
ನಾಯಿ ಮಾಂಸ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹಾಗೂ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ನಡುವಣ ಮತ್ತೊಮ್ಮೆ ವಾಗ್ಯುದ್ದ ಭುಗಿಲೆದಿದ್ದೆ.
ವಿವಾದಾತ್ಮಕ ಹೇಳಿಕೆ ನೀಡುವುದಕ್ಕೆ ಹೆಸರುವಾಸಿಯಾಗಿರುವ ಅಫ್ರಿದಿ, ಪಠಾಣ್ ತಮ್ಮ ವಿರುದ್ಧ ಕೆಲವು ಹೇಳಿಕೆಗಳನ್ನು ನೀಡಿದ್ದು, ಅವರು ತಮ್ಮೊಂದಿಗೆ ಮುಖಾಮುಖಿಯಾಗಿ ಮಾತನಾಡುವಂತೆ ಸವಾಲು ಹಾಕಿದ್ದಾರೆ.
ನನ್ನ ಮುಂದೆ ಯಾರೇ ಮಾತನಾಡಲಿ, ಅವರಿಗೆ ನಾನು ಕೂಡಾ ಪರಿಪೂರ್ಣ ಉತ್ತರವನ್ನು ನೀಡಬಲ್ಲೆ ಎಂದು ಅಫ್ರಿದಿ ಪಾಕಿಸ್ತಾನ ಟಿವಿ ಚಾನೆಲ್ ನಲ್ಲಿ ಹೇಳಿದ್ದಾರೆ. ಏಷ್ಯಾ ಕಪ್ 2025 ರಲ್ಲಿ 'ಹ್ಯಾಂಡ್‌ಶೇಕ್' ಮಾಡದ ಭಾರತೀಯ ಆಟಗಾರರ ವರ್ತನೆಯನ್ನು ಶಾಹಿದ್ ಅಫ್ರಿದಿ ಟೀಕಿಸಿದ್ದರು.
ಈ ನಡುವೆ ಮತ್ತೆ ನಾಯಿ ಮಾಂಸ ವಿವಾದ ಕೆಣಕಿರುವ ಅಫ್ರಿದಿ, ಮುಖಾಮುಖಿಯಾಗಿ ಮಾತನಾಡುವವರನ್ನು ಸ್ಪರ್ಧಿ ಅಂದುಕೊಳ್ಳುತ್ತೇನೆ. ಬೆನ್ನ ಹಿಂದೆ ಯಾರೂ ಬೇಕಾದ್ರು ಮಾತನಾಡಿಕೊಳ್ಳಬಹುದು. ಆದರೆ, ನನ್ನ ಮುಂದೆ ಮಾತನಾಡಬಲ್ಲರನ್ನು ಎದುರಿಸಲು ನಾನು ಇಷ್ಟಪಡುತ್ತೇನೆ. ಪರಿಪೂರ್ಣ ಪ್ರತ್ಯುತ್ತರವನ್ನೂ ನೀಡಬಲ್ಲೆ ಎಂದು ಅಫ್ರಿದಿ ಪಾಕಿಸ್ತಾನಿ ಟಿವಿ ಚಾನೆಲ್ ಸಮಾ ಟಿವಿಯಲ್ಲಿ ಹೇಳಿದರು.
ಏನಿದು ನಾಯಿ ಮಾಂಸ ವಿವಾದ?
2006 ರಲ್ಲಿನ ಇಬ್ಬರು ಕ್ರಿಕೆಟಿಗರ ನಡುವಿನ ಬಿಸಿ ಸಂಭಾಷಣೆಯನ್ನು ಪಠಾಣ್ ಬಹಿರಂಗಪಡಿಸಿದಾಗ ವಿವಾದ ಹುಟ್ಟಿಕೊಂಡಿತ್ತು. 2006ರ ಪ್ರವಾಸದ ಸಮಯದಲ್ಲಿ ನಾವು ಕರಾಚಿಯಿಂದ ಲಾಹೋರ್ ಗೆ ವಿಮಾನದಲ್ಲಿ ಹೋಗಿದ್ದೇವು. ಎರಡೂ ತಂಡಗಳು ಒಟ್ಟಿಗೆ ಪ್ರಯಾಣಿಸುತ್ತಿದ್ದೇವು. ಅಫ್ರಿದಿ ಬಂದು ನನ್ನ ತಲೆ ಮೇಲೆ ಕೈ ಇಟ್ಟು ನನ್ನ ಕೂದಲನ್ನು ಹಾಳು ಮಾಡಿದರು. ನಾನು ಹೇಗಿದ್ದೇನೆ ಎಂದು ಅವರು ನನ್ನನ್ನು ಕೇಳಿದರು. ಆಗ ಅಬ್ದುಲ್ ರಜಾಕ್ ನನ್ನ ಜೊತೆ ಕುಳಿತಿದ್ದರು. ನಾನು ಅವರನ್ನು ಕೇಳಿದೆ ಇಲ್ಲಿ ಯಾವ ರೀತಿಯ ಮಾಂಸ ಲಭ್ಯವಿದೆ ಎಂದು. ಅವರು ವಿವಿಧ ಪ್ರಾಣಿಗಳ ಮಾಂಸ ಲಭ್ಯವಿದೆ ಎಂದು ಹೇಳಿದರು. ಇದಾದ ನಂತರ ನಾನು ನಾಯಿ ಮಾಂಸ ಲಭ್ಯವಿದೆಯೇ ಎಂದು ಕೇಳಿದೆ. ನನ್ನ ಮಾತು ಕೇಳಿ ಅಚ್ಚರಿಗೊಂಡ ರಜಾಕ್, ನನ್ನ ಹೇಳಿಕೆಯ ಹಿಂದಿನ ಕಾರಣವನ್ನು ಕೇಳಿದರು. ನಾನು ಅಫ್ರಿದಿಯ ಕಡೆಗೆ ಬೆರಳು ತೋರಿಸಿ ಅವನು ನಾಯಿ ಮಾಂಸ ತಿಂದಿದ್ದಾನೆ. ಅದಕ್ಕಾಗಿ ಅವನು ಒಂದೇ ರೀತಿ ಬೊಗಳುತ್ತಿದ್ದಾನೆ ಎಂದು ಪಠಾಣ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದೀಗ ಅದೇ ವಿಚಾರವನ್ನು ಮತ್ತೆ ಸಂದರ್ಶಕರು ಅಫ್ರಿದಿ ಕೇಳಿದಾಗ, ಇರ್ಫಾನ್ ವಿರುದ್ಧ ಕಿಡಿಕಾರಿದ್ದಾರೆ.
Advertisement