
ಇಂದೋರ್: ಭಾರತ ತಂಡದ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ಕುರಿತಾದ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಅವರು ಸಧ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ಸ್ವತಃ ಅವರ ಗೆಳೆಯ , ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಸ್ಪಷ್ಟನೆ ನೀಡಿದ್ದಾರೆ.
ಈ ಸುದ್ದಿಯನ್ನು ಸ್ವತಃ ಪಾಲಶ್ ಮುಚ್ಛಲ್ ಅವರೇ ಇಂದೋರ್ ಸ್ಟೇಟ್ ಪ್ರೆಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಿಸಿದ್ದಾರೆ. ಪಾಲಶ್ ಮುಚ್ಛಲ್ ಅವರು 30 ವರ್ಷ ವಯಸ್ಸಿನವರಾಗಿದ್ದು, ಸಂಗೀತ ನಿರ್ದೇಶಕರಾಗಿದ್ದಾರೆ. ಕಾರ್ಯಕ್ರಮದಲ್ಲಿ ಸ್ಮೃತಿಯೊಂದಿಗಿನ ಸಂಬಂಧದ ಬಗ್ಗೆ ಕೇಳಿದ್ದಕ್ಕೆ ಮಾತನಾಡಿದ ಅವರು ತಾವಿಬ್ಬರು ಶೀಘ್ರದಲ್ಲೇ ಇಂದೋರ್ನಲ್ಲಿ ಮದುವೆಯಾಗುತ್ತೇವೆ ಎಂದು ನಾನು ಹೇಳಲು ಬಯಸುವ ಏಕೈಕ ವಿಷಯ ಎಂದು ಹೇಳುವ ಮೂಲಕ ತಮ್ಮ ಸಂಬಂಧದ ಬಗ್ಗೆ ಖಚಿತ ಪಡಿಸಿದ್ದಾರೆ.
ಸ್ಮೃತಿ ಮಂಧಾನ ಭಾರತ ಮಹಿಳಾ ತಂಡದ ಉಪನಾಯಕಿಯಾಗಿದ್ದು, ಲೆಫ್ಟ್‌ಹ್ಯಾಂಡ್ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಪಾಲಶ್ ಮುಚ್ಛಲ್ ಅವರೊಂದಿಗೆ ಪ್ರೀತಿ ಸಂಬಂಧದ ಗಾಸಿಪ್ಗಳು ಕೇಳಿಬರುತ್ತಲೇ ಇವೆ. ಇಬ್ಬರೂ ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಜೊತೆಯಾಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಆದರೆ ಮೊದಲ ಬಾರಿ ಮದುವೆ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.
ಸ್ಮೃತಿ ಅವರು ಸದ್ಯ ಇಂದೋರ್‌ನಲ್ಲೇ ಇದ್ದು, ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ 2025ರಲ್ಲಿ ಭಾರತ ತಂಡ ಪ್ರತಿನಿಧಿಸುತ್ತಿದ್ದಾರೆ. ಇಂದು (ಅಕ್ಟೋಬರ್ 19) ಹೋಳ್ಕರ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯ ನಡೆಯಲಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಭಾರತಕ್ಕೆ ಸ್ಮೃತಿ ಬ್ಯಾಟಿಂಗ್ ಮಹತ್ವದ ಪಾತ್ರವಹಿಸಲಿದೆ.
Advertisement