ಕಿದ್ವಾಯಿ ಆಸ್ಪತ್ರೆಯಲ್ಲಿ ಹೊಸ ಸಿ ಟಿ ಸ್ಕಾನಿಂಗ್ ಯಂತ್ರ ಉದ್ಘಾಟಿಸಿದ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ
ಜಿಲ್ಲಾ ಸುದ್ದಿ
ರಾಜ್ಯಕ್ಕೆ ಮೂರು ಹೊಸ ಕ್ಯಾನ್ಸರ್ ಆಸ್ಪತ್ರೆಗಳು
ಕಾರಾವಾರ, ಬೆಳಗಾವಿ ಮತ್ತು ರಾಯಚೂರಿನಲ್ಲಿ, ಟಾಟಾ ಮೆಮೋರಿಯಲ್ ಆಸ್ಪತ್ರೆಯ ಸಹಯೋಗದೊಂದಿದೆ ಮೂರು ಹೊಸ ಕ್ಯಾನ್ಸರ್...
ಬೆಂಗಳೂರು: ಕಾರಾವಾರ, ಬೆಳಗಾವಿ ಮತ್ತು ರಾಯಚೂರಿನಲ್ಲಿ, ಟಾಟಾ ಮೆಮೋರಿಯಲ್ ಆಸ್ಪತ್ರೆಯ ಸಹಯೋಗದೊಂದಿದೆ ಮೂರು ಹೊಸ ಕ್ಯಾನ್ಸರ್ ಆಸ್ಪತ್ರೆಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಣಯಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಕಿದ್ವಾಯಿ ಮೆಮೋರಿಯಲ್ ಆಫ್ ಆಂಕಾಲಜಿ ಯಲ್ಲಿ ಹೊಸ ಸಿ ಟಿ ಸ್ಕಾನಿಂಗ್ ಯಂತ್ರ, ಸ್ತ್ರೀರೋಗಶಾಸ್ತ್ರದ ಹೊರರೋಗಿ ವಿಭಾಗ ಮತ್ತು ವಿದ್ಯಾರ್ಥಿಗಳ ಹಾಸ್ಟೆಲ್ ಗಳನ್ನು ಬುಧವಾರ ಉದ್ಘಾಟಿಸಿದ ಸಂದರ್ಭದಲ್ಲಿ ಪಾಟೀಲ್ ಅವರು "ರೋಗಿಗಳು ಹೆಚ್ಚಾಗುತ್ತಲೇ ಇರುವುದರಿಂದ ಸಿ ಟಿ ಸ್ಕಾನ್ ನ ಹೊಸ ಯಂತ್ರದ ಅವಶ್ಯಕತೆಯಿತ್ತು" ಎಂದಿದ್ದಾರೆ.
ಈ ಹೊಸ ಸ್ಕಾನಿಂಗ್ ಯಂತ್ರದಿಂದ ರೋಗಿಗಳು ಪರೀಕ್ಷೆಗೆ ಕಾಯಬೇಕಾದ ಸಮಯ ೧೫ ದಿನಗಳಿಂದ ೪ ದಿನಗಳಿಗೆ ಇಳಿದಿದೆ ಎಂದು ತಿಳಿಸಿದ್ದಾರೆ.
ಕಿದ್ವಾಯಿ ಸಂಸ್ಥೆಯ ಮಾದರಿಯಲ್ಲಿಯೇ ಮಂಡ್ಯ ಹಾಗೂ ಗುಲ್ಬರ್ಗಾ ದಲ್ಲೂ ಕ್ಯಾನ್ಸರ್ ಸುಶ್ರೂತ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.


