Asia CUP 2025: ಭಾರತ-ಪಾಕ್ ಫೈನಲ್ ಪಂದ್ಯಕ್ಕೂ ಮುನ್ನ ಕಿಡಿ ಹೊತ್ತಿಸಿದ PCB ಮುಖ್ಯಸ್ಥ! ಏನಿದು?

ಬ್ಯಾಲೆನ್ಸಿಂಗ್ ನಡವಳಿಕೆಯ ಹಿಂದಿರುವ ಕಾರಣ ವಿವರಿಸಲು ಇನ್ನು ಎಷ್ಟು ಸಮಯದ ಅಗತ್ಯವಿದೆ? ಎಂದು ಸಾಮಾಜಿಕ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
PCB Chief Naqvi
ಮೊಹ್ಸಿನ್ ನಖ್ವಿ
Updated on

ದುಬೈ: ಏಷ್ಯಾ ಕಪ್ 2025 ರ ಬಹು ನಿರೀಕ್ಷಿತ ಭಾರತ- ಪಾಕಿಸ್ತಾನ ನಡುವಿನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಸೋಶಿಯಲ್ ಮೀಡಿಯಾದದಲ್ಲಿ ಒಳರ್ಥದ (CRYPTIC) ಪೋಸ್ಟ್ ಮೂಲಕ ಕಿಡಿ ಹೊತ್ತಿಸಿದ್ದಾರೆ.

ಬ್ಯಾಲೆನ್ಸಿಂಗ್ ನಡವಳಿಕೆಯ ಹಿಂದಿರುವ ಕಾರಣ ವಿವರಿಸಲು ಇನ್ನು ಎಷ್ಟು ಸಮಯದ ಅಗತ್ಯವಿದೆ? ಎಂದು ಸಾಮಾಜಿಕ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಪಾಕಿಸ್ತಾನದ ಟಾರ್ಗೆಟ್ ಹಾಗೂ ಸಮಯದ ಬಗ್ಗೆ ಹೇಳಿರುವಂತೆ ಅನುಮಾನ ಹುಟ್ಟುಹಾಕಿದೆ.

ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡುವಣ ಬಿಕ್ಕಟ್ಟು ಉಂಟಾಗಿರುವಂತೆಯೇ ನಖ್ವಿ ಅವರ ಈ ಪೋಸ್ಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಈ ವಾರದ ಆರಂಭದಲ್ಲಿ ಲೀಗ್ ಹಂತದಲ್ಲಿ ಪಾಕ್ ವಿರುದ್ಧ ಗೆದ್ದ ಪಂದ್ಯವನ್ನು ಪಹಲ್ಗಾಮ್ ದಾಳಿಯಲ್ಲಿ ಸಂತ್ರಸ್ತರು ಹಾಗೂ ಭಾರತದ ಸಶಸ್ತ್ರ ಪಡೆಗೆ ಅರ್ಪಿಸಿದ ವಿರುದ್ಧ ಪಾಕಿಸ್ತಾನ ದೂರು ದಾಖಲಿಸಿದ ನಂತರ ಐಸಿಸಿ ಎದುರು ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ವಿಚಾರಣೆ ಎದುರಿಸಿದ್ದರು. ಅಲ್ಲದೇ ಅವರಿಗೆ ಪಂದ್ಯ ಶುಲ್ಕದ ಶೇ.30 ರಷ್ಟು ದಂಡ ವಿಧಿಸಲಾಗಿತ್ತು.

PCB Chief Naqvi
Asia Cup 2025: ವಿಜೇತ ತಂಡಕ್ಕೆ ACC ಮುಖ್ಯಸ್ಥ ನಖ್ವಿಯಿಂದ ಟ್ರೋಫಿ ವಿತರಣೆ; ಭಾರತದ ನಿಲುವೇನು?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com