ನಾಡಗೀತೆಗೆ ಕತ್ತರಿ ಬೇಡ

ನಾಡಗೀತೆಗೆ ಯಾವುದೇ ರೀತಿಯ ಕತ್ತರಿ ಹಾಕದೆ ಯಥಾವತ್ ಹಾಡಬೇಕು, ಅಲ್ಲವಾದಲ್ಲಿ ಕುವೆಂಪು ಅವರಿಗೆ ಅವಮಾನ...
ಪುಂಡಲೀಕ ಹಾಲಂಬಿ
ಪುಂಡಲೀಕ ಹಾಲಂಬಿ

ಬೆಂಗಳೂರು: ನಾಡಗೀತೆಗೆ ಯಾವುದೇ ರೀತಿಯ ಕತ್ತರಿ ಹಾಕದೆ ಯಥಾವತ್ ಹಾಡಬೇಕು, ಅಲ್ಲವಾದಲ್ಲಿ ಕುವೆಂಪು ಅವರಿಗೆ ಅವಮಾನ ಮಾಡಿದಂತಾಗುತ್ತದೆ. ಹಾಗಾಗಿ ಕತ್ತರಿ ಪ್ರಯೋಗ ಮಾಡದಂತೆ ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ರಾಷ್ಟ್ರಗೀತೆಯ ಮಾದರಿಯಲ್ಲಿಯೇ ನಾಡಗೀತೆ ಹಾಡಬೇಕು. ಇದಕ್ಕೆ ಆಲಾಪನೆ ಸೇರಿಸಬಾರದು, ಆ, ಹಾ, ಹೋ ಎಂದು ಸಂಗೀತ ಸಂಯೋಜಿಸಿ ಹಾಡದೆ, ಕುವೆಂಪು ರಚಿಸಿರುವಂತೆಯೇ ಹಾಡಬೇಕು. ನಾಡಗೀತೆಯಾಗಿ ಮತ್ತು ರಾಜ್ಯಾದ್ಯಂತ ಏಕರೀತಿಯಲ್ಲಿ ಹಾಡಬೇಕು.  ನಾಡಗೀತೆಯನ್ನು ಯಥಾವತ್ತಾಗಿ ಹಾಡುವಂತೆ ಆದೇಶಿಸಬೇಕು. ಸರ್ಕಾರ ಈ ಬಗ್ಗೆ ಇಚ್ಛಾಶಕ್ತಿ ತೋರಬೇಕು. ಅದನ್ನು ಬಿಟ್ಟು ಅವರಿವರ ಸಮಿತಿ ಮಾಡಿದ ವರದಿ ಕೇಳುವುದು ಸರಿಯಲ್ಲ. ಈಗ ಕವಿ ಚನ್ನವೀರ ಕಣವಿ ಸಮಿತಿ ನೀಡಿದೆ ಎನ್ನಲಾದ ವರದಿಯನ್ನು ಜಾರಿ ಮಾಡಬಾರದು, ಇದು ಕಸಾಪ ನಿಲುವು ಎಂದರು.

ಹಿರಿಯ ನಾಗರಿಕರು ಮುಂತಾದವರು ಎದ್ದು ನಿಲ್ಲಲು ಸಾಧ್ಯವಾಗದಿದ್ದರೆ ಕುಳಿತೇ ಗೌರವ ನೀಡಲಿ. ಸಾಹಿತಿಗಳು, ಇತರರು ನಾಡಗೀತೆ ಮೊಟಕುಗೊಳಿಸಬೇಕೆಂದು ಸರ್ಕಾರಕ್ಕೆ ವರದಿ ನೀಡಿದ್ದಾರೆಂದು ಗೊತ್ತಾಗಿದೆ. ಚನ್ನವೀರ ಕಣವಿ ಸಮಿತಿ ವರದಿ ನಮ್ಮ ಕೈ ಸೇರಿಲ್ಲ. ಸರ್ಕಾರ ಈ ಬಗ್ಗೆ ನಮ್ಮ ಅಭಿಪ್ರಾಯವನ್ನೂ ಕೇಳುವುದಿಲ್ಲ. ಹೀಗಾಗಿ ಏನು ನೀಡಿದ್ದಾರೆಂದೇ ನಮಗೆ ತಿಳಿಯುವುದಿಲ್ಲ ಎಂದರು.









ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com