ಸುರೇಶ್ ಬಾಬು, ರೆಡ್ಡಿಗೆ ಜಾಮೀನು

ಬೇಲೆಕೇರಿ ಅಕ್ರಮ ಅದಿರು ನಾಪತ್ತೆ ಪ್ರಕರಣ ಸಂಬಂಧ ಮಾಜಿ ಸಚಿವ ಗಾಲಿ ಜನಾರ್ದನ...
ಜನಾರ್ದನ ರೆಡ್ಡಿ ಮತ್ತು ಸುರೇಶ್ ಬಾಬು
ಜನಾರ್ದನ ರೆಡ್ಡಿ ಮತ್ತು ಸುರೇಶ್ ಬಾಬು

ಬೆಂಗಳೂರು: ಬೇಲೆಕೇರಿ ಅಕ್ರಮ ಅದಿರು ನಾಪತ್ತೆ ಪ್ರಕರಣ ಸಂಬಂಧ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಕಂಪ್ಲಿ ಶಾಸಕ ಸುರೇಶ್ ಬಾಬು ಸೇರಿದಂತೆ 14 ಜನರಿಗೆ ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ಷರತ್ತು ಬದ್ಧ ಜಾಮೀನು ಮಂಜೂರು ನೀಡಿದೆ.

ಆದರೆ, ಜನಾರ್ದನ ರೆಡ್ಡಿಗೆ ಮಾತ್ರ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಮತ್ತೊಂದೆಡೆ ಕಂಪ್ಲಿ ಶಾಸಕ ಸುರೇಶ್ ಬಾಬು ನ.28ರ ಶುಕ್ರವಾರ ಜೈಲಿನಿಂದ ಬಿಡುಗಡೆಯಾಗವು ಸಾಧ್ಯತೆಗಳಿವೆ ಎನ್ನಲಾಗಿದೆ.

ರು.10 ಲಕ್ಷ ಮೊತ್ತದ ಭದ್ರತಾ ಠೇವಣಿ ಹಾಗೂ ಇಬ್ಬರ ಶ್ಯೂರಿಟಿಯೊಂದಿಗೆ ಜಾಮೀನು ನೀಡಲಾಗಿದೆ. 2009 ರಿಂದ 2011ರ ಅವಧಿಯಲ್ಲಿ ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ರಫ್ತುಮಾಡಿರುವ ಆರೋಪದಡಿ ಶಾಸಕ ಸುರೇಶ್ ಬಾಬು ಅವರನ್ನು 2013ರ ಸೆಪ್ಟಂಬರ್ 19ರಂದು ಸಿಬಿಐ ಅಧಿಕಾರಿಗಳು ಬಂಧಿಸಿದರು.

ಅಂದಿನಿಂದ ಪರಪ್ಪನ ಅಗ್ರಹಾಸ ಕಾರಾಗೃಹದಲ್ಲಿದ್ದ ಸುರೇಶ್‌ಬಾಬು ಅವರ ಜಾಮೀನನ್ನು ಹಲವು ಬಾರಿ ನ್ಯಾಯಾಲಯ ತಿರಸ್ಕರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com