55 ವರ್ಷ ತುಂಬಿದ ಜನಪದ ಕಲಾವಿದರಿಗೆ ಮಾಸಾಶನ

ಮಾಸಾಶನವನ್ನು 55 ವರ್ಷ ಪೂರೈಸಿದ ಜನಪದ ಕಲಾವಿದರೆಲ್ಲರಿಗೂ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ...
ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ
ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು: ಮಾಸಾಶನವನ್ನು 55 ವರ್ಷ ಪೂರೈಸಿದ ಜನಪದ ಕಲಾವಿದರೆಲ್ಲರಿಗೂ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ  ಘೋಷಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ ಸೋಮವಾರ ಹಮ್ಮಿಕೊಂಡಿದ್ದ 2012 ಮತ್ತು 2013ನೇ  ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಮಾಸಾಶನ ನೀಡುವ ವಯಸ್ಸನ್ನು 3 ವರ್ಷ ಕಡಿತಗೊಳಿಸಿ, 55 ವರ್ಷಕ್ಕೆ ನಿಗದಿ ಪಡಿಸಲಾಗುವುದು. ಉಳಿಕೆಯಾಗಿದ್ದ ಮಾಸಾಶನವನ್ನು ಎಲ್ಲ ಕಲಾವಿದರನ್ನು ಮಾಸಾಶನಕ್ಕೆ ಆಯ್ಕೆ ಮಾಡಲಾಗುತ್ತಿತ್ತು. ಮುಂಬರುವ ವರ್ಷದಿಂದ ಹೆಚ್ಚು ಮಂದಿಯನ್ನು ಆಯ್ಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.


ಪ್ರತಿ ಜಿಲ್ಲೆಯಿಂದ 5 ಮಂದಿ ಕಲಾವಿದರನ್ನು ಗುರುತಿಸಿ ವಿಡಿಯೋ ಹಾಗೂ ಆಡಿಯೋ ದಾಖಲೆಗಳನ್ನು ಇಲಾಖೆ ನಿರ್ಮಿಸಲಿ ಎಂದು ಸಲಹೆ ನೀಡಿದರು. ವಸತಿ ರಹಿತ ಕಲಾವಿದರಿಗೆ ವಸತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಯೊಂದಿಗೆ ಚರ್ಚಿಸಲಾಗುವುದು. ಐಚ್ಛಿಕ ವಿಷಯವನ್ನಾಗಿ ಜಾನಪದವನ್ನು ಶಾಲಾಮಟ್ಟದಲ್ಲಿ ಅಳವಡಿಸಲು ಪರಿಶೀಲಿಸುವುದಾಗಿ ತಿಳಿಸಿದರು.
ಕಲಾವಿದ ಅಕಾಲ ಮರಣಕ್ಕೆ ತುತ್ತಾದಾಗ ಪರಿಹಾರ ನೀಡುವ ನಿಟ್ಟಿನಲ್ಲಿ ಚಿಂತಿಸಲಾಗುವುದು. ಜನಪದ ಕಲೆ ನಮ್ಮ ಪರಂಪರೆ ಬಿಂಬಿಸುತ್ತದೆ. ಇದನ್ನು ಉಳಿಸಿ ಬೆಳೆಸಬೇಕು. ಶೇ.90ಕ್ಕೂ ಹೆಚ್ಚು ಕಲಾವಿದರು ತಳ ಸಮುದಾಯದಿಂದ ಬಂದವರು. ಅವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ, ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕೂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ದ್ವೇಷ, ಅಸೂಯೆ ಹಾಗೂ ವಿಕೃತ ಸಮಾಜಕ್ಕೆ ಜನಪದವೇ ಸಿದ್ಧೌಷಧ. ಹಿಂದುಳಿದ ವರ್ಗದ ಶಾಶ್ವತ ಆಯೋಗ ಜಾತಿ ಸಮೀಕ್ಷೆ ನಡೆಸಲಿದೆ. ಅದರಲ್ಲಿ ಕಲಾವಿದರು ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ , ಕಲಾವಿದರ ನಡುವೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.  ಆರ್ಟಿಜಿಎಸ್ ಯೋಜನೆಯಲ್ಲಿ ಹಣ ನೇರವಾಗಿ ಸಂಸ್ಥೆ ಹಾಗೂ ಕಲಾವಿದರ ಖಾತೆಗಳಿಗೆ ತಲುಪಿತ್ತದೆ. ಸಾಮಾನ್ಯ ವರ್ಗದ ಸಂಸ್ಥೆಗಳಲ್ಲಿ 568, ಎಸ್ಸಿ 230, ಎಸ್ಟಿಯ 44 ಸಂಸ್ಥೆಗಳು ಖಾತೆ ಹೊಂದಿವೆ. ಖಾತೆ ಇಲ್ಲದ 103 ಸಾಮಾನ್ಯವರ್ಗ ಹಾಗೂ ಎಸ್ಟಿ 11 ಸಂಸ್ಥೆಗಳಿವೆ ಎಂದು ತಿಳಿಸಿದರು.

ಇಲಾಖೆ ಕಚೇರಿಗೆ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇ ಆಡಳಿತ ಅಳವಡಿಸುತ್ತಿದ್ದೇವೆ. ಜನಪರ ಉತ್ಸವಗಳು ರಾಜ್ಯಮಟ್ಟದಲ್ಲಿ ಮಾತ್ರ ನಡೆಯುತ್ತಿತ್ತು. ಮುಂಬರುವ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುವುದು. ಅದಕ್ಕಾಗಿ ಪ್ರತಿ ಜಿಲ್ಲೆಗೆ ರು. 5 ಲಕ್ಷ ಬಿಡುಗಡೆ ಮಾಡಲಾಗುವುದು. ವಸತಿ ರಹಿತ ಕಲಾವಿದರಿಗೆ ಗ್ರಾಮೀಣ ಭಾಗದಲ್ಲಿ  ವಸತಿ ಒದಗಿಸುವ ನಿಟ್ಟಿನಲ್ಲಿ ಸಚಿವ ಅಂಬರೀಷ್ ಅವರೊಂದಿಗೆ ಚರ್ಚಿಸಲಾಗಿದೆ ಎಂದರು.

ಸನ್ಮಾನ, ಪ್ರಶಸ್ತಿ: 2012 ನೇ ಸಾಲಿಗೆ 30 ಹಾಗೂ 2013ನೇ ಸಾಲಿಗೆ 30 ಜನಪದ ಕಲಾವಿದರನ್ನು ಸನ್ಮಾನಿಸಲಾಯಿತು. ಇದರೊಂದಿಗೆ 2012 ರ ಸಾಲಿನ ಡಾ. ಜೀಶಂಪ ಪ್ರಶಸ್ತಿಯನ್ನು ಡಾ.ಸೈಯದ್ ಝಮೀರುಲ್ಲಾ ಷರೀಷ್ ಹಾಗೂ ಡಾ.ಬಿ.ಎಸ್ ಗದ್ದಗಿ ಮಠ ಪ್ರಶಸ್ತಿಯನ್ನು ದೇಶಾಂಶ ಹುಡುಗಿ ಅವರಿಗೆ ನೀಡಲಾಯಿಚತು.  2013ನೇ ಸಾಲಿನ ಜೀಶಂರ ಪ್ರಶಸ್ತಿಗೆ ಡಾ. ಸಿದ್ಧಣ್ಣ ಎಫ್ ಜಕಬಾಳ ಭಾಜನರಾದರು.

2012ರ ಪುಸ್ತಕ ಬಹುಮಾನಕ್ಕೆ ಪದ್ಯ ಪ್ರಕಾರದಲ್ಲಿ ಡಾ. ಕೆವಿ ಮುದ್ಧವೀರಪ್ಪ, ಗದ್ಯ -ಡಾ . ಭರ್ತ ಮುರ್ಗೆ ಚಂದ್ರಪ್ಪ, ವಿಮರ್ಶೆ ಸಂಶೋಧನೆಗೆ ಡಾ ಸಿಕೆ ನಾವಲಗಿ ಹಾಗೂ ಪ್ರೊ ಎವಿ ನಾವಡ ಪಡೆದರು. 2012ನೇ  ಸಾಲಿಗೆ ಪದ್ಯ ಪ್ರಕಾರ ಡಾ ಸಿಕೆ ನಾವಲಗಿ, ಗದ್ಯ ಡಾ. ಮೈಲಹಳ್ಳಿ ರೇವಣ್ಣ ಮತ್ತು ವಿಮರ್ಶೆ, ಸಂಶೋಧನೆಗೆ ಡಾ. ಆರ್.ಎನ್ ನಾಯಕ ಮತ್ತು ಸಂಕೀರ್ಣ ಪ್ರಾಕಾರಕ್ಕೆ ಜೀನಹಳ್ಳಿ ಸಿದ್ಧಲಿಂಗಪ್ಪ ಪ್ರಶಸ್ತಿ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com