

ನವಿ ಮುಂಬಯಿ: ಶುಕ್ರವಾರ ರಾತ್ರಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ನ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ RCB ಮಹಿಳಾ ತಂಡ 32 ರನ್‌ಗಳಿಂದ ಗೆದ್ದು ಬೀಗಿತು.
ಈ ಪಂದ್ಯದಲ್ಲಿ 5 ವಿಕೆಟ್ ಕತ್ತ ಕನ್ನಡತಿ ಶ್ರೇಯಾಂಕ ಪಾಟೀಲ್ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದರು. ಶ್ರೇಯಾಂಕ ಪಾಟೀಲ್ ಪಂದ್ಯದಲ್ಲಿ 3.5 ಓವರ್ ಬೌಲಿಂಗ್ ಮಾಡಿ 23 ರನ್ ಬಿಟ್ಟುಕೊಟ್ಟು ಐದು ವಿಕೆಟ್‌ಗಳನ್ನು ಪಡೆದರು.
ಈ ಮೂಲಕ ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಐದು ವಿಕೆಟ್‌ಗಳನ್ನು ಪಡೆದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮೊದಲು ಬ್ಯಾಟಿಂಗ್ ಮಾಡಿದ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ರಾಧಾ ಯಾದವ್ ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸಿತು. ಈ ಸವಾಲಿನ ಗುರಿ ಬೆನ್ನಟ್ಟಿದ ಗುಜರಾತ್ ತಂಡವನ್ನು ಶ್ರೇಯಾಂಕ ಪಾಟೀಲ್ ಕಟ್ಟಿ ಹಾಕಿದರು. ಶ್ರೇಯಾಂಕ ಅವರಿಗೆ ಲಾರೆನ್ ಬೆಲ್ ಉತ್ತಮ ಸಾಥ್ ನೀಡಿದರು. ಪರಿಣಾಮ ಗುಜರಾತ್ ತಂಡ 18.5 ಓವರ್‌ಗಳಲ್ಲಿ 150 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರ್‌ಸಿಬಿ ನೀಡಿದ 183 ರನ್ಗಳ ಗುರಿ ಬೆನ್ನಟ್ಟಿದ ಗುಜರಾತ್ ಆರಂಭದಲ್ಲೇ ಸ್ಪೋಟಕ ಬ್ಯಾಟರ್ಗಳಾದ ಸೋಫಿ ಡಿವೈನ್ (8) ಮತ್ತು ಬೆತ್ ಮೂನಿ (27) ವಿಕೆಟ್ ಕಳೆದುಕೊಂಡಿತ್ತು. ಇಲ್ಲಿಂದ ಪಂದ್ಯದ ಮೇಲೆ ಆರ್‌ಸಿಬಿ ಬೌಲರ್ಸ್ ಹಿಡಿತ ಸಾಧಿಸಿದರು. ಜೊತೆಗೆ ಗುಜರಾತ್ ತಂಡದ ಮೇಲೆ ಒತ್ತಡ ಹೇರುವ ಮೂಲಕ ವಿಕೆಟ್ ಬೇಟೆಯಾಡಿದರು.
ಬಳಿಕ ಬಂದ ಕನಿಕಾ ಅಹುಜಾ (16) ಜಾರ್ಜಿಯಾ ವೇರ್‌ಹ್ಯಾಮ್ (13) ಕಾಶ್ವೀ ಗೌತಮ್ (18) ಮತ್ತು ತನುಜಾ ಕನ್ವರ್ (21) ರನ್ ಗಳಿಸಿದದ್ದು ಹೊರತುಪಡಿಸಿದರೆ ಉಳಿದ ಯಾವುದೇ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಆರ್ ಸಿಬಿ 32 ರನ್ ಗಳಿಂದ ಗೆಲುವು ಸಾಧಿಸಿತು.
Advertisement