ಗೃಹರಕ್ಷಕ ಸಿಬ್ಬಂದಿಗಿಲ್ಲ ರಕ್ಷಣೆ

ಗೃಹರಕ್ಷಕರಿಗೆ ರಾಜ್ಯ ಸರ್ಕಾರ ದಿನಕ್ಕೆ ಕೇವಲ ರೂ.300 ವೇತನ ನೀಡುತ್ತಿರುವುದು ವಿಷಾದ...
ನ್ಯಾ. ಡಾ.ಎಸ್.ಆರ್.ನಾಯಕ್ ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರು
ನ್ಯಾ. ಡಾ.ಎಸ್.ಆರ್.ನಾಯಕ್ ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರು
Updated on

ಬೆಂಗಳೂರು: ದೇಶದ ಇತಿಹಾಸದಲ್ಲಿಯೇ 2ಜಿ ಹಗರಣವನ್ನು ಹಗರಣಕ್ಕೆಲ್ಲಾ ಪಿತಾಮಹಾನೆಂದೇ ಪರಿಗಣಿಸಲಾಗುತ್ತದೆ. ಆದರ ಮೊತ್ತ ಬರೋಬ್ಬರಿ ರೂ.1.25 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.

ಈ ರೀತಿಯ ಹಗರಣದ ಮೂಲಕ ದೇಶದ ಸಂಪತ್ತು ಒಂದೆಡೆ ಲೂಟಿಯಾಗುತ್ತಿದೆ. ಆದರೆ ದೇಶವನ್ನು ಹಗಲಿರುಳು ಕಾಯುವ ಗೃಹರಕ್ಷಕರಿಗೆ ರಾಜ್ಯ ಸರ್ಕಾರ ದಿನಕ್ಕೆ ಕೇವಲ ರೂ.300 ವೇತನ ನೀಡುತ್ತಿರುವುದು ವಿಷಾದ ಎಂದು ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನಾಡೋಜ ನ್ಯಾ. ಡಾ.ಎಸ್.ಆರ್.ನಾಯಕ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಗೃಹರಕ್ಷಕ ದಳ ಆಯೋಜಿಸಿದ್ದ ಅಖಿಲ ಕರ್ನಾಟಕ ಗೃಹರಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪೊಲೀಸ್ ಇಲಾಖೆಗೆ ಹೆಗಲು ನೀಡುವ ಮೂಲಕ ಇಲಾಖೆಯನ್ನು ಮತ್ತಷ್ಟು ಬಲವರ್ಧಿಸುವ ನಿಟ್ಟಿನಲ್ಲಿ ಗೃಹರಕ್ಷಕ ದಳ ಮಹತ್ತರ ಪಾತ್ರ ವಹಿಸುತ್ತಿದೆ.

ರಾಷ್ಟ್ರದ ಬದ್ಧತೆ, ರೂಪುರೇಷೆ ಹಾಗೂ ಇತರೆ ಆಗುಹೋಗುವಗಳನ್ನೂ ಗಮನಿಸುವ ಜವಾಬ್ದಾರಿ ಗೃಹ ಇಲಾಖೆಗೆ ನೀಡಲಾಗಿದೆ. 1962ರ ಚೀನಾ-ಭಾರತ ಹಾಗೂ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆರಂಭವಾದ ಗೃಹರಕ್ಷಕ ದಳ ಇಂದಿಗೂ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸುತ್ತಿರುವ ನೈಜ ಸ್ವಯಂ ಸೇವಕ ಸಂಸ್ಥೆ ಎಂದು ಅವರು ಶ್ಲಾಘಿಸಿದರು.

ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಭದ್ರತಾ ವ್ಯವಸ್ಥೆ ಇಲ್ಲದಿರುವುದು ರಾಜ್ಯದಲ್ಲಿ ಮಾತ್ರವಲ್ಲದೇ ರಾಷ್ಟ್ರದಲ್ಲಿಯೂ ಸಮಸ್ಯೆಯಾಗಿದೆ. ಅಂಕಿ ಅಂಶಗಳ ಪ್ರಕಾರ ರಾಜ್ಯದ ಸುಮಾರು 6.5 ಕೋಟಿ ಜನರಿಗೆ ಕೇವಲ 25 ಸಾವಿರ ಪೊಲೀಸ್ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮಸ್ಯೆಗೆ ಪರಿಹಾರ ನೀಡಲು ಗಂಭೀರವಾಗಿ ಚಿಂತಿಸಬೇಕೆಂದರು.

ಗೃಹ ರಕ್ಷಕದಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕರು ಬಡವರು, ಹಿಂದುಳಿದವರು ಹಾಗೂ ತುಳಿತಕ್ಕೊಳಗಾದವರು. ಇವರಲ್ಲಿ ಬಹುತೇಕರಿಗೆ ಯಾವುದೇ ಸೌಲಭ್ಯಗಳೂ ಸಿಗುತ್ತಿಲ್ಲ. ಸಿಬ್ಬಂದಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳ ಪಟ್ಟಿಯನ್ನು ನೀಡಿದರೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟು ಆಯೋಗದ ಅಧ್ಯಕ್ಷ ಬಸವಣ್ಣ ಕೆ ಛಲವಾದಿ ಮಾತನಾಡಿ, ಗೃಹ ರಕ್ಷಕ ಸಿಬ್ಬಂದಿಗೆ ನೀಡುತ್ತಿರುವ ವೇತನವನ್ನು ಪರಿಷ್ಕರಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇವೆ ಎಂದು ಭರವಸೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com