

ಚೆನ್ನೈ: ಶುಕ್ರವಾರ ನಡೆದ ಐಸಿಸಿ ಟಿ-20 ವಿಶ್ವಕಪ್ ನ ಎ ಗುಂಪಿನ ಪಂದ್ಯದಲ್ಲಿ ನೆದರ್ ಲ್ಯಾಂಡ್ಸ್ ವಿರುದ್ಧ 93 ರನ್ ಗಳಿಂದ ಅಮೆರಿಕ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು.
ಮೊನಾಂಕ್ ಪಟೇಲ್ 36, ಶಾಯನ್ ಜಹಂಗೀರ್ 20, ಸಾಯಿತೇಜ್ ಮುಕ್ಕಮಲ್ಲಾ 79, ಸಂಜಯ್ ಕೃಷ್ಣಮೂರ್ತಿ 1 ಹಾಗೂ ಶುಭಂ ರಂಜಾನೆ 48, ಮಿಲಿಂದ್ ಕುಮಾರ್ 3 ರನ್ ಗಳಿಸುವುದರೊಂದಿಗೆ ನೆದರ್ ಲ್ಯಾಂಡ್ಸ್ ಗೆಲ್ಲಲು 196 ರನ್ ಗಳ ಗುರಿ ನೀಡಿತು.
ಈ ಗುರಿ ಬೆನ್ನಟ್ಟಿದ್ದ ನೆದರ್ ಲ್ಯಾಂಡ್ಸ್ ಪರ ಆರಂಭಿಕ ಆಟಗಾರ ಮ್ಯಾಕ್ಸ್ ಡಿ ಡೌಡ್ 13, ಬಾಸ್ ಡಿ ಲೀಡ್ 23, ನಾಯಕ ಸ್ಕಾಟ್ ಎಡ್ವರ್ಡ್ಸ್ 20 ರನ್ ಗಳಿಸಿದ್ದು ಹೊರತುಪಡಿಸಿದರೆ ಉಳಿದ ಯಾವುದೇ ಆಟಗಾರರು ಎರಡಂಕಿ ದಾಟಲಿಲ್ಲ. ಇದರಿಂದಾಗಿ ನೆದರ್ ಲ್ಯಾಂಡ್ಸ್ 15. 5 ಓವರ್ ಗಳಲ್ಲಿ 103 ರನ್ ಗಳಿಸಿ ಆಲೌಟ್ ಆಯಿತು.
Advertisement