
ಬೆಂಗಳೂರು: ಕರ್ನಾಟಕದ ಖ್ಯಾತ ಸಾಹಿತಿ, ಹೋರಾಟಗಾರ ದಿವಂಗತ ನಿರಂಜನ ಅವರ ಕೃತಿಗಳು ಇನ್ನು ಮುಂದೆ ಅಂತರ್ಜಾಲದಲ್ಲಿ ಉಚಿತ ಓದಿಗೆ ಸಿಗಲಿವೆ. ಚಿರಸ್ಮರಣೆ, ಮೃತ್ಯುಂಜಯ ಇಂತಹ ಖ್ಯಾತ ಕಾದಂಬರಿಗಳನ್ನು ಬರೆದ ನಿರಂಜನ ಅವರ ಬಹುತೇಕ ಎಲ್ಲ ಕೃತಿಗಳನ್ನು ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್ ಅಡಿಯಲ್ಲಿ ಉಚಿತ ಬಳಕೆಗೆ ವಿಕಿಸೋರ್ಸ್ ನಲ್ಲಿ ಸಿಕ್ಕಲಿವೆ.
ಇವುಗಳಲ್ಲಿ ನಿರಂಜನರ ಕಾದಂಬರಿಗಳು, ಸಣ್ಣ ಕಥೆಗಳು, ನಾಟಕಗಳು, ಪ್ರಬಂಧಗಳು, ರಾಜಕೀಯ ಲೇಖನಗಳು ಕೂಡ ಒಳಗೊಂಡಂತೆ ಸುಮಾರು ೫೫ ಕೃತಿಗಳಿವೆ.
ಮೈಸೂರು ವಿಶ್ವವಿದ್ಯಾಲಯಕ್ಕೆ 'ಜ್ಞಾನ ಗಂಗೋತ್ರಿ" ಹೆಸರಿನಲ್ಲಿ ಪ್ರಧಾನ ಸಂಪಾದಕರಾಗಿ ಸಂಪಾದಿಸಿದ್ದ ಕನ್ನಡ ವಿಶ್ವಕೋಶ ಮತ್ತು ನವಕರ್ನಾಟಕ ಪ್ರಕಾಶನಕ್ಕೆ ಪ್ರಧಾನ ಸಂಪಾದಕರಾಗಿ ಸಂಪಾದಿಸಿದ ೨೫ ಸಂಪುಟದ ವಿಶ್ವ ಕಥಾ ಕೋಶದಿಂದ ನಿರಂಜನ ಅವರು ಮನೆಮಾತಾಗಿದ್ದರು.
ಈಗಾಗಲೇ ನಿರಂಜನ ಸಂಪಾದಿಸಿರುವ ವಿಶ್ವಕೋಶ ವಿಕಿಸೋರ್ಸ್ ನಲ್ಲಿ ಲಭ್ಯವಿದೆ.
1. http://bit.ly/1pllLKJ ಈ ಲಿಂಕಿನಲ್ಲಿ ಈ ಪುಸ್ತಕ ಲಭ್ಯವಿದೆ.
Advertisement