ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ

ಬೆಂಗಳೂರು ವಿವಿ: 3 ವಿಭಾಗಗಳ ವಿಂಗಡಣೆಗೆ ವರದಿ ನೀಡುವಂತೆ ರಾಜ್ಯ ಸರ್ಕಾರ ಸೂಚನೆ

3 ವಿಭಾಗಗಳಾಗಿ ವಿಂಗಡಿಸಲು ಬೆಂ.ವಿವಿ ವಿಸಿ ಪ್ರೊ.ಬಿ.ತಿಮ್ಮೇಗೌಡ ವಿರೋಧ...

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವನ್ನು 3 ವಿಭಾಗಗಳಾಗಿ ವಿಭಜನೆ ಮಾಡಲು ಅಂತಿಮ ವರದಿ ನೀಡುವಂತೆ  ವಿವಿ ವಿಭಜನೆ ಅಧ್ಯಯನ ಸಮಿತಿಗೆ ಸರ್ಕಾರ ಸೂಚನೆ ನೀಡಿದೆ.

ಹಲವು ದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯ ವಿಂಗಡನೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸರ್ಕಾರ ಸೂಚನೆ ಹೊರಡಿಸಿದೆ.

ಬೆಂಗಳೂರು ವಿವಿಯನ್ನು 3 ವಿಭಾಗಗಳಾಗಿ ವಿಂಗಡಿಸಲು ವಿಶ್ವವಿದ್ಯಾಲಯದ ವಿಸಿ ಪ್ರೊ.ಬಿ.ತಿಮ್ಮೇಗೌಡ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ವಿವಿ ವಿಂಗಡನೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಈ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯ ವಿಭಜನೆ ಅಧ್ಯಯನ ಸಮಿತಿಯೊಂದನ್ನು ರಚಿಸಿ, ವರದಿ ನೀಡುವಂತೆ ಸೂಚನೆ ನೀಡಿತ್ತು. ಬೆಂಗಳೂರು ವಿವಿ ಅಧ್ಯಯನ ಸಮಿತಿ ಬೆಂಗಳೂರು ವಿವಿಯನ್ನು 5 ವಿಭಾಗಳಾಗಿ ವಿಂಗಡಿಸುವಂತೆ ವರದಿಯನ್ನು ಸಿದ್ದಪಡಿಸಿತ್ತು.

ಇದನ್ನು ಪರಿಶೀಲಿಸಿದ ರಾಜ್ಯ ಸರ್ಕಾರ, ಅಧ್ಯಯನ ಸಮಿತಿಯ 5 ವಿಭಾಗಳಾಗಿ ವಿಂಗಡಿಸುವ ವರದಿಯನ್ನು ತಿರಸ್ಕರಿಸಿ, ಬೆಂಗಳೂರು ವಿವಿಯನ್ನು 3 ವಿಭಾಗಗಳಾಗಿ ವಿಭಜನೆ ಮಾಡಲು ಅಂತಿಮ ವರದಿ ನೀಡುವಂತೆ  ಸೂಚನೆ ನೀಡಲಾಗಿದೆ.

ಅಲ್ಲದೆ ಬೆಂಗಳೂರು ವಿವಿ ವಿಭಜನೆಯ ಅಧ್ಯಯನ ಸಮಿತಿಯ ವಿಶೇಷ ಅಧಿಕಾರಿ ಡಾ.ಕೆ.ಆರ್ ವೇಣುಗೋಪಾಲ್ ಅವರಿಗೆ ಈ ಕುರಿತು ಅಂತಿಮ ವರದಿ ನೀಡುವಂತೆ ತಿಳಿಸಿದೆ.

ಹೊಸಕೋಟೆಯ ಡಿವಿಜಿ ಜ್ಞಾನವಾಹಿನಿ, ಬೆಂಗಳೂರು ಸೆಂಟ್ರಲ್ ವಿಶ್ವವಿದ್ಯಾಲಯ ಹಾಗೂ ಜ್ಞಾನಭಾರತಿ ನೂತನವಾಗಿ ವಿಭಜನೆಗೊಳ್ಳಲಿರುವ ವಿಶ್ವವಿದ್ಯಾಲಯಗಳು.

Related Stories

No stories found.

Advertisement

X
Kannada Prabha
www.kannadaprabha.com