
ಬೆಂಗಳೂರು: ಇತ್ತೆಚೆಗಷ್ಟೇ ಅಗಲಿದ ಕರ್ನಾಟಕದ ಖ್ಯಾತ ವಿಶ್ವ ಸಾಹಿತಿ ಯು ಆರ್ ಅನಂತಮೂರ್ತಿ ಅವರ ಕೊನೆಯ ಪುಸ್ತಕ 'ಹಿಂದುತ್ವ ಅಥವಾ ಹಿಂದ್ ಸ್ವರಾಜ್' ಕೃತಿಯ ಎರಡನೆ ಆವೃತ್ತಿ ಬಿಡುಗಡೆ ನೆನಪಿನಲ್ಲಿ ಸಂವಾದ ಗೋಷ್ಠಿ ನಾಳೆ ಶುಕ್ರವಾರ(೨೮.೧೧.೨೦೧೪) ನಗರದಲ್ಲಿ ಸಂಜೆ ೬ ಘಂಟೆಗೆ ನಡೆಯಲಿದೆ.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಲಿರುವ ಈ ಸಂವಾದವನ್ನು ಪುಸ್ತಕ ಪ್ರಕಾಶಕರಾದ ಅಭಿನವ ಸಂಸ್ಥೆ ಏರ್ಪಡಿಸಿದೆ.
ಖ್ಯಾತ ಇತಿಹಾಸಕಾರ ಷ ಶೆಟ್ಟರ್ ಈ ಸಂವಾದದ ಅಧ್ಯಕ್ಷತೆ ವಹಿಸಿದ್ದು, ಪತ್ರಕರ್ತ ಸೂರ್ಯಪ್ರಕಾಶ ಪಂಡಿತ್, ಉಪನ್ಯಾಸಕಿ-ಅಂಕಣಕಾರ್ತಿ ವಸು ಎಂ ವಿ ಮತ್ತು ಚಿಂತಕ ಪ್ರೊ. ಚಂದನ ಗೌಡ ಭಾಗವಹಿಸಲಿದ್ದಾರೆ.
ಅನಂತಮೂರ್ತಿ ಅವರು ಮೃತ ಪಟ್ಟ ಮೇಲೆ ಪ್ರಕಟವಾದ ಹಿಂದುತ್ವ ಮತ್ತು ಹಿಂದ್ ಸ್ವರಾಜ್ ಪುಸ್ತಕ, ಗಾಂಧಿ ಅವರ ಹಿಂದ್ ಸ್ವರಾಜ್, ಗೋಡ್ಸೆ ಪ್ರತಿಪಾದಿಸಿದ ಹಿಂದುತ್ವ, ಆರ್ ಎಸ್ ಎಸ್, ನರೇಂದ್ರ ಮೋದಿ ಅವರ ರಾಜಕೀಯ ಬೆಳವಣಿಗೆ ಮುಂತಾದ ವಿಷಯಗಳನ್ನು ಚರ್ಚೆ ಮಾಡಿದೆ. ಸಂವಾದ ಸಾರ್ವಜನಿಕರಿಗೆ ಮುಕ್ತವಾಗಿದೆ.
Advertisement