೧೦ ವರ್ಷಗಳ ನಂತರ ಪಶ್ಚಿಮ ಘಟ್ಟಗಳಿಗೆ ಮರಳಿದ ಜೇನು ನೊಣಗಳು

ಸುಮಾರು ೧೦ ವರ್ಷಗಳ ನಂತರ ಜೇನಿನ ನಾಡಾದ ಪಶ್ಚಿಮ ಘಟ್ಟಗಳಿಗೆ ಜೇನು ನೊಣಗಳು ಹಿಂದಿರುಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸುಳ್ಯಾ: ಸುಮಾರು ೧೦ ವರ್ಷಗಳ ನಂತರ ಜೇನಿನ ನಾಡಾದ ಪಶ್ಚಿಮ ಘಟ್ಟಗಳಿಗೆ ಜೇನು ನೊಣಗಳು ಹಿಂದಿರುಗಿವೆ. ಗೋಡಂಬಿ ತೋಟಗಳಲ್ಲಿ ಮತ್ತು ಇತರ ಬೆಳೆಗಳಿಗೆ ಟಿ-ಸೊಳ್ಳೆ ಎಂಬ ಸಾಮಾನ್ಯ ಕೀಟವನ್ನು ನಿಯಂತ್ರಿಸಲು ಎಗ್ಗಿಲ್ಲದೆ ಬಳಸುತ್ತಿದ್ದ ಎಂಡೊಸಲ್ಫಾನ್ ನಿಂದ ಜೇನು ನೊಣಗಳು ಸುರಕ್ಷಿತ ಜಾಗಕ್ಕೆ ವಲಸೆ ಹೋಗಿದ್ದವು.

೨೦೦೫ ರಲ್ಲೇ ಈ ಪ್ರದೇಶದಲ್ಲಿ ಎಂಡೋಸಲ್ಫಾನ್ ಬಳಕೆಯನ್ನು ನಿಷೇಧಿಸಲಾಗಿದ್ದರು ಕೂಡ ಇದರ ವ್ಯತಿರಿಕ್ತ ಪರಿಣಾಮ ಇತ್ತೀಚಿನವರೆಗೂ ಇದೆ.

"ಜೇನು ನೊಣಗಳು ಪಶ್ಚಿಮ ಘಟ್ಟದ ಗ್ರಾಮಗಳಾದ ಸುಳ್ಯಾ, ಬೆಳ್ತಂಗಡಿ ಮತ್ತು ಪುತ್ತೂರಿಗೆ ಯಾವಾಗ ಹಿಂದಿರುಗಿದವೊ ಗೊತ್ತಿಲ್ಲ, ಆದರೆ ನಮ್ಮ ಸದಸ್ಯರು ಮತ್ತೆ ಜೇನು ಸಾಕಾಣೆ ಪ್ರಾರಂಭಿಸಿದ್ದಾರೆ. ಇದರಿಂದ ಜೇನು ಸಾಕಾಣೆ ಡಬ್ಬಗಳು ಭರದಿಂದ ಮಾರಾಟವಾಗುತ್ತಿವೆ" ಎನ್ನುತ್ತಾರೆ ಪುತ್ತೂರಿನ ದಕ್ಷಿಣ ಕನ್ನಡ ಜೇನು ರೈತರ ಅಭಿವೃದ್ಧಿ ಸಹಕಾರ ಸಂಘದ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಗೌಡ.

ಜೇನು ನೊಣಗಳು ವಲಸೆ ಹೋಗಿದ್ದರಿಂದ ಸಾಲ ಪಡೆದು ಜೇನು ಸಾಗಾಣೆ ಉದ್ಯಮ ನಡೆಸುತ್ತಿದ್ದ ರೈತರು ಕಂಗೆಟ್ಟಿದ್ದರು. ಈಗ ಜೇನು ನೊಣಗಳು ಹಿಂದಿರುಗಿರುವುದು ಈ ರೈತರಿಗೆ ಹೊಸ ಹುರುಪು ಕೊಟ್ಟಿದೆ ಎನ್ನುತ್ತಾರೆ ಶ್ರೀಧರ್ ಗೌಡ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com