ಮುಮ್ಮಡಿ ಕೃಷ್ಣಾರಾಜ ಒಡೆಯರ್ ಕಾಲದಲ್ಲಿ ಒಂದು ಘಟನೆ ನಡೆಯುತ್ತೆ. ರಾಜ ಮಹಾರಾಜರಿಗೆ ಬ್ರಿಟಿಷ್ ನವರು ಬಂದಾಗ ಅವರನ್ನ ಮೆಚ್ಚಿಸುವುದು ಬಹಳ ಮುಖ್ಯವಾಗಿರುತ್ತದೆ. ಒಮ್ಮೆ ಬ್ರಿಟಿಷ್ ಅಧಿಕಾರಿಯೊಬ್ಬ ಮಹಾರಾಜರೊಂದಿಗೆ ಬಂಡೀಪುರಕ್ಕೆ ತೆರಳಿ ಹುಲಿಗಳನ್ನು ನೋಡಿಕೊಂಡು ಬರುತ್ತಾರೆ. ತದ ನಂತರ ಆ ಬ್ರಿಟಿಷನು ರಾಜನಿಗೆ, ಈಗ ಕಂಡಂತಹ ಹುಲಿಯ ಮೇಲೆ ಯುದ್ಧ ಮಾಡುವಂತಹ ಪೈಲ್ವಾನ್ ನಿಮ್ಮಲ್ಲಿ ಇದ್ದಾರಾ ಎಂದು ಪ್ರಶ್ನಿಸುತ್ತಾನೆ. ಆಗ ಮಹಾರಾಜರು ಇದ್ದಾರೆ ಎಂದು ಹೇಳುತ್ತಾರೆ. ಹಾಗಾದರೆ, ನಾನು ಅದನ್ನು ನೋಡಬೇಕು, ಕಾಳಗಕ್ಕೆ ವ್ಯವಸ್ಥೆ ಮಾಡಿ ಎಂದು ಹೇಳುತ್ತಾನೆ. ಇದರಿಂದ ಚಿಂತಾಗ್ರಾಂತರಾದ ರಾಜರು ಯೋಚನೆಯಲ್ಲಿದ್ದಾಗ, ಒಬ್ಬ ಪೈಲ್ವಾನ್ ಬಂದು ನಾನು ಹುಲಿಯೊಂದಿಗೆ ಯುದ್ಧ ಮಾಡುತ್ತೇನೆಂದು ಹೇಳುತ್ತಾನೆ. ಇದಕ್ಕೆ ಮಣಿದ ರಾಜರು ಕಾಳಗಕ್ಕೆ ವ್ಯವಸ್ಥೆ ಮಾಡುತ್ತಾರೆ. ಈ ಕಾಳಗದಲ್ಲಿ ಆ ಪೈಲ್ವಾನ್ ಹುಲಿಯನ್ನು ಕೊಲ್ಲುತ್ತಾನೆ. ಇದರಿಂದ ಖುಷಿಯಾದ ಮಹಾರಾಜರು ಆ ಜಟ್ಟಿಯನ್ನು ಹೆಗಲ ಮೇಲೆ ಹೊತ್ತು ಆನೆ ಮೇಲೆ ಕೂರಿಸಿ ಮೈಸೂರಿನಲ್ಲಿ ಮೆರವಣಿಗೆ ಮಾಡಿ ಆತನಿಗೆ ಗಂಗಾಧರ ಸುಬ್ಬಾ ಜಿಟ್ಟಪ್ಪ ಎನ್ನುವ ನಾಮಧೇಯ ನೀಡಿದರಂತೆ.