ಎತ್ತಿನಹೊಳೆ ಯೋಜನೆ: ತೀವ್ರಗೊಂಡ ವಿರೋಧ

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಿದೆ ..
ಪಶ್ಚಿಮ ಘಟ್ಟದ ಒಂದು ನೋಟ (ಸಾಂದರ್ಭಿಕ ಚಿತ್ರ)
ಪಶ್ಚಿಮ ಘಟ್ಟದ ಒಂದು ನೋಟ (ಸಾಂದರ್ಭಿಕ ಚಿತ್ರ)

ಹಾಸನ: ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಿದೆ ಎನ್ನಲಾಗಿರುವ ಎತ್ತಿನಹೊಳೆ ಯೋಜನೆಗೆ ರೈತರು, ಚುನಾಯಿತ ಪ್ರತಿನಿಧಿಗಳು ಮತ್ತು ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಸೋಮವಾರ ಸಕಲೇಶಪುರದಲ್ಲಿ ನೀರಾವರಿ ಇಲಾಖೆ ಆಯೋಜಿಸಿದ್ದ ಚರ್ಚೆಯಲ್ಲಿ, ಈ ಯೋಜನೆಯನ್ನು ಕೈಬಿಟ್ಟು ಆ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಪರ್ಯಾಯ ಕಂಡುಹಿಡಿಯುವಂತೆ ಸಣ್ಣ ಮತ್ತು ಭಾರಿ ನೀರಾವರಿ ಸಚಿವ ಎಂ ಬಿ ಪಾಟಿಲ್ ಅವರಿಗೆ ಆಗ್ರಹಿಸಿದ್ದಾರೆ.

ಸಕಲೇಶಪುರದ ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ಮಾತನಾಡಿ, ಸರ್ಕಾರ ಪಶ್ಚಿಮ ಘಟ್ಟಗಳಲ್ಲಿ ಈ ಯೋಜನೆ ಕೈಗೆತ್ತಿಕೊಂಡು ಬಿಕ್ಕಟ್ಟು ಸೃಷ್ಟಿಸುತ್ತಿದೆ ಎಂದು ಅಪಾದಿಸಿದ್ದಾರೆ.

ಈ ಪ್ರದೇಶದ ಜನರನ್ನು ಹಾಗು ಚುನಾಯಿತ ಪ್ರತಿನಿಧಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಸರ್ಕಾರ ಈ ಯೋಜನೆ ಕೈಗೆತ್ತಿಕೊಂಡಿದೆ ಎಂದು ದೂರಿರುವ ಪರಿಸರವಾದಿ ಹಾಗು ಜನಪದ ಹೋರಾಟ ಸಮಿತಿಯ ಅಧ್ಯಕ್ಷ ಎಚ್ ಎ ಕಿಶೋರ್ ಕುಮಾರ್ ಈ ಯೋಜನೆ ಪ್ರಾರಂಭಿಸುವುದಕ್ಕೂ ಮುಂಚೆ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕಿತ್ತು ಎಂದಿದ್ದಾರೆ.

ಈ ಯೋಜನೆ ಅವೈಜ್ಞಾನಿಕವಾಗಿದ್ದು, ಇದರಿಂದ ೧೦ ಟಿಎಂಸಿ ನೀರು ಕೂಡ ದೊರೆಯುವುದಿಲ್ಲ. ಆದುದರಿಂದ ಈ ಭಾಗದ ಜನ ಈ ಯೋಜನೆ ಪೂರ್ಣಗೊಳಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ದಶಕಗಳಿಂದ ತೊಂದರೆ ಅನುಭವಿಸುತ್ತಿರುವ ಈ ಭಾಗದ ರೈತರ ಮೂಲ ಸೌಕರ್ಯಗಳ ಬಗ್ಗೆ ಮೊದಲು ಸರ್ಕಾರ ಗಮನ ಹರಿಸಬೇಕು ಎಂದಿದ್ದಾರೆ ಪರಿಸರವಾದಿ ವಿಕ್ರಮ್ ಗೌಡ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com