
ಬೆಂಗಳೂರು: ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಹೊಯ್ಸಳ ಹಾಗೂ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಘೋಷಿಸಿದ್ದು, ರಾಜ್ಯದ 9 ಮಕ್ಕಳು ಭಾಜನರಾಗಿದ್ದಾರೆ. ಪ್ರಶಸ್ತಿ ರೂ.10ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ.
ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಇಬ್ಬರು ಗಣ್ಯರಿಗೆ ನೀಡುವ ಪ್ರಶಸ್ತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಕಲಬುರಗಿಯ ಗಂಜ ಕಾಲೋನಿ ನಿವಾಸಿ ಜಾಹೇದಾ ಖಾನ್‌ಭಾಜನರು. ಪ್ರಶಸ್ತಿಯು ರೂ.25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿರುತ್ತದೆ.
ಸ್ವಯಂಸೇವಾ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಗೆ ಬೆಂಗಳೂರಿನ ಮಕ್ಕಳ ಕೂಟ ಹಾಗೂ ಬೆಳಗಾವಿಯ ಮಹೇಶ್ ಫೌಂಡೇಷನ್ ಆಯ್ಕೆಯಾಗಿವೆ. ತಲಾ 1 ಲಕ್ಷ ನಗದು ಹಾಗೂ ಫಲಕ ನೀಡಿ ಗೌರವಿಸಲಾಗುತ್ತದೆ. ರಾಜ್ಯ ಶಿಶು ಕಲ್ಯಾಣ ಸಂಸ್ಥೆಯು ಉತ್ತಮ ಸಮಾಜ ಸೇವಾ ಕಾರ್ಯಕರ್ತರಿಗೆ ನೀಡುವ ಪ್ರಶಸ್ತಿಗೆ ಬೆಂಗಳೂರಿನ 'ಅಪ್ಸಾ' ಸಂಸ್ಥೆಯ ವಿಶಾಲಾಕ್ಷಿ ಆಯ್ಕೆಮಾಡಲಾಗಿದೆ. ಇವರಿಗೆ ರೂ.5 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ. ಅಸಾಧಾರಣ ಪ್ರತಿಭಾವಂತ 13 ಮಕ್ಕಳನ್ನು ರಾಷ್ಟ್ರ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿದ್ದು, ಅವರನ್ನು ನ.14ರಂದು ಗೌರವಿಸಲಾಗುವುದು.
ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳ 9 ಬಾಲಕ-ಬಾಲಕಿಯರಿಗೆ ಶೌರ್ಯ ಪ್ರಶಸ್ತಿ ಘೋಷಿಸಿದ್ದು ವಿವರ ಇಂತಿದೆ.
ಯಾರ್ಯಾರಿಗೆ ಶೌರ್ಯ ಪ್ರಶಸ್ತಿ?
1. ದೀಕ್ಷಿತ್ ಜಿ.ಪಿ, ಗವಟೂರು(ಶಿವಮೊಗ್ಗ)
2. ಕಿಶನ್ ಜಿ.ಕೆ, ಮಧುಗಿರಿ(ತುಮಕೂರು)
3. ಸುಮಿತಕುಮಾರ ಸಿಂದಗಿ, ಮುಧೋಳ(ಬಾಗಲಕೋಟೆ)
4. ಪೂರ್ಣಿಮಾ ಎಡವೆ, ಬಿಜಾಪುರ(ವಿಜಯಾಪುರ)
5. ಅನೂಪ್ ಕೆ.ಆರ್, ಕೊಳ್ಳೇಗಾಲ(ಚಾಮರಾಜನಗರ)
6. ಸ್ವರೂಪ್ ಕೆ.ಆರ್, ಕೊಳ್ಳೇಗಾಲ(ಚಾಮರಾಜನಗರ)
7. ಬಿ.ಅಪ್ಪು, ಕುಂದಕೆರೆ(ಚಾಮರಾಜನಗರ)
8. ಶಾಂತಿ ಕೆ.ಎಂ, ಕಿಬ್ಬೆಟ್ಟ ಗ್ರಾಮ(ಕೊಡಗು)
9. ಸಹನೇಶ್ ಆರ್, ಕುದೂರು(ರಾಮನಗರ)
ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರ ಪ್ರಶಸ್ತಿ ನಾಮ ನಿರ್ದೇಶನರಾದ ಮಕ್ಕಳು
1. ಅಪೇಕ್ಷಾ ಪೈ, ವಿಜಯನಗರ, ಬೆಂಗಳೂರು(ಕಲೆ)
2. ಎಚ್.ಬಿ.ಅನಿಲ್ ಕುಮಾರ್, ಹೆಗ್ಗಸನಹಳ್ಳಿ, ರಾಯಚೂರು(ಕಲೆ)
3. ಆದಿತಿ ಚಿಂತಾಮಣಿ, ವಿದ್ಯಾಗಿರಿ, ಬಾಗಲಕೋಟೆ(ಸಾಂಸ್ಕೃತಿಕ)
4. ಅನಿಲ್ ಕುಮಾರ್.ವಿ, ಉತ್ತರ ಹಳ್ಳಿ, ಬೆಂಗಳೂರು(ಸಾಂಸ್ಕೃತಿಕ)
5. ಅಕ್ಷತಾ ಶೆಟ್ಟಿ, ಪುತ್ತೂರು, ದಕ್ಷಿಣ ಕನ್ನಡ(ಸಂಸ್ಕೃತಿಕ)
6. ವರುಧಿನಿ ಸದಾನಂದ ಪಟಕಿ, ಸವಳಂಗ ರಸ್ತೆ, ಶಿವಮೊಗ್ಗ(ಶಿಕ್ಷಣ)
7. ಪ್ರದೀಪ್, ಎಸ್.ಐ.ಟಿ. ಬಡಾವಣೆ, ತುಮಕೂರು(ಶಿಕ್ಷಣ)
8. ಅನನ್ಯ ಜಿ.ಎಮ್, ಮಲ್ಲೇಶ್ವರಂ, ಬೆಂಗಳೂರು(ಶಿಕ್ಷಣ)
9. ನಾಗಶ್ರೀ ಎಮ್.ಜೆ, ಸಿದ್ದಾಪುರ, ಉತ್ತರ ಕನ್ನಡ(ಶಿಕ್ಷಣ)
10. ಸೈಯದ್ ಸುಮಯ್ಯ, ಚಿತ್ರದುರ್ಗ(ಕ್ರೀಡೆ)
11. ಅಭಿಷೇಕ್ ಎಸ್.ನವಲೆ, ಶ್ರೀನಗರ, ಬೆಳಗಾವಿ(ಕ್ರೀಡೆ)
12. ಶಮಂತ್‌ರಾವ್ ಕಿದಿಯೂರು, ಅಂಬಲಪಾಡಿ, ಉಡುಪಿ(ಕ್ರೀಡೆ)
13. ಕೆ.ವರ್ಷ, ಧೂಮನಸೂರ್, ಬೀದರ್(ಕ್ರೀಡೆ)
Advertisement