ಸರ್ಕಾರಿ ಆಸ್ಪತ್ರೆಗಳಿಗೆ ಇನ್ನು ದಿಡೀರ್ ಭೇಟಿ

ಇನ್ನು ಮುಂದೆ ತಮ್ಮ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ...
ಸರ್ಕಾರಿ ಆಸ್ಪತ್ರೆಗಳಿಗೆ ಇನ್ನು ದಿಡೀರ್ ಭೇಟಿ

ವೈದ್ಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ನಿರ್ಧಾರ
ಸಾಮಾನ್ಯ ವ್ಯಕ್ತಿಯಾಗಿ ಯಾರಿಗೂ ತಿಳಿಯದಂತೆ ದಾಳಿ
ರೋಗಿಗಳ ಸಾಲಿನಲ್ಲಿ ನಿಂತು ಪ್ರತಿ ವಿಭಾಗಗಳ ಸಮಸ್ಯೆ ಆಲಿಕೆ
ಅಧಿಕಾರಿಗಳ ಸಭೆ ನಡೆಸಿ ತಪ್ಪಿತಸ್ತರ ವಿರುದ್ದ ಕಠಿಣ ಕ್ರಮ


ಬೆಂಗಳೂರು: ಸರ್ಕಾರಿ ಆಸ್ಪತ್ರೆ ವೈದ್ಯರು ಇನ್ನು ಮುಂದೆ ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಬೇಕು. ಮೈ ಮರೆತರೆ ಮನೆ ದಾರಿ ನೋಡಬೇಕಾಗುತ್ತದೆ. ಏಕೆಂದರೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಇನ್ನು ಮುಂದೆ ತಮ್ಮ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದರಲ್ಲೇನು ವಿಶೇಷ ಎನ್ನುತ್ತೀರಾ?

ಸಚಿವರು ಸಾಮಾನ್ಯವಾಗಿ ಭಾವಿಸಿದಂತೆ ಸಚಿವರಾಗಿ ಹೋಗುವುದಿಲ್ಲ. ಬದಲಾಗಿ ಸಾಮಾನ್ಯ ವ್ಯಕ್ತಿಯಾಗಿ ಯಾರಿಗೂ ತಿಳಿಯದಂತೆ ದಿಢೀರ್ ಭೇಟಿ ನೀಡುತ್ತಾರೆ. ರೋಗಿಗಳ ಸಾಲಿನಲ್ಲಿ ನಿಂತು ಪ್ರತಿ ವಿಭಾಗಗಳ ಸಮಸ್ಯೆಗಳನ್ನು ಗಮನಿಸುತ್ತಾರೆ. ನಂತರ ಸಚಿವರಾಗಿ ಹೋಗಿ ಸಂಬಂಧಸಿದ ಅಧಿಕಾರಿಗಳ ಸಭೆ ನಡೆಸಿ ತಪ್ಪಿತಸ್ತರನ್ನು ಗುರುತಿಸಿ ಕಠಿಣ ಕ್ರಮಕೈಗೊಳ್ಳಲಿದ್ದಾರೆ.

ಈ ಬಗ್ಗೆ ಶುಕ್ರವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸಚಿವರು, ಇಲಾಖೆ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡುವುದು ಕಡಿಮೆಯಾಗಿದೆ. ಇನ್ನು ಮುಂದೆ ಸಾಮಾನ್ಯ ವ್ಯಕ್ತಿಯಾಗಿ ಆಸ್ಪತ್ರೆಗಳಿಗೆ ಹೋಗಿ ಪರಿಶೀಲಿಸಬೇಕಿದೆ ಎಂದುರು.

ಈ ಹಿಂದೆ ಕಿದ್ವಾಯ್ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಪರಿಶೀಲಿಸಲು ಅನೇಕ ಬಾರಿ ಹೋಗಿದ್ದೆ. ಆಗ ವಾಸ್ತವ ಅಷ್ಟಾಗಿ ತಿಳಿಯಲಿಲ್ಲ. ಆದರೆ ಇತ್ತೀಚೆಗೆ ಸಾಮಾನ್ಯ ವ್ಯಕ್ತಿಯಾಗಿ ಹೋಗಿದ್ದೆ. ರೋಗಿಗಳ ಜತೆ ನಿಂತು ಕೆಲವು ವಿಭಾಗಗಳಲ್ಲಿ ಏನೆಲ್ಲಾ ಸಮಸ್ಯೆಗಳಿಗೆ ಎಂದು ನೋಡಿದೆ. ರೋಗಿಗಳನ್ನು ಮಾತನಾಡಿಸಿದೆ. ಆಗ ಅವರು ಹೇಳಿದ್ದು ಈ ಆಸ್ಪತ್ರೆಯಲ್ಲಿ ಹಣ ಕೇಳುವುದಿಲ್ಲ. ಆದರೆ ಚಿಕಿತ್ಸೆ ವಿಳಂಬವಾಗುತ್ತದೆ ಎಂದರು. ಸಮಸ್ಯೆಗಳನ್ನು ನಿವಾರಿಸಲು ಈಗಾಗಲೇ ಒಂದು ಸಭೆ ನಡೆಸಲಾಗಿದ್ದು, ಸದ್ಯದಲ್ಲೇ ಮತ್ತೊಂದು ಸಭೆ ಮಾಡಿ ವ್ಯವಸ್ಥೆ ಸುಧಾರಿಸುತ್ತೇನೆ ಎಂದು ಸಚಿವರು ಹೇಳಿದರು.

ಕಿದ್ವಾಯ್ ಆಸ್ಪತ್ರೆ ನಿರ್ದೇಶಕ ಡಾ.ವಿಜಯ್‌ಕುಮಾರ್ ಅವರ ವಿರುದ್ದ ನೇಮಕಾತಿ ಅಕ್ರಮಗಳ ಆರೋಪಗಳಿವೆ. ಆ ವಿಚಾರದಲ್ಲಿ ಅವರ ವಿರುದ್ದ ಕ್ರಮಕೈಗೊಳ್ಳಲಾಗಿದ್ದು, ಅದಕ್ಕೆ ಕೋರ್ಟ್‌ನಿಂದ ತಡೆಯಾಜ್ಞೆ ಇದೆ. ಆದ್ದರಿಂದ ಏನೂ ಮಾಡಲು ಆಗುತ್ತಿಲ್ಲ ಎಂದರು.

ಆರೋಗ್ಯ ವಿವಿ ಅಕ್ರಮ ಸಿಐಡಿಗೆ

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಯನ್ನು ಪೂರ್ವ ನಿರ್ಧಾರದಂತೆ ಸಿಐಡಿಗೆ ವಹಿಸಲಾಗುವುದು ಎಂದು ಸಚಿವರು ಹೇಳಿದರು.

2014ರಲ್ಲಿ ವಿವಿ ಪರೀಕ್ಷೆಗಳಲ್ಲಿ ಉತ್ತರ ಪತ್ರಿಕೆಗಳ ಅದಲು ಬದಲು ಮಾಡಿರುವುದು ಬೆಳಿಕಿಗೆ ಬಂದಿದ್ದರಿಂದ ಅದರ ಪ್ರಾಥಮಿಕ ತನಿಖೆ ನಡೆಸಲು ತ್ರಿಸದಸ್ಯ ಸಮಿತಿ ರಚಿಸಲಾಗಿತ್ತು. ಆ ಸಮಿತಿ ವರದಿಯನ್ನೂ ನೀಡಿದ್ದು, ಅದರಂತೆ ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ 10 ವಿದ್ಯಾರ್ಥಿಗಳ ವಿರುದ್ದ ಪ್ರಕರಣ ದಾಖಲಾಗಿತ್ತು. ನಂತರ ಈ ಗ ಆರೋಪಿಗಳ ವಿರುದ್ದ ಎಫ್‌ಐಆರ್ ಸಿದ್ದಪಡಿಸಲಾಗುತ್ತಿದ್ದು, ನಂತರ ಸಿಐಡಿ ತನಿಖೆಗೆ ವಹಿಸಲಾಗುವುದು ಎಂದು ವಿವರಿಸಿದರು.

ಸದ್ಯದಲ್ಲೇ ಇನ್ನೆರಡು ಕಿದ್ವಾಯ್ ಆಸ್ಪತ್ರೆ
ಮಂಡ್ಯ ಮತ್ತು ಕಲಬುರಗಿಯಲ್ಲಿ ಕಿದ್ಯಾಯ್ ಮಾದರಿಯ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದರು. ಕ್ಯಾನ್ಸರ್ ಕಾಯಿಲೆಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇರುವ ಏಕೈಕ ಕಿದ್ವಾಯ್ ಆಸ್ಪತ್ರೆಯಲ್ಲಿ ನಿತ್ಯ ಬರುವ ಜನರ ಸಂಖ್ಯೆ ಹೆಚ್ಚು. ಆದ್ದರಿಂದ ರೋಗಿಗಳಿಗೆ ನಿರೀಕ್ಷಿತ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿಲ್ಲ. ಆದ್ದರಿಂದ ಫೆರಿಫರಲ್ ಕಿದ್ವಾಯ್ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ವಿವರಿಸಿದರು.

ಪ್ರತಿ ಆಸ್ಪತ್ರೆಗಲ ನಿರ್ಮಾಣಕ್ಕೂ ಕೇಂದ್ರ ಸರ್ಕಾರ ರೂ.45 ನೀಡುತ್ತಿದ್ದು, ರಾಜ್ಯ ಸರ್ಕಾರ ಶೇ.25ರಷ್ಟು ಅನುದಾನ ಒದಗಿಸಲಿದೆ. ಈ ಆಸ್ಪತ್ರೆಗಲ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದ್ದು, ಇನ್ನೊಂದು ವರ್ಷದಲ್ಲಿ ಆಸ್ಪತ್ರೆಗಳ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಸಚಿವರು ಹೇಳಿದರು.

ಆ ಆಸ್ಪತ್ರೆಗಳು ಕಾರ್ಯಾರಂಭ ಮಾಡುತ್ತಿದ್ದಂತೆ ಮೈಸೂರು, ಹುಬ್ಬಳ್ಳಿ ಹಾಗೂ ಬೆಳಗಾವಿ ಸೇರಿದಂತೆ ಇತರ ಜಿಲ್ಲೆಗಳಲ್ಲೂ ಕಿದ್ವಾಯ್ ಆಸ್ಪತ್ರೆ ಶಾಖೆಗಳನ್ನು ಆರಂಭಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com