ನಿಮ್ಮ ಆಶಯವೇ ನಿರ್ಣಯ, ನೇತೃತ್ವ ವಹಿಸಿ ಮಹದೇವ

ಶಿಕ್ಷಣ ಮಾಧ್ಯಮವಾಗಿ ಕನ್ನಡ ಕಡ್ಡಾಯಗೊಳಿಸಿ ಎಂಬ ಒಂದೇ ನಿರ್ಣಯವನ್ನು ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ...
ದೇವನೂರು ಮಹದೇವ & ಪುಂಡಲೀಕ ಹಾಲಂಬಿ
ದೇವನೂರು ಮಹದೇವ & ಪುಂಡಲೀಕ ಹಾಲಂಬಿ

ಬೆಂಗಳೂರು: ಶಿಕ್ಷಣ ಮಾಧ್ಯಮವಾಗಿ ಕನ್ನಡ ಕಡ್ಡಾಯಗೊಳಿಸಿ ಎಂಬ ಒಂದೇ ನಿರ್ಣಯವನ್ನು ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳುತ್ತೇವೆ. ದೇವನೂರು ಮಹದೇವ ಅವರೇ, ಬನ್ನಿ ಅಧ್ಯಕ್ಷತೆ ವಹಿಸಿ. ನಿಮ್ಮ ನೇತೃತ್ವದಲ್ಲಿ ಸಮ್ಮೇಳನವನನೇ ಆಂದೋಲನವಾಗಿ ಪರಿವರ್ತಿಸೋಣ. ಸಂಭ್ರಮದ ನುಡಿ ಹಬ್ಬವೇ ಬೇಡ ಎಂದರೆ ಹೇಗೆ? ಸಾಹಿತ್ಯ ಸಮ್ಮೇಳನದಿಂದಲೇ ಆಂದೋಲನ ಆರಂಭವಾಗಲಿ.

ಹತ್ತನೇ ತರಗತಿಯವರಗೆ ಕನ್ನಡವನ್ನು ಕಲಿಕಾ ಮಾಧ್ಯಮವಾಗಿ ಕಡ್ಡಾಯಗೊಳಿಸುವ ವರೆಗೆ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಳ್ಳುವುದಿಲ್ಲ. ಕಸಾಪ ಸಮ್ಮೇಳನ ನಡೆಸುವುದನ್ನು ಬಿಟ್ಟು ಹೋರಾಟಕ್ಕಿಳಿದರೆ ನೇತೃತ್ವ ವಹಿಸುತ್ತೇನೆ ಎಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಆಹ್ವಾನ ನಿರಾಕರಿಸಿರುವ ಸಾಹಿತಿ ದೇವನೂರು ಮಹದೇವ ಅವರಿಗೆ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ತಮ್ಮ ಮಿತಿಯಲ್ಲಿ ನೀಡಿರುವ ಭರವಸೆ ಮಿಶ್ರಿತ 'ಆಹ್ವಾನ' ಇದು.

ದೇವನೂರು ಪ್ರತಿಪಾದಿಸಿರುವ  ವಿಚಾರಕ್ಕೆ ಸಾಹಿತ್ಯ ಪರಿಷತ್‌ನ ಸಂಪೂರ್ಣ ಸಮ್ಮತಿ ಇದೆ. ಆದರೆ, ಸಮ್ಮೇಳನ ನಿಲ್ಲಿಸುವುದರಿಂದ ಕನ್ನಡವು ಕಡ್ಡಾಯ ಕಲಿಕಾ ಮಾಧ್ಯಮವಾಗಿ  ಅನುಷ್ಠಾನಗೊಳ್ಳುತ್ತದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ದೇವನೂರು ಅವರ ಮನವೊಲಿಸಲು ಹಾಲಂಬಿ ನೀಡಿರುವ ಈ ಹೇಳಿಕೆ ಕನ್ನಡ ಸಾಹಿತ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆಯುವ ಎಲ್ಲ ಲಕ್ಷಣಗಳು ಇವೆ,

ದೇವನೂರು ಮಹದೇವ ಅವರ ಮನೆಗೆ ತಾವೇ ಖುದ್ದಾಗಿ ತೆರಳಿ ಭಾಷಾ ಮಾಧ್ಯಮ ವಿಚಾರದಲ್ಲಿ ಸಾಹಿತ್ಯ ಪರಿಷತ್‌ನ ಧೋರಣೆ ಏನು ಎಂಬುದನ್ನು ವಿಷದಪಡಿಸಲು ಮುಂದಾಗಿರುವ ಹಾಲಂಬಿ, ನುಡಿಹಬ್ಬ ನಿರಾಕರಣೆಯಿಂದ ಕನ್ನಡ ಭಾಷಾ ಮಾಧ್ಯಮ ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ನುಡಿಹಬ್ಬವನ್ನೇ ಆಂದೋಲನಕ್ಕೆ ವೇದಿಕೆಯಾಗಿ  ಪರಿವರ್ತಿಸೋಣ ಎಂದು ಸಲಹೆ ನೀಡಿದ್ದಾರೆ. ವಿವಾದದ ಹಿನ್ನೆಲೆಯಲ್ಲಿ ಕನ್ನಡಪ್ರಭದ ಜತೆ ಮಾತನಾಡಿದ ಹಾಲಂಬಿ, ದೇವನೂರು ಅವರ ಮನೆಗೆ ಭೇಟಿ ನೀಡಿ ನಾನೇ ಅವರ ಜತೆ ಚರ್ಚೆ ನಡೆಸುತ್ತೇನೆ ಎಂದಿದ್ದಾರೆ.

-ರಾಘವೇಂದ್ರ ಭಟ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com