
ಬೆಂಗಳೂರು: ಬಿಎಂಟಿಸಿ ಬಸ್ ಬಿಕರಿಗಿದೆ...! ಹೌದು, ಅದುಕೇವಲ ರು.5 ಲಕ್ಷಕ್ಕೆ. ತಮಾಷೆ ಆದರೂ ಸತ್ಯ! ಅದು 'ಮಾರಿಬಿಡಿ' ಎಂಬ ಅಡಿಬರಹದಿಂದ ಖ್ಯಾತವಾಗಿರುವ ಆನ್‌ಲೈನ್ ಮಾರಾಟ ಸಂಸ್ಥೆ ಒಎಲ್‌ಎಕ್ಸ್. ಇನ್(olx.in)ನಲ್ಲಿ.
ಫೋಟೋ ಕ್ಲಿಕ್ಕಿಸಿ, ಅಪ್‌ಲೋಡ್ ಮಾಡಿ, ಒಎಲ್‌ಎಕ್ಸ್‌ನಲ್ಲಿ ಮಾರಿಬಿಡಿ ಎಂಬ ಜಾಹೀರಾತನ್ನು ಕಂಡ ವ್ಯಕ್ತಿಯೊಬ್ಬ ಇತ್ತೀಚೆಗೆ ಗೀಜಗದ ಹಕ್ಕಿಗಳನ್ನು ಒಎಲ್‌ಎಕ್ಸ್. ಇನ್‌ನಲ್ಲಿ ಮಾರಾಟಕ್ಕಿಟ್ಟು ಪೊಲೀಸರ ಅತಿಥಿಯಾಗಿದ್ದ.
ಈಗ ಮೊನೀಷ್ ಎಂಬ ವ್ಯಕ್ತಿ ಸೆ.22ರಂದು ಬಿಎಂಟಿಸಿ ಬಸ್ (ಕೆಎ01 ಎಫ್ 3701) ಫೋಟೋವನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿ ಒಎಲ್‌ಎಕ್ಸ್. ಇನ್‌ನಲ್ಲಿ ಮಾರಾಟಕ್ಕೆ ಹಾಕಿದ್ದಾನೆ ಹಾಗೂ ಸಂಪರ್ಕಕ್ಕೆ ದೂ.ಸಂ.9964484066 ನೀಡಿದ್ದಾನೆ.
2015ರ ಮಾಡೆಲ್‌ನ ಬಿಎಂಟಿಸಿ ಬಸ್ ಗಂಟೆಗೆ 780 ಕಿ.ಮೀ ವೇಗದಲ್ಲಿ ಸಂಚರಿಸಲಿದೆ ಎಂದು ಹೇಳುವ ಮೂಲಕ ಸಂಸ್ಥೆಯನ್ನು ಹೀಯಾಳಿಸಿ ಅಪಹಾಸ್ಯ ಮಾಡಿದ್ದಾನೆ. ಆದರೆ ಇದು ಯಾವ ಅಧಿಕಾರಿಗಳ ಗಮನಕ್ಕೂ ಬಂದಿಲ್ಲ.
Advertisement