ಚಾಮುಂಡೇಶ್ವರಿ ಕ್ಷೇತ್ರಕ್ಕೆ ೧೨೦ ಕೋಟಿ ಕೊಟ್ಟ ಮುಖ್ಯಮಂತ್ರಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಜೀವನಕ್ಕೆ ಆಕಾರ ನೀಡಲು ಸಹಾಯ ಮಾಡಿರುವ ಚಾಮುಂಡೇಶ್ವರಿ ವಿಧಾನಸಭಾ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಜೀವನಕ್ಕೆ ಆಕಾರ ನೀಡಲು  ಸಹಾಯ ಮಾಡಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಅನುದಾನದ ಸಿಂಹಪಾಲು ದೊರಕಿದೆ. ಚಾಮುಂಡೇಶ್ವರಿಯ ವಿವಿಧ ಯೋಜನೆಗಳಿಗೆ ಸಿ ಎಂ ೧೨೦ ಕೋಟಿ ರೂ ಅನುದಾನ ನೀಡಿದ್ದಾರೆ.

೧೨೦ ಕೋಟಿಯಲ್ಲಿ, ೫೩ ಕೋಟಿ ಪಿ ಡಬ್ಲ್ಯು ಡಿ ಕೆಲಸಗಳಿಗೆ, ೩೧ ಕೋಟಿ ಕುಡಿಯುವ ನೀರಿನ ಯೋಜನೆಗೆ ಹಾಗೂ ೨೯.೩೫ ಕೋಟಿ ಆಶ್ರಯ ಮನೆಗಳ ಯೋಜನೆಗೆ ಎಂದು ಮಾಜಿ ಜಿಲ್ಲಾ ಪರಿಷದ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಅವರ ನಿಕಟವರ್ತಿ ಕೆ ಮರಿಗೌಡ ವರದಿಗಾರರಿಗೆ ತಿಳಿಸಿದ್ದಾರೆ.

ಬಹುತೇಕ ಪಿ ಡಬ್ಲ್ಯು ಡಿ ಕೆಲಸಗಳು ಕ್ಷೇತ್ರದ ರಸ್ತೆಗಳ ಅಗಲೀಕರಣ ಮತ್ತು ದುರಸ್ತೀಕರಣವಾಗಿದ್ದು, ಕುಡಿಯುವ ನೀರಿನ ಯೋಜನೆ ೧೦೦ ಹಳ್ಳಿಗಳಿಗೆ ಸಹಕಾರಿಯಾಗಲಿದೆ. ಮಂಡಕಳ್ಳಿ ಗ್ರಾಮದ ೪೦.೩೨ ಎಕರೆ ಜಾಗದಲ್ಲಿ ಸುಮಾರು ೨೪೪೬ ಆಶ್ರಯ ಮನೆಗಳು ತಲೆ ಎತ್ತಲಿವೆ. ಈಗಾಗಲೇ ೧೦ ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು, ವಿವಿಧ ಯೋಜನೆಯಗಳ ಕಾರ್ಯ ಪ್ರಾರಂಭವಾಗಿದೆ.

ಉಂಡುವಾಡಿ ಕುಡಿಯುವ ಯೋಜನೆಗೆ ಸಿದ್ದರಾಮಯ್ಯನವರು ಶೀಘ್ರದಲ್ಲೆ ರಾಜ್ಯದ ೫೦% ಪಾಲನ್ನು ಬಿಡುಗಡೆ ಮಾಡಲಿದ್ದು, ಈ ಯೋಜನೆ ಯೆಲ್ವಾಲ, ಮೈಸೂರು ನಗರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕು ಸೇರಿದಂತೆ ೯೭ ಹಳ್ಳಿಗಳು ಪಲಾನುಭವಿಗಳಾಗಲಿವೆ ಎಂದು ಮರಿಗೌಡ ತಿಳಿಸಿದ್ದಾರೆ. "ಈ ಕ್ಷೇತ್ರದ ಜೊತೆ ವಿಶೇಷ ಸಂಬಂಧ ಹೊಂದಿರುವ ಸಿದ್ದರಾಮಯ್ಯನವರು, ಕ್ಷೇತ್ರಕ್ಕೆ ಏನಾದರು ಮಾಡಲು ಯಾವಾಗಲು ಆಸಕ್ತರಾಗಿದ್ದರು. ವಿಧಾನಸಭಾ ಅಧಿವೇಶನದ ನಂತರ ಯೋಜನೆಗಳ ಕಾರ್ಯ ವೃದ್ಧಿಯನ್ನು ಪರಿವೀಕ್ಷಣೆ ಮಾಡಲು ಸಭೆ ಕರೆಯಲಿದ್ದಾರೆ" ಎಂದಿದ್ದಾರೆ ಮರಿಗೌಡ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com