
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಥಾಮಸ್ ಡಿಸೋಜ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಣೇಶ್(ನಿರ್ಮಾಪಕರ ವಲಯ), ಜಿ.ವೆಂಕಟೇಶ್(ವಿತರಕರ ವಲಯ), ಎಚ್.ಅನಂತಮೂರ್ತಿ(ಪ್ರದರ್ಶಕ ವಲಯ) ಆಯ್ಕೆಯಾಗಿದ್ದು, ನಿರ್ಮಾಪಕ ಬಾ.ಮ.ಹರೀಶ್, ನಿರ್ದೇಶಕ ಬಿ.ಆರ್.ಕೇಶವ ಹಾಗೂ ಆರ್.ಸುಂದರ್‌ರಾಜ್ ಗೌರವ ಕಾರ್ಯದರ್ಶಿಗಳಾಗಿದ್ದಾರೆ.
ಕೆ.ವಿ.ವೆಂಕಟೇಶ್ ಗೌರವ ಖಜಾಂಚಿಯಾಗಿದ್ದು, ಕಾರ್ಯಕಾರಿ ಸಮಿತಿಗೆ ನಿರ್ಮಾಪಕ ವಲಯದಿಂದ ಉಮೇಶ್ ಬಣಕಾರ್, ಸಾ.ರಾ.ಗೋವಿಂದು, ಕೆಂ.ಎಂ.ವೀರೇಶ್, ಪ್ರಮೀಳಾ ಜೋಷಾಯ್, ಎಸ್.ದಿನೇಶ್, ಆನಂದ್ ಪಿ.ರಾಜು, ಸಿ.ಆರ್.ಮನೋಹರ್, ಜಯಸಿಂಹ ಮುಸುರಿ, ಕೃಷ್ಣೇಗೌಡ, ರಾಕ್‌ಲೈನ್ ವೆಂಕಟೇಶ್, ಕೃಷ್ಣ ಜೆ.ಜಿ ಮತ್ತು ಅಶ್ವಿನಿ ರಾಮ್ ಪ್ರಸಾದ್ ಹಾಗೂ ವಿತರಕ ವಲಯದಿಂದ ಕುಪ್ಪಸ್ವಾಮಿ, ಡಿ.ಎಸ್.ಪ್ರಕಾಶ್, ಆರ್.ಗಣೇಶ್, ವಿಜಯ್ ಕುಮಾರ್, ತುಕಾರಾಂ ನಾಯಕ್, ಸಿ.ನಾಗರಾಜ್, ಕೆ.ಸಿ.ನಾಗರಾಜು, ಲಿಂಗರಾಜು, ಕೆಂಪಯ್ಯ ಮತ್ತು ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ.
ಪ್ರದರ್ಶಕ ವಲಯದಿಂದ ಕೆ.ಎಸ್.ಶ್ರೀಧರ್, ರುದ್ರಪ್ಪ ಕೆ.ಜೆ., ನಾರಾಯಣ ರಾವ್ ಮತ್ತು ಎಸ್.ಎನ್.ಚಂದ್ರಶೇಖರ್ ಸದಸ್ಯರಾಗಿದ್ದಾರೆ.
Advertisement