಬುದು ಸ್ಪಷ್ಟ, ಆದ್ದರಿಂದ ಅವರು WBBL ನಲ್ಲಿ ಇನ್ನು ಮುಂದೆ ಭಾಗವಹಿಸದಿರುವುದು ದುರದೃಷ್ಟಕರವಾದರೂ, ಭಾರತದಲ್ಲಿಯೇ ಉಳಿಯಬೇಕೆಂಬ ಅವರ ಮನವಿಯನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿದ್ದೇವೆ. ಜೆಮಿಮಾ ಮತ್ತು ಸ್ಮೃತಿ ಮಂಧಾನ ಅವರ ಕುಟುಂಬದ ಭವಿಷ್ಯ ಚೆನ್ನಾಗಿರಲಿ ಎಂದು ಹಾರೈಸುವುದಾಗಿ ಸ್ವೆನ್ಸನ್ ಹೇಳಿರುವುದಾಗಿ ಫ್ರಾಂಚೈಸಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
Advertisement