ಮಡೆ ಸ್ನಾನಕ್ಕೆ ಹೈಕೋರ್ಟ್ ಅನುಮತಿ

ಹಿಂದಿನಿಂದ ನಡೆದು ಬಂದಿದ್ದ ಮಡೆ ಸ್ನಾನ ಪದ್ಧತಿಯನ್ನು ಮುಂದುವರೆಸಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಿಂದಿನಿಂದ ನಡೆದು ಬಂದಿದ್ದ ಮಡೆ ಸ್ನಾನ ಪದ್ಧತಿಯನ್ನು ಮುಂದುವರೆಸಲು ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದು ಬರುತ್ತಿದ್ದ ಮಡೆ ಸ್ನಾನ ಪದ್ಧತಿಯನ್ನು ಮುಂದುವರೆಸಲು ಹೈಕೋರ್ಟ್ ಅನುಮತಿ ನೀಡಿದ್ದು, ಹಿಂದಿನ ಪದ್ಧತಿಯಲ್ಲೇ ನಡೆಸಿಕೊಂಡು ಹೋಗಬಹುದು ಎಂದು ಹೈಕೋರ್ಟ್‌ನ ವಿಭಾಗೀಯ ಪೀಠ ಹೇಳಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬ್ರಾಹ್ಮಣರು ಊಟದ ಮಾಡಿದ ಬಾಳೆ ಎಲೆ ಮೇಲೆ ಉರುಳು ಸೇವೆ ಮಾಡಿ, ನದಿಯಲ್ಲಿ ಮುಳುಗಿದರೆ ಶಾಪ ವಿಮೋಚನೆಯಾಗುತ್ತದೆ ಎಂಬ ನಂಬಿಕೆ ರೂಢಿಯಲ್ಲಿತ್ತು. ಇದನ್ನು ಮಡೆಸ್ನಾನ ಎಂದು ಕರೆಯಲಾಗುತ್ತಿತ್ತು. ಆದರೆ ಈ ಆಚರಣೆ ಶೋಷಣೆಗೆ ಕಾರಣವಾಗಿದೆ ಎಂದು ಆರೋಪಿಸಿ, ಇದನ್ನು ನಿಷೇಧಿಸಬೇಕೆಂದು ಪ್ರಗತಿಪರ ಸಂಘಟನೆಗಳು ಒತ್ತಾಯಿಸಿದ್ದವು.

ಪ್ರಗತಿಪರ ಸಂಘಟನೆಗಳ ಬೇಡಿಕೆಗೆ ಸ್ಪಂದಿಸಿದ ಸರ್ಕಾರ 2010ರಲ್ಲಿ ಮಡೆ ಸ್ನಾನವನ್ನು ನಿಷೇಧಿಸಿತ್ತು. ಆದರೆ ಈ ನಿಷೇಧವನ್ನು ಪ್ರಶ್ನಿಸಿ ಆದಿವಾಸಿ ಬುಡಕಟ್ಟು ಹಿತರಕ್ಷಣಾ ವೇದಿಕೆ ಹೈಕೋರ್ಟ್ ಮೆಟ್ಟಿಲೇರಿತ್ತು.

ವಿಚಾರಣೆ ನಡೆಸಿದ ಹೈಕೋರ್ಟ್, ಇನ್ನು ಮುಂದೆ ಹಳೇ ಪದ್ಧತಿಯಲ್ಲೇ ಮಡೆ ಸ್ನಾನ ಆಚರಣೆ ಮಾಡಬಹುದು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com