
ಹುಬ್ಬಳ್ಳಿ: ಹುಬ್ಬಳ್ಳಿಯ ಪ್ರತಿಷ್ಟಿತ ಮೂರು ಸಾವಿರ ಮಠದ ಸ್ವಾಮೀಜಿ ಶ್ರೀ ರಾಜಯೋಗೇಂದ್ರ ಅವರು ಪೀಠ ತ್ಯಾಗ ಮಾಡಿ ಮೂಲ ಹಾನಗಲ್ ಮಠಕ್ಕೆ ಹಿಂತಿರುಗಿದ್ದಾರೆ ಎಂದು ತಿಳಿದು ಬಂದಿದೆ.
ಹಲವು ದಿನಗಳಿಂದ ಮಠದ ಸುತ್ತ ಹಲವಾರು ವಿವಾದಗಳು ಸೃಷ್ಟಿಯಾಗಿದ್ದವು. ಈ ಹಿಂದೆಯೂ ಸ್ವಾಮಿಗಳು ಪೀಠ ತೆರವು ಮಾಡಲು ಮುಂದಾಗಿದ್ದರು. ಆದರೆ ಭಕ್ತರ ಒತ್ತಡದಿಂದ ಹಿಂದೆ ಸರಿದಿದ್ದರು. ಉತ್ತರಾಧಿಕಾರಿ ನೇಮಕದ ವಿಷಯವಾಗಿ ಇಂದು ಮಠದಲ್ಲಿ ಸ್ವಾಮಿಯವರ ಅಧ್ಯಕ್ಷತೆಯಲ್ಲಿ ಸಭೆ ಸೇರಬೇಕಿತ್ತು. ಆದರೆ ಸಭೆ ನಾಳೆಗೆ ಮುಂದೂಡಲಾಯಿತು ಎಂದು ತಿಳಿದು ಬಂದಿದೆ. ಈಗ ಮಠ ಕಂಡ ಕೆಲವು ಕೆಟ್ಟ ಬೆಳವಣಿಗೆಗಳಿಂದ ಪೀಠ ತ್ಯಜಿಸಿದ್ದೇನೆ ಎಂದು ಶ್ರೀ ರಾಜಯೋಗೇಂದ್ರ ಸ್ವಾಮಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸ್ವಾಮಿಗಳು ಮಠ ತೊರೆಯುವ ಮುಂಚೆ ಅವರ ಕಾರನ್ನು ಅಡ್ಡಗಟ್ಟಿ, ಅಲ್ಲಿಯೇ ಉಳಿಯುವಂತೆ ಭಕ್ತರ ಬೇಡಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.
Advertisement