
ಪರ್ತ್: ಬರುವ ಭಾನುವಾರದಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿವೆ.
ಶುಭ್ ಮನ್ ಗಿಲ್ ನೇತೃತ್ವದ ತಂಡ ಭಾರತ ತಂಡದ ಆಟಗಾರರು ಗುರುವಾರ ಮುಂಜಾನೆ ಇಲ್ಲಿಗೆ ಆಗಮಿಸಿದರು. ಏಳು ತಿಂಗಳ ಅಂತರದ ನಂತರ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮತ್ತೆ ಜೆರ್ಸಿ ಧರಿಸುತ್ತಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ಭಾರತ ವಿಶ್ವಕಪ್ ಗೆದ್ದ ನಂತರ ಇಬ್ಬರು ದಿಗ್ಗಜ ಆಟಗಾರರು ಟಿ-20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಸುಮಾರು 11 ತಿಂಗಳ ನಂತರ ಟೆಸ್ಟ್ ಕ್ರಿಕೆಟ್ ಗೂ ವಿದಾಯ ಹೇಳಿದರು. ಇದರ ಪರಿಣಾಮವಾಗಿ ವಿರಾಟ್ ಮತ್ತು ರೋಹಿತ್ ಭಾರತದ ಆಟಗಾರರಾಗಿ ಈಗ ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಇದ್ದಾರೆ.
ಮುಂದಿನ ವಿಶ್ವಕಪ್ ಗೆ ಇನ್ನೂ ಎರಡು ವರ್ಷಗಳು ಉಳಿದಿದ್ದು, ಒಂದೊಂದು ಸರಣಿ ತೆಗೆದುಕೊಳ್ಳುವಂತೆ (take it one series at a time) ದಿಗ್ಗಜ ಆಟಗಾರರಿಗೆ ಭಾರತದ ಮಾಜಿ ನಾಯಕ ಮತ್ತು ಮಾಜಿ ಕೋಚ್ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.
ಕೊಹ್ಲಿ ಮಾಸ್ಟರ್ ಚೇಸರ್. ರೋಹಿತ್ ಅಗ್ರಸ್ಥಾನದಲ್ಲಿ ಸ್ಫೋಟಕ ಬ್ಯಾಟ್ಸ್ ಮನ್. ನಮ್ಮಲ್ಲಿ ಇನ್ನೂ ಸಾಕಷ್ಟು ಆಡುವ ಸಾಮರ್ಥ್ಯ ಇದೆ ಎಂಬುದು ಅವರಿಗೆ ಗೊತ್ತು. ಇದು ನೀವು ಎಷ್ಟು ಉತ್ಸುಕರಾಗಿದ್ದೀರಿ, ನೀವು ಎಷ್ಟು ಫಿಟ್ ಆಗಿದ್ದೀರಿ, ಆಟದ ಮೇಲಿನ ಉತ್ಸಾಹವು ಇನ್ನೂ ಇದೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅವರ ಅನುಭವದೊಂದಿಗೆ, ಇದು ತುಂಬಾ ಸೂಕ್ತವಾಗಿ ಬರುತ್ತದೆ ಎಂದು ಶಾಸ್ತ್ರಿ ಫಾಕ್ಸ್ ಕ್ರಿಕೆಟ್‌ಗೆ ತಿಳಿಸಿದರು.
ಒಂದೊಂದು ಸರಣಿಯನ್ನು ತೆಗೆದುಕೊಳ್ಳಿ ಎಂದು ನಾನು ಹೇಳುತ್ತೇನೆ. ಇನ್ನೂ ಬಹಳ ದೂರವಿದೆ. ಆಶಾದಾಯಕವಾಗಿರಿ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಬಗ್ಗೆ ಯೋಚಿಸಿ, ಈ ನಿಟ್ಟಿನಲ್ಲಿ ಮನಸ್ಥಿತಿ ಇರಲಿ ಎಂದು ಸಲಹೆ ನೀಡಿರುವ ರವಿಶಾಸ್ತ್ರಿ, ವಿರಾಟ್ ಮತ್ತು ರೋಹಿತ್ ಆಡುವುದನ್ನು ಆನಂದಿಸದಿದ್ದರೆ ತಮ್ಮ ODI ವೃತ್ತಿಜೀವನಕ್ಕೆ ವಿದಾಯ ಹೇಳಲು ನಿರ್ಧರಿಸಬಹುದು ಎಂದು ಹೇಳಿದರು.
"ಭಾರತ ಟಿ20 ವಿಶ್ವಕಪ್ ಗೆದ್ದಾಗ ಅವರು ಟಿ20 ಕ್ರಿಕೆಟ್ ನ್ನು ಹೇಗೆ ತೊರೆದರು ಎಂಬುದನ್ನು ನೀವು ನೋಡಬಹುದು. ಅವರಲ್ಲಿ ಮೂವರು ರವೀಂದ್ರ, ಜಡೇಜಾ, ಕೊಹ್ಲಿ ಮತ್ತು ರೋಹಿತ್ ವಿದಾಯ ಹೇಳಿದರು. "ರೋಹಿತ್‌ನಂತೆ ವಿರಾಟ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದರು. ಅವರು ನಿವೃತ್ತಿಯಾಗಲು ಯಾರೂ ಕೇಳಿರಲಿಲ್ಲ. ಅವರು ತಮ್ಮದೇ ಆದ ನಿರ್ಧಾರದಿಂದ ನಿವೃತ್ತಿ ಘೋಷಿಸಿದರು. ಏಕದಿನ ಕ್ರಿಕೆಟ್ ನಲ್ಲೂ ಅವರೂ ಇದೇ ರೀತಿ ತೀರ್ಮಾನ ತೆಗೆದುಕೊಳ್ಳಬಹುದು ಅನಿಸುತ್ತದೆ. ಒಂದು ವೇಳೆ ಏಕದಿನ ಕ್ರಿಕೆಟ್ ನ್ನು ಅವರು ಎಂಜಾಯ್ ಮಾಡದಿದ್ದಲ್ಲಿ, ಫಾರ್ಮ್ ಕೆಟ್ಟದಿದ್ದರೆ, ಅವರು ನಿರ್ಧಾರ ಕೈಗೊಳ್ಳಬಹುದು ಎಂದು ಶಾಸ್ತ್ರಿ ಹೇಳಿದರು.
Advertisement