ಲಂಚ ಸ್ವೀಕಾರ: ಲೋಕಾ ಬಲೆಗೆ ದಾವಣಗೆರೆ ಕಂದಾಯ ಅಧಿಕಾರಿ

ದಾವಣಗೆರೆಯ ಚೆನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದ ಕಚೇರಿಯಲ್ಲಿ ಲಂಚ ಸ್ವೀಕಾರ ಮಾಡಿದ್ದರು...
ಲೋಕಾಯುಕ್ತ ಕಚೇರಿ
ಲೋಕಾಯುಕ್ತ ಕಚೇರಿ

ಚೆನ್ನಗಿರಿ: ಕಂದಾಯ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ದಾವಣಗೆರೆಯ ತ್ಯಾವಣಗಿ ಗ್ರಾಮದಲ್ಲಿ ನಡೆದಿದೆ.

ದಾವಣಗೆರೆಯ ಚೆನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದ ಕಚೇರಿಯಲ್ಲಿ ರೈತರೊಬ್ಬರಿಂದ ಲಂಚ ಸ್ವೀಕಾರ ಮಾಡಿದ್ದರು. ಚೆನ್ನಗಿರಿ ವೃತ್ತದ ಕಂದಾಯ ಅಧಿಕಾರಿ ಕುಬೇರ ನಾಯಕ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿರುವ ಅಧಿಕಾರಿ.

ದೊಡ್ಡಘಟ್ಟ ಗ್ರಾಮದ ರೈತ ಶಿವಕುಮಾರ್, ತಮ್ಮ ಖಾತೆಯನ್ನು ಬದಲಾವಣೆ ಮಾಡಿಕೊಡಬೇಕಾಗಿ ಮನವಿ ಮಾಡಿದ್ದರು. ಖಾತೆ ಬದಲಾವಣೆಗಾಗಿ ರೈತ ಶಿವಕುಮಾರ್, ಕಂದಾಯ ಅಧಿಕಾರಿ ಕುಬೇರ ನಾಯ್ಕ್ ಅವರಿಗೆ 4 ಸಾವಿರ ಲಂಚ ನೀಡಿದ್ದಾರೆ. ಈ ವೇಳೆ ಲೋಕಯುಕ್ತ ಅಧಿಕಾರಿಗಳು ಲಂಚ ಸ್ವೀಕರಿಸಿದ ಆರೋಪದ ಮೇಲೆ ಕುಬೇರ ನಾಯ್ಕ್‌ನನ್ನು ವಶಕ್ಕೆ ಪಡೆದಿದ್ದಾರೆ.

ಮೊದಲೇ ಮಾಹಿತಿ ತಿಳಿದಿದ್ದ ಲೋಕಾಯುಕ್ತ ಎಸ್ಪಿ ಲಿಂಗಾರೆಡ್ಡಿ ನೇತೃತ್ವದ ತಂಡ, ಕುಬೇರ್ ನಾಯ್ಕ್‌ನನ್ನು ವಶಕ್ಕೆ ತೆಗೆದುಕೊಂಡಿತು. ಇದೇ ವೇಳೆ ತ್ಯಾವಣಗಿಯ ಗ್ರಾಮ ಲೆಕ್ಕಿಗ ತಿರುಕಪ್ಪನನ್ನು ಸಾಹ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com