
ನವದೆಹಲಿ: ಸೂರ್ಯ ಕುಮಾರ್ ಯಾದವ್ ಅವರ ನಾಯಕತ್ವದಡಿ ಏಷ್ಯಾ ಕಪ್ ಟೂರ್ನಿಯಲ್ಲಿ ವೇಗಿ ಬೂಮ್ರಾ ಅವರ ಪವರ್ ಪ್ಲೇ ವರ್ಕ್‌ಲೋಡ್ ನ್ನು ಮಾಜಿ ಆಟಗಾರ ಮೊಹಮ್ಮದ್ ಕೈಫ್ ಪ್ರಶ್ನಿಸಿದ ನಂತರ ಅವರಿಬ್ಬರ ನಡುವೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಾಗ್ಯುದ್ದ ನಡೆಯುತ್ತಿದೆ.
ಕೈಫ್ ಅವರ ಹೇಳಿಕೆಯನ್ನು ಬೂಮ್ರಾ ತೀಕ್ಷ್ಣವಾಗಿ ತಳ್ಳಿಹಾಕಿದ್ದಾರೆ. ಮೊದಲು ನಿಖರವಾಗಿರಲಿಲ್ಲ. ಮತ್ತೇ ನಿಖರವಾಗಿಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಿಡಿಕಾರಿದ್ದಾರೆ.
ಇದಕ್ಕೆ ಸಮಧಾನಕಾರ ರೀತಿಯಲ್ಲಿ ಪ್ರತಿಕ್ರಿಯಿಸಿರುವ ಮೊಹಮ್ಮದ್ ಕೈಫ್, ಹಿತೈಷಿ ಹಾಗೂ ಅಭಿಮಾನಿಯಾಗಿ ಕ್ರಿಕೆಟ್ ನ್ನು ದೃಷ್ಟಿಯಲ್ಲಿಟ್ಟುಕೊಂಡು ಆ ರೀತಿ ಹೇಳಿದ್ದೇನೆ. ನೀವು ಭಾರತ ಕ್ರಿಕೆಟ್ ತಂಡದ ದೊಡ್ಡ ಮ್ಯಾಚ್ ವಿನ್ನರ್, ತ್ರಿವರ್ಣ ಧ್ವಜದ ಜೆರ್ಸಿ ಧರಿಸಿ ಮೈದಾನದಲ್ಲಿ ಆಡುವಾಗ ಎಲ್ಲವನ್ನೂ ನೀಡಲು ಏನು ಬೇಕು ಎಂದು ನನಗೆ ತಿಳಿದಿದೆ ಎಂದು ಹೇಳಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಮೊಹಮ್ಮದ್ ಕೈಫ್, ರೋಹಿತ್ ಶರ್ಮಾ ನಾಯಕರಾಗಿದ್ದಾಗ ಬೂಮ್ರಾ ಪವರ್ ಪ್ಲೇನಲ್ಲಿ ಒಂದು, ಮಧ್ಯದ ಓವರ್ ಗಳಲ್ಲಿ ಒಂದು ಮತ್ತು ಡೆತ್ ಓವರ್ ಗಳಲ್ಲಿ ಎರಡು ಓವರ್ ಮಾಡುತ್ತಿದ್ದರು ಎಂದು ಕೈಫ್ ಹೇಳಿಕೆ ನಂತರ ವಿವಾದ ಹುಟ್ಟಿಕೊಂಡಿತ್ತು.
ಬೂಮ್ರಾ ಗಾಯದ ಸಮಸ್ಯೆ ತಪ್ಪಿಸಲು ದೇಹ ಉತ್ತಮ ಅನಿಸಿದಾಗ ಬೌಲಿಂಗ್ ಮಾಡಲು ಆದ್ಯತೆ ನೀಡುತ್ತಾರೆ. ಪವರ್‌ಪ್ಲೇ ನಂತರ ಬುಮ್ರಾ ಅವರ ಒಂದು ಓವರ್ ದೊಡ್ಡ ತಂಡಗಳ ವಿರುದ್ಧ ಭಾರತಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂದು ಕೈಫ್ ಹೇಳಿದ್ದರು.
Advertisement