
ದುಬೈ: ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕ್ ಆಟಗಾರರಿಗೆ ಹ್ಯಾಂಡ್ ಶೇಕ್ ನೀಡದ ಭಾರತೀಯ ಆಟಗಾರರ ವರ್ತನೆ ತೀವ್ರ ಚರ್ಚೆಗೆ ಗ್ರಾಸವಾಗಿರುವಂತೆಯೇ ICC ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸುವಂತೆ ಪಾಕಿಸ್ತಾನ ಒತ್ತಾಯಿಸಿದೆ.
ಒಂದು ವೇಳೆ ಅವರನ್ನು ವಜಾಗೊಳಿಸದಿದ್ದಲ್ಲಿ ಟೂರ್ನಿಯಿಂದ ಹೊರ ನಡೆಯುವುದಾಗಿ ಬೆದರಿಕೆಯೊಡ್ಡಿದೆ. ಹೀಗೆ ಮಾಡಿದರೆ ಪಾಕಿಸ್ತಾನಕ್ಕೆ ನಷ್ಟ. ಇಂತಹ ಕ್ರಮಕ್ಕೆ ಮುಂದಾಗುವ ದೇಶಕ್ಕೆ 12 ರಿಂದ 16 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟ ಉಂಟಾಗುತ್ತದೆ ಎನ್ನಲಾಗುತ್ತಿದೆ.
ಏಷ್ಯಾ ಕ್ರಿಕೆಟ್ ಕೌನ್ಸಿಲ್ ನ ವಾರ್ಷಿಕ ಆದಾಯದ ಶೇ. 75 ರಷ್ಟನ್ನು ತಲಾ ಶೇ. 15 ರಂತೆ ಐದು ಟೆಸ್ಟ್ ಆಡುವ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಹಂಚಿಕೊಳ್ಳುತ್ತವೆ. ಉಳಿದ ಶೇ. 25 ರಷ್ಟು ಆದಾಯವನ್ನು ಸಹಯೋಗದ ರಾಷ್ಟ್ರಗಳು ಹಂಚಿಕೊಳ್ಳುತ್ತವೆ. ಪ್ರಸಾರದ ಹಕ್ಕು, ವಿವಿಧ ಪ್ರಯೋಜಕತ್ವ(sponsorships) ಟಿಕೆಟ್ ಮಾರಾಟ ಮತ್ತಿತರ ಮೂಲಗಳಿಂದ ಆದಾಯ ಬರುತ್ತದೆ.
ಪಾಕಿಸ್ತಾನಕ್ಕೆ ಎಷ್ಟು ನಷ್ಟ: ಈ ಟೂರ್ನಿಯಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಂದಕ್ಕೆ ಅಂದಾಜು ರೂ. 12 ರಿಂದ 16 ಮಿಲಿಯನ್ ಆದಾಯ ಬರುತ್ತದೆ. ಒಂದು ವೇಳೆ ಟೂರ್ನಿಯಿಂದ ಹೊರಗುಳಿದರೆ ಅಷ್ಟು ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ PCBಗೆ ನಷ್ಟ ಹೊರತು, ಬಿಸಿಸಿಐಗೆ ಏನು ಆಗುವುದಿಲ್ಲ.
ಟೂರ್ನಿ ಪ್ರಸಾರಕ್ಕಾಗಿ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ ಇಂಡಿಯಾ (SPNI) ACC ಯೊಂದಿಗೆ 170 ಮಿಲಿಯನ್ ಡಾಲರ್ ಗೆ ಎಂಟು ವರ್ಷಗಳ ಒಪ್ಪಂದಕ್ಕೆ (2024-2031) ಸಹಿ ಹಾಕಿದೆ. ಇದು ಮಹಿಳೆಯರ ಏಷ್ಯಾ ಕಪ್ ಮತ್ತು ಅಂಡರ್-19 ಪುರುಷರ ಏಷ್ಯಾ ಕಪ್ ಪ್ರಸಾರವನ್ನು ಸಹ ಒಳಗೊಂಡಿದೆ. ಪಾಕಿಸ್ತಾನದಲ್ಲಿ ಆಂತರಿಕ ಮತ್ತು ಮಾದಕ ದ್ರವ್ಯ ನಿಯಂತ್ರಣಕ್ಕಾಗಿ ಫೆಡರಲ್ ಸಚಿವ ಹುದ್ದೆಯನ್ನು ಹೊಂದಿರುವ ನಖ್ವಿ ಪ್ರಸ್ತುತ ACC ಮುಖ್ಯಸ್ಥರೂ ಆಗಿದ್ದಾರೆ. ಈಗ ICC ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ತೆಗೆಯಬೇಕು ಎಂದು ಒತ್ತಾಯಿಸುತ್ತಿರುವ ನಖ್ವಿ, ವಾರ್ಷಿಕ 227 ಮಿಲಿಯನ್ ಡಾಲರ್ ಯೋಜಿತ್ ಬಜೆಟ್ ನಲ್ಲಿ ಪಾಕಿಸ್ತಾನ 16 ಮಿಲಿಯನ್ ಅಮೆರಿಕನ್ ಡಾಲರ್ ಕಳೆದುಕೊಳ್ಳುವ ಅಪಾಯ ಮಾಡಬಹುದೇ?
ಅಲ್ಲದೇ ಅಧಿಕೃತ ಪ್ರಸಾರಕರ ಕೋಪವನ್ನು ಎದುರಿಸಬೇಕಾಗುತ್ತದೆ,ಅದು ಒಪ್ಪಿಕೊಂಡ ಶುಲ್ಕವನ್ನು ಪಾವತಿಸಲು ನಿರಾಕರಿಸಬಹುದು ಎಂದು ಮೂಲಗಳು ಹೇಳಿವೆ.
SPNI ಎಂಟು ವರ್ಷಗಳ ಪ್ರಸಾರ ಒಪ್ಪಂದ:
ಟೂರ್ನಿ ಪ್ರಸಾರಕ್ಕಾಗಿ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ ಇಂಡಿಯಾ (SPNI) ACC ಯೊಂದಿಗೆ 170 ಮಿಲಿಯನ್ ಡಾಲರ್ ಗೆ ಎಂಟು ವರ್ಷಗಳ ಒಪ್ಪಂದಕ್ಕೆ (2024-2031) ಸಹಿ ಹಾಕಿದೆ. ಇದು ಮಹಿಳೆಯರ ಏಷ್ಯಾ ಕಪ್ ಮತ್ತು ಅಂಡರ್-19 ಪುರುಷರ ಏಷ್ಯಾ ಕಪ್ ಪ್ರಸಾರವನ್ನು ಸಹ ಒಳಗೊಂಡಿದೆ. ಪಾಕಿಸ್ತಾನದಲ್ಲಿ ಆಂತರಿಕ ಮತ್ತು ಮಾದಕ ದ್ರವ್ಯ ನಿಯಂತ್ರಣಕ್ಕಾಗಿ ಫೆಡರಲ್ ಸಚಿವ ಹುದ್ದೆಯನ್ನು ಹೊಂದಿರುವ ನಖ್ವಿ ಪ್ರಸ್ತುತ ACC ಮುಖ್ಯಸ್ಥರೂ ಆಗಿದ್ದಾರೆ.
ಈಗ ICC ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ತೆಗೆಯಬೇಕು ಎಂದು ಒತ್ತಾಯಿಸುತ್ತಿರುವ ನಖ್ವಿ, ವಾರ್ಷಿಕ 227 ಮಿಲಿಯನ್ ಡಾಲರ್ ಯೋಜಿತ್ ಬಜೆಟ್ ನಲ್ಲಿ ಪಾಕಿಸ್ತಾನ 16 ಮಿಲಿಯನ್ ಅಮೆರಿಕನ್ ಡಾಲರ್ ಕಳೆದುಕೊಳ್ಳುವ ಅಪಾಯ ಮಾಡಬಹುದೇ? ಅಲ್ಲದೇ ಅಧಿಕೃತ ಪ್ರಸಾರಕರ ಕೋಪವನ್ನು ಎದುರಿಸಬೇಕಾಗುತ್ತದೆ,ಅದು ಒಪ್ಪಿಕೊಂಡ ಶುಲ್ಕವನ್ನು ಪಾವತಿಸಲು ನಿರಾಕರಿಸಬಹುದು ಎಂದು ಮೂಲಗಳು ಹೇಳಿವೆ.
Advertisement