ICC: ಪುರುಷರ ವಿಶ್ವಕಪ್ ಟ್ರೋಫಿಗಿಂತಲೂ ಮಹಿಳೆಯರ ವಿಶ್ವಕಪ್ ಬಹುಮಾನ ಹಣ ದುಪ್ಪಟ್ಟಾಯ್ತು!

ಸೆಪ್ಟೆಂಬರ್ 30ರಿಂದ ಪ್ರಾರಂಭವಾಗುವ 13ನೇ ಮಹಿಳಾ ಕ್ರಿಕೆಟ್ ವಿಶ್ವಕಪ್ ಆವೃತ್ತಿಯನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿವೆ. ಒಟ್ಟಾರೆಯಾಗಿ, ಈ ಎಂಟು ತಂಡಗಳ ಪಂದ್ಯಾವಳಿಯಲ್ಲಿ ಬಹುಮಾನದ ಮೊತ್ತವು ಸುಮಾರು ಮೂರು ಪಟ್ಟು ಹೆಚ್ಚಾಗಿದೆ.
Team India
ಟೀಂ ಇಂಡಿಯಾ
Updated on

ಮಹಿಳಾ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡವು ಪಂದ್ಯಾವಳಿಯ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ಬಹುಮಾನದ ಹಣವನ್ನು ಪಡೆಯಲಿದೆ. ಇದು ಕಳೆದ ಆವೃತ್ತಿಯಲ್ಲಿ 1.32 ಮಿಲಿಯನ್ ಡಾಲರ್ (ರೂ. 11.65 ಕೋಟಿ) ನಿಂದ 4.48 ಮಿಲಿಯನ್ ಡಾಲರ್ (ರೂ 39.55 ಕೋಟಿ) ಗೆ ಏರಿದೆ. ಜಯ್ ಶಾ ನೇತೃತ್ವದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಈ ಘೋಷಣೆ ಮಾಡಿದೆ.

ಸೆಪ್ಟೆಂಬರ್ 30ರಿಂದ ಪ್ರಾರಂಭವಾಗುವ 13ನೇ ಮಹಿಳಾ ಕ್ರಿಕೆಟ್ ವಿಶ್ವಕಪ್ ಆವೃತ್ತಿಯನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿವೆ. ಒಟ್ಟಾರೆಯಾಗಿ, ಈ ಎಂಟು ತಂಡಗಳ ಪಂದ್ಯಾವಳಿಯಲ್ಲಿ ಬಹುಮಾನದ ಮೊತ್ತವು ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಐಸಿಸಿ ಈ ಮೆಗಾ ಈವೆಂಟ್‌ಗೆ ಒಟ್ಟು 13.88 ಮಿಲಿಯನ್ ಡಾಲರ್ (ಸುಮಾರು ರೂ 122.5 ಕೋಟಿ) ಬಹುಮಾನದ ಹಣವನ್ನು ಘೋಷಿಸಿದೆ. ಇದು 2023ರಲ್ಲಿ ನಡೆದ ಪುರುಷರ ವಿಶ್ವಕಪ್‌ಗಿಂತ 34 ಕೋಟಿ ರೂ. ಹೆಚ್ಚು. ಭಾರತದಲ್ಲಿ ನಡೆದ ಆ ಪಂದ್ಯಾವಳಿಯ ಬಹುಮಾನದ ಮೊತ್ತ 10 ಮಿಲಿಯನ್ (ಸುಮಾರು ರೂ. 88.21 ಕೋಟಿ) ಆಗಿತ್ತು.

ಐಸಿಸಿ ಮಹಿಳಾ ಕ್ರಿಕೆಟ್‌ಗೆ ಹೊಸ ಮಾನದಂಡವನ್ನು ನಿಗದಿಪಡಿಸಿದೆ. ಏಕೆಂದರೆ ಚಾಂಪಿಯನ್ 44.8 ಮಿಲಿಯನ್ ಡಾಲರ್ ದಾಖಲೆಯ ಬಹುಮಾನದ ಹಣವನ್ನು ಪಡೆಯುತ್ತಾರೆ. ನ್ಯೂಜಿಲೆಂಡ್‌ನಲ್ಲಿ ಆಡಿದ ಕೊನೆಯ ಮಹಿಳಾ ಏಕದಿನ ವಿಶ್ವಕಪ್‌ನ ಒಟ್ಟು ಬಹುಮಾನದ ಮೊತ್ತ ಸುಮಾರು ರೂ. 31 ಕೋಟಿ ಮತ್ತು ಈ ರೀತಿಯಾಗಿ ಈಗ ಈ ಮೊತ್ತವನ್ನು ಸುಮಾರು ಶೇಕಡಾ 297ರಷ್ಟು ಹೆಚ್ಚಿಸಲಾಗಿದೆ. ಮಹಿಳಾ ಏಕದಿನ ವಿಶ್ವಕಪ್‌ನ ಒಟ್ಟು ಬಹುಮಾನದ ಮೊತ್ತವು ಐಸಿಸಿ ಪುರುಷರ ಏಕದಿನ ವಿಶ್ವಕಪ್ 2023ರ ಬಹುಮಾನದ ಮೊತ್ತಕ್ಕಿಂತ ಹೆಚ್ಚಾಗಿದೆ. ಇದು ಒಟ್ಟು 10 ಮಿಲಿಯನ್ ಡಾಲರ್ (ಸುಮಾರು ರೂ. 88.26 ಕೋಟಿ) ಬಹುಮಾನದ ಮೊತ್ತವನ್ನು ಹೊಂದಿತ್ತು. ಮಹಿಳಾ ಏಕದಿನ ವಿಶ್ವಕಪ್‌ನ ರನ್ನರ್ ಅಪ್ ತಂಡವು ಈಗ 2.24 ಮಿಲಿಯನ್ ಡಾಲರ್ (ಸುಮಾರು ರೂ. 19.77 ಕೋಟಿ) ಪಡೆಯಲಿದ್ದು, ಸೆಮಿಫೈನಲ್‌ನಲ್ಲಿ ಸೋತ ತಂಡಗಳು 1.12 ಮಿಲಿಯನ್ ಡಾಲರ್ (ಸುಮಾರು ರೂ. 9.89 ಕೋಟಿ) ಪಡೆಯಲಿವೆ.

Team India
'ಸಿಕ್ಸ್ ಪ್ಯಾಕ್, ವಯಸ್ಸು ಫಿಟ್ನೆಸ್‌ನ ಸರಿಯಾದ ಅಳತೆಯಲ್ಲ: ಯಶಸ್ವಿಯಾಗಿ YoYo test ಮುಗಿಸಿದ ರೋಹಿತ್ ಶರ್ಮಾ

ಐಸಿಸಿ ಈ ಕ್ರಮವು ಮಹಿಳಾ ಕ್ರಿಕೆಟ್‌ನ ಜನಪ್ರಿಯತೆಯನ್ನು ಹೆಚ್ಚಿಸುವ ಮತ್ತು ಅದನ್ನು ಪುರುಷರ ಕ್ರಿಕೆಟ್‌ಗೆ ಸಮನಾಗಿ ತರುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ. ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಮಹಿಳಾ ಕ್ರಿಕೆಟ್‌ಗೆ ಆದ್ಯತೆ ನೀಡುವತ್ತ ಇದು ಒಂದು ಹೆಜ್ಜೆಯಾಗಿದೆ ಎಂದು ಹೇಳಿದರು. ಈ ಘೋಷಣೆಯು ಮಹಿಳಾ ಕ್ರಿಕೆಟ್‌ನ ಪ್ರಯಾಣದಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ. ಬಹುಮಾನದ ಮೊತ್ತದಲ್ಲಿ ಈ ನಾಲ್ಕು ಪಟ್ಟು ಹೆಚ್ಚಳವು ಮಹಿಳಾ ಕ್ರಿಕೆಟ್‌ಗೆ ಒಂದು ಐತಿಹಾಸಿಕ ಕ್ಷಣವಾಗಿದೆ ಮತ್ತು ಅದರ ದೀರ್ಘಕಾಲೀನ ಅಭಿವೃದ್ಧಿಗೆ ನಮ್ಮ ಸ್ಪಷ್ಟ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಸಂದೇಶ ಸರಳವಾಗಿದೆ, ಮಹಿಳಾ ಕ್ರಿಕೆಟಿಗರು ವೃತ್ತಿಪರವಾಗಿ ಕ್ರೀಡೆಯನ್ನು ಮುಂದುವರಿಸಲು ಆರಿಸಿಕೊಂಡರೆ ಅವರನ್ನು ಪುರುಷರಂತೆ ಸಮಾನವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿದಿರಬೇಕು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com