ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪುಣ್ಯಾರಾಧನೆ

ರಾಜವಂಶಸ್ಥ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ...
ರಾಜವಂಶಸ್ಥ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ವಾರ್ಷಿಕ ಪುಣ್ಯಾರಾಧನೆಯ ಧಾರ್ಮಿಕ ಪೂಜಾ ವಿಧಿ ವಿಧಾನ
ರಾಜವಂಶಸ್ಥ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ವಾರ್ಷಿಕ ಪುಣ್ಯಾರಾಧನೆಯ ಧಾರ್ಮಿಕ ಪೂಜಾ ವಿಧಿ ವಿಧಾನ

ಮೈಸೂರು: ರಾಜವಂಶಸ್ಥ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ವಾರ್ಷಿಕ ಪುಣ್ಯಾರಾಧನೆ ಅಂಗವಾಗಿ ಅರಮನೆಯಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನ ಸೋಮವಾರ ನೆರವೇರಿತು.

ಅರಮನೆ ಆವರಣದಲ್ಲಿನ ದೇವಸ್ಥಾನಗಳು, ಚಾಮುಂಡಿಬೆಟ್ಟ, ಮೇಲುಕೋಟೆ ಮತ್ತು ನಂಜನಗೂಡು ಸೇರಿದಂತೆ ನಗರದ 126 ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ, ಆ ಎಲ್ಲ ದೇವಸ್ಥಾನಗಳಿಂದ ಅರಮನೆಗೆ ಪ್ರಸಾದ ಸಲ್ಲಿಸಲಾಯಿತು. ಅರಮನೆ ಆವರಣದಲ್ಲಿ ಒಡೆಯರ್ ಅವರ ಭಾವಚಿತ್ರಕ್ಕೆ ಅವರ ಪತ್ನಿ ಪ್ರಮೋದಾದೇವಿ ಒಡೆಯರ್ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಿದರು.

ಸಂಪ್ರದಾಯದಂತೆ ಅರಮನೆಯಲ್ಲಿನ ಕಲ್ಯಾಣ ಮಂಟಪದಲ್ಲಿ ಬ್ರಹ್ಮತಂತ್ರ ಸ್ವಂತ್ರ ಪರಕಾಲಮಠದ ಶ್ರೀ ಅಭಿನವ ವಾಗೀಶ ಸ್ವಾಮೀಜಿಗಳ ಪಾದಪೂಜೆ ನಡೆಯಿತು. ಶ್ರೀಕಂಠದತ್ತೆ ಒಡೆಯರ್ ಅವರ ಸಹೋದರಿಯರಾದ ಇಂದ್ರಾಕ್ಷಿದೇವಿ, ಮೀನಾಕ್ಷಿದೇವಿ, ಸಂಬಂಧಿ ಚದುರಂಗ ಕಾಂತರಾಜೇ ಅರಸ್ ಸೇರಿದಂತೆ ರಾಜಮನೆತನದವರು, ಗಣ್ಯರು, ಆಹ್ವಾನಿತರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com