
ಬೆಂಗಳೂರು: ಖೈದಿಗಳ ದಿನ ಭತ್ಯೆ ಹೆಚ್ಚಿಸಲು ಬಂಧಿಖಾನೆ ಇಲಾಖೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಜೈಲಿನಲ್ಲಿ ತಯಾರುಮಾಡಲಾಗುತ್ತಿರುವ ಬೇಕರಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕುತ್ತಿದ್ದು, ಬೇಡಿಕೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಮಟ್ಟದ ಉತ್ಪಾದನೆಗಾಗಿ ಖೈದಿಗಳಿಗೆ ಪ್ರೋತ್ಸಾಹಿಸಲೆಂದೆ ಭತ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಖೈದಿಗಳಿಗೆ ದಿನ ಭತ್ಯೆ ರು.70ರಿಂದ ರು.90 ನೀಡಲಾಗುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ(ಎನ್‌ಸಿಆರ್‌ಬಿ) ಅಂಕಿಅಂಶದ ಪ್ರಕಾರ ಕರ್ನಾಟಕದಲ್ಲಿರುವ ಖೈದಿಗಳಿಗೆ ದಿನ ಭತ್ಯೆ 120ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಮುಂದಿನ ವಿತ್ತಿಯ ವರ್ಷದಿಂದ ಭತ್ಯೆ ಹೆಚ್ಚಾಗಲಿದೆ ಎಂದು ತಿಳಿಸಿರುವ ಬಂಧಿಖಾನೆ ಇಲಾಖೆ, ಕೇವಲ ಬೇಕರಿ ಉತ್ಪನ್ನಗಳು ಮಾತ್ರವಲ್ಲದೇ ಜೈಲಿನ ಆವರಣದಲ್ಲಿ ತರಕಾರಿಗಳನ್ನು ಬೆಳಯಲಾಗುತ್ತ್ತಿದೆ. ಇದಕ್ಕೂ ಮಾರುಕಟ್ಟೆಯಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ ಎಂದು ಹೇಳಿದೆ.
Advertisement