ರಾಜ್ ವಿಗ್ರಹ ವಿರೂಪ: ಐದು ಮಂದಿ ಬಂಧನ

ಕೆಲ ದಿನಗಳ ಹಿಂದೆ ರಾಜರಾಜೇಶ್ವರಿನಗರದಲ್ಲಿ ಸ್ಥಾಪನೆಯಾಗಬೇಕಿದ್ದ ಖ್ಯಾತ ನಟ, ದಿವಂಗತ ಡಾ. ರಾಜ್ ಕುಮಾರ್
ಡಾ. ರಾಜ್ ಕುಮಾರ್ ಅವರ ಕಂಚಿನ ಪ್ರತಿಮೆ (ಸಂಗ್ರಹ ಚಿತ್ರ)
ಡಾ. ರಾಜ್ ಕುಮಾರ್ ಅವರ ಕಂಚಿನ ಪ್ರತಿಮೆ (ಸಂಗ್ರಹ ಚಿತ್ರ)

ಬೆಂಗಳೂರು: ಕೆಲ ದಿನಗಳ ಹಿಂದೆ ರಾಜರಾಜೇಶ್ವರಿನಗರದಲ್ಲಿ ಸ್ಥಾಪನೆಯಾಗಬೇಕಿದ್ದ ಖ್ಯಾತ ನಟ, ದಿವಂಗತ ಡಾ. ರಾಜ್ ಕುಮಾರ್ ವಿಗ್ರಹಕ್ಕೆ ಬೆಂಕಿ ಹಚ್ಚಿ ವಿರೂಪಗೊಳಿಸಿದ್ದ ಪ್ರಕರಣ ರಾಜ್ ಬೆಂಬಲಿಗರು ಮತ್ತು ಕನ್ನಡ ಹೋರಾಟಗಾರರನ್ನು ಕೆರಳಿಸಿತ್ತು. ಈಗ ಈ ಪ್ರಕರಣದಲ್ಲಿ ಐವರು ಆಟೋ ಚಾಲಕರನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯರ ವದಂತಿಯಂತೆ, ರಾಜ್ ಕುಮಾರ್ ಅವರ ಈ ಪ್ರತಿಮೆ ಸ್ಥಾಪಿಸಬೇಕೆಂದಿದ್ದ ಜಾಗದಲ್ಲಿ, ಈ ಹಿಂದೆ ಕನ್ನಡದ ಇನ್ನೊಬ್ಬ ಪ್ರತಿಭಾವಂತ ನಟ ನಿರ್ದೇಶಕ ಶಂಕರ್ ನಾಗ್ ಅವರ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು, ಆದರೆ ಇದ್ದಕ್ಕಿದ್ದಂತೆ ರಾಜ್ ಅವರ ಪ್ರತಿಮೆ ಸ್ಥಾಪಿಸಲು ಮುಂದಾದ್ದರಿಂದ, ಶಂಕರ್ ನಾಗ್ ಅಭಿಮಾನಿಗಳು ಈ ಕೆಲಸ ಮಾಡಿದ್ದಾರೆ ಎನ್ನಲಾಗಿತ್ತು. ಈ ವದಂತಿಯ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಶಂಕರ್ ನಾಗ್ ಅಭಿಮಾನಿಗಳು ಎಂದು ಹೇಳಿಕೊಳ್ಳುವ ಐವರು ಆಟೊ ಚಾಲಕರನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ಸತ್ಯಾಸತ್ಯತೆ ಇನ್ನೂ ಹೊರಬೀಳಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com