
ದುಬೈ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನವನ್ನು ಬಗ್ಗುಪಡಿದ ಭಾರತ ಆಪರೇಷನ್ ಸಿಂಧೂರ್ ಬಳಿಕ ಮತ್ತೊಂದು ಸೋಲಿನ ರುಚಿ ತೋರಿಸಿದೆ.
ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು 'ಆಪರೇಷನ್ ಸಿಂಧೂರ' ಹಿನ್ನೆಲೆಯಲ್ಲಿ ಪಂದ್ಯ ಬಹಿಷ್ಕರಿಸಬೇಕೆಂಬ ಒತ್ತಡದ ನಡುವೆ ನಡೆದ ಪಂದ್ಯದಲ್ಲಿ ಭಾರತ ಕ್ರಿಕೆಟ್ ಮೂಲಕವೂ ಪಾಕಿಸ್ತಾನಕ್ಕೆ ಮತ್ತೊಂದು ಪೆಟ್ಟು ನೀಡಿದೆ.
ಟಾಸ್ ಸಂದರ್ಭದಲ್ಲಿ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಅಘಾ ಅವರೊಂದಿಗೆ ಹಸ್ತಲಾಘವ ಮಾಡದ ಸೂರ್ಯ ಕುಮಾರ್ ಯಾದವ್, ಗೆಲುವು ಖಚಿತವಾಗುತ್ತಿದ್ದಂತೆಯೇ ತಮ್ಮ ನಡೆಯನ್ನು ಮಾತಿನ ಮೂಲಕ ಸಮರ್ಥಿಸಿಕೊಂಡಿದ್ದಾರೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, ಈ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು ಹಾಗೂ ಭಾರತೀಯ ಸೇನಾ ಪಡೆಗಳಿಗೆ ಅರ್ಪಿಸುವುದಾಗಿ ಹೇಳಿದರು.
ಸಾಕಷ್ಟು ಶೌರ್ಯವನ್ನು ತೋರಿದ ನಮ್ಮ ಎಲ್ಲಾ ಸಶಸ್ತ್ರ ಪಡೆಗಳಿಗೆ ನಾವು ಗೆಲುವನ್ನು ಅರ್ಪಿಸಲು ಬಯಸುತ್ತೇವೆ. ಅವರು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸವಿದೆ. ಅವರನ್ನು ನಗಿಸಲು ಅವಕಾಶ ಸಿಕ್ಕಾಗಲೆಲ್ಲಾ ಮೈದಾನದಲ್ಲಿ ಮತ್ತಷ್ಟು ಚೆನ್ನಾಗಿ ಆಡುತ್ತೇವೆ ಎಂದು ಹೇಳಿದರು. ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು.
ಹ್ಯಾಂಡ್ ಶೇಕ್ ಮಾಡದನ್ನು ಸಮರ್ಥಿಸಿಕೊಂಡ ಯಾದವ್: ಪಾಕ್ ನಾಯಕನೊಂದಿಗೆ ಹಸ್ತಲಾಘವ ಮಾಡದಿದ್ದನ್ನು ಸಮರ್ಥಿಸಿಕೊಂಡ ಸೂರ್ಯ ಕುಮಾರ್ ಯಾದವ್, "ನಮ್ಮ ಸರ್ಕಾರ ಮತ್ತು ಬಿಸಿಸಿಐ, ನಾವು ಒಟ್ಟಿಗೆ ಇದ್ದೇವೆ. ಎಲ್ಲಾ ಮರೆತು ಇಲ್ಲಿಗೆ ಬಂದಿದ್ದೇವೆ. ಆಟವಾಡಲು ಮಾತ್ರ ಇಲ್ಲಿಗೆ ಬಂದಿದ್ದು, ನಾವು ಅವರಿಗೆ ಸರಿಯಾದ ಉತ್ತರವನ್ನು ನೀಡಿದ್ದೇವೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
ಸೂರ್ಯ ಕುಮಾರ್ ಗೆ ಜನ್ಮದಿನದ ಗಿಫ್ಟ್:
ಏಳು ವಿಕೆಟ್‌ಗಳ ಗೆಲುವು ಸೂರ್ಯಕುಮಾರ್‌ಗೆ ಜನ್ಮದಿನದ ಗಿಫ್ಟ್ ಆಗಿದೆ. ಆಡಿರುವ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಭಾರತ ಏಷ್ಯಾಕಪ್‌ನಲ್ಲಿ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮಾಜಿ ಚಾಂಪಿಯನ್‌ಗಳು ಶುಕ್ರವಾರ ತಮ್ಮ ಅಂತಿಮ ಲೀಗ್-ಹಂತದ ಪಂದ್ಯದಲ್ಲಿ ಓಮನ್‌ನನ್ನು ಎದುರಿಸಲಿದ್ದಾರೆ.
Advertisement