ಜಯಲಲಿತಾ ಅರ್ಜಿ ವಿಚಾರಣೆಗೆ ವಿಶೇಷ ಪೀಠಕ್ಕೆ ಕರ್ನಾಟಕ ನ್ಯಾಯಮೂರ್ತಿ

ಚಿಕ್ಕ ರಾಚಪ್ಪ ಕುಮಾರಸ್ವಾಮಿ
ಚಿಕ್ಕ ರಾಚಪ್ಪ ಕುಮಾರಸ್ವಾಮಿ

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಗೆ ವಿಶೇಷ ಪೀಠ ರಚನೆ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಕೋರ್ಟ್ ಜಯಲಲಿತಾರನ್ನು ಅಪರಾಧಿ ಎಂದು ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಜಯಲಲಿತಾ ಅವರು ಹೈಕೋರ್ಟ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಜಯಲಲಿತಾರ ಮೇಲ್ಮನವಿ ಅರ್ಜಿ ವಿಚಾರಣೆಗಾಗಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ಹೆಚ್ ವಘೇಲಾ ಅವರು ನ್ಯಾಯಮೂರ್ತಿ ಚಿಕ್ಕ ರಾಚಪ್ಪ ಕುಮಾರಸ್ವಾಮಿ ಅವರ ವಿಶೇಷ ಪೀಠ ರಚನೆ ಮಾಡಿದ್ದಾರೆ.

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ನಾಳೆಯಿಂದ ಆರಂಭವಾಗಲಿದ್ದು, ಪ್ರತಿ ನಿತ್ಯವೂ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯುತ್ತದೆ.

ಜಯಲಲಿತಾ ಪ್ರಕರಣವನ್ನು ಆದಷ್ಟು ಬೇಗನೆ ಇತ್ಯಾರ್ಥ ಮಾಡಬೇಕೆಂಬ ಆದೇಶ ನೀಡಿದ್ದ ಸುಪ್ರೀಂಕೋರ್ಟ್ ಮೇಲ್ಮನವಿ ಅರ್ಜಿ ವಿಚಾರಣೆಗೆ ವಿಶೇಷ ಪೀಠ ರಚನೆ ಮಾಡುವಂತೆ ನಿರ್ದೇಶನ ನೀಡಿತ್ತು.

ನ್ಯಾ. ಸಿ.ಆರ್. ಕುಮಾರಸ್ವಾಮಿ ಹಿನ್ನೆಲೆ
ಕರ್ನಾಟಕದ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿರುವ ಸಿ.ಜೆ ಕುಮಾರಸ್ವಾಮಿ ಅವರು ಮೂಲತ ಕರ್ನಾಟಕದ ಬಳ್ಳಾರಿಯವರು.

1983ರಲ್ಲಿ ವಕೀಲಿ ವೃತ್ತಿ ಆರಂಭಿಸಿದ ಕುಮಾರಸ್ವಾಮಿಯವರು ಸಿವಿಲ್, ಕಾರ್ಮಿಕ ಮತ್ತು ಕ್ರಿಮಿನಲ್ ಕೋರ್ಟ್‌ಗಳಲ್ಲಿ ಅಭ್ಯಾಸ ಮಾಡಿದ್ದರು. ನಂತರ 2005ರಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಧೀಶರಾಗಿ ಆಯ್ಕೆ ಮಾಡಲಾಗಿತ್ತು. ತದನಂತರ 2007ರಲ್ಲಿ ಅವರನ್ನು ಶಾಶ್ವತ ನ್ಯಾಯಧೀರನ್ನಾಗಿ ನೇಮಕ ಮಾಡಲಾಗಿತ್ತು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com