

ವಾಷಿಂಗ್ಟನ್: ಮುಂಬರುವ 2026 ರ T20 ವಿಶ್ವಕಪ್‌ಗೆ ತೆರಳಲು ಪಾಕಿಸ್ತಾನಿ ಮೂಲದ ನಾಲ್ವರು ಆಟಗಾರರಿಗೆ ಭಾರತದಿಂದ ವೀಸಾ ನಿರಾಕರಿಸಲಾಗಿದೆ ಎಂಬ ಹೇಳಿಕೆಯನ್ನು USA ಕ್ರಿಕೆಟ್ ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ. ವೀಸಾ ವಿಳಂಬವಾಗಿದೆ ಮತ್ತು ನಿರಾಕರಿಸಲಾಗಿಲ್ಲ ಎಂದು ಅವರು ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿಯೊಂದು ಹೇಳಿದೆ.
2026 ರ ಟಿ-20 ವಿಶ್ವಕಪ್‌ಗಾಗಿ ಫೆಬ್ರವರಿ 7 ರಿಂದ ಶ್ರೀಲಂಕಾದೊಂದಿಗೆ ಜಂಟಿಯಾಗಿ ಆತಿಥ್ಯ ವಹಿಸಲಿರುವ ಭಾರತಕ್ಕೆ ಪ್ರಯಾಣಿಸಲು ಪಾಕಿಸ್ತಾನಿ ಮೂಲದ ನಾಲ್ವರು ಆಟಗಾರರಾದ ಶಯಾನ್ ಜಹಾಂಗೀರ್, ಮೊಹಮ್ಮದ್ ಮೊಹ್ಸಿನ್ ಮತ್ತು ಎಹ್ಸಾನ್ ಆದಿಲ್ ಅವರಿಗೆ ವೀಸಾ ನಿರಾಕರಿಸಲಾಗಿದೆ ಎಂದು USA ವೇಗಿ ಅಲಿ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದಾರೆ ಎಂದು ಟೆಲಿಕಾಂ ಏಷ್ಯಾ ಸ್ಪೋರ್ಟ್ ವರದಿಯಲ್ಲಿ ಹೇಳಿತ್ತು.
"ವೀಸಾ ಸಮಸ್ಯೆಯನ್ನು ICC ನಡೆಸುತ್ತಿರುವ USA ಕ್ರಿಕೆಟ್ ಅಸೋಸಿಯೇಷನ್ ನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸುತ್ತೇನೆ ಮತ್ತು ವೀಸಾವನ್ನು ತಿರಸ್ಕರಿಸಲಾಗಿದೆ ಎಂದು ಒಬ್ಬ ಆಟಗಾರ ತಪ್ಪಾಗಿ ತಿಳಿಸಿದ್ದಾರೆ ಎಂದು ಯುಎಸ್ಎ ಅಧಿಕಾರಿಯೊಬ್ಬರು www.telecomasia.net ಗೆ ತಿಳಿಸಿದ್ದಾರೆ.
ವೀಸಾ 'ವಿಳಂಬ'ಗೊಂಡಿರುವ ಎಲ್ಲಾ ನಾಲ್ವರು ಪಾಕಿಸ್ತಾನದಲ್ಲಿ ಹುಟ್ಟಿದ್ದು, ಪ್ರಸ್ತುತ ಅಮೆರಿಕದ ನಾಗರಿಕರಾಗಿದ್ದಾರೆ. ಆದಾಗ್ಯೂ, ಭಾರತದ ವೀಸಾ ನಿಯಮಗಳಡಿ ಪಾಕಿಸ್ತಾನದಲ್ಲಿ ಜನಿಸಿದ ಪ್ರಜೆಗಳು ತಮ್ಮ ಹುಟ್ಟಿದ ದೇಶದ ಪಾಸ್‌ಪೋರ್ಟ್‌ನಲ್ಲಿ ವೀಸಾಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ವೀಸಾ ವಿಳಂಬವಾಗಿದೆ. ಆದರೆ ತಿರಸ್ಕರಿಸಲಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತ ಮತ್ತು ಶ್ರೀಲಂಕಾ ಟ್ವೆಂಟಿ-20 ವಿಶ್ವಕಪ್ ಆತಿಥ್ಯ ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ವೀಸಾ ಸಮಸ್ಯೆ ತಲೆ ಎತ್ತುವ ಸಾಧ್ಯತೆಯಿದೆ.
Advertisement