ಕೈಗಾದಲ್ಲಿ ಶುರುವಾಗತ್ತೆ ಮತ್ತೆರಡು ಘಟಕ

ಕೈಗಾ ಅಣುವಿದ್ಯುತ್ ಕೇಂದ್ರ
ಕೈಗಾ ಅಣುವಿದ್ಯುತ್ ಕೇಂದ್ರ
Updated on

ಕಾರವಾರ: ಕೈಗಾದ ಅಣು ವಿದ್ಯುತ್ ಕೇಂದ್ರದ 5ನೇ ಮತ್ತು 6ನೇ ಘಟಕದ ನಿರ್ಮಾಣ ಕಾಮಗಾರಿಯ ಮೊದಲ ಹಂತ 2016ನಲ್ಲಿ ಆರಂಭವಾಗಲಿದ್ದು, ಅದೇ ವರ್ಷ ಡಿಸೆಂಬರ್‌ನಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕೈಗಾ ಅಣುವಿದ್ಯುತ್ ಕೇಂದ್ರದ ನಿರ್ದೇಶಕ ಎಚ್.ಎನ್.ಭಟ್ ಹೇಳಿದ್ದಾರೆ.

ಶುಕ್ರವಾರ ಕೈಗಾ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2016ರಲ್ಲಿ 700 ಮೆಗಾವ್ಯಾಟ್ ಸಾಮರ್ಥ್ಯದ 5ನೇ ಮತ್ತು 6ನೇ ಘಟಕ ಆರಂಭಿಸಲು ಎಲ್ಲ ಸಿದ್ಧತೆಗಳು ಆರಂಭವಾಗಿವೆ. ಸದ್ಯ ಇರುವ ನಾಲ್ಕು ಘಟಕಗಳಿಂದ ಉತ್ಪಾದನೆ ಆಗುತ್ತಿರುವ 780 ಮೆ.ವ್ಯಾ.ವಿದ್ಯುತ್‌ನಲ್ಲಿ ರಾಜ್ಯಕ್ಕೆ ಶೇ.28 ವಿದ್ಯುತ್ ಪೂರೈಕೆ ಆಗುತ್ತಿದೆ. ಮುಂದಿನ ಎರಡು ಘಟಕ ಕಾರ್ಯಾರಂಭದ ನಂತರ ರಾಜ್ಯಕ್ಕೆ ಶೇ.50ರಷ್ಟು ವಿದ್ಯುತ್ ಲಭಿಸಲಿದೆ ಎಂದು ತಿಳಿಸಿದರು.

ಘಟಕದ ಆರಂಭಕ್ಕೆ ಕೇಂದ್ರ ಪರಿಸರ ಮಂತ್ರಾಲಯಕ್ಕೆ ಪರವಾನಗಿ ಕೋರಲಾಗಿದೆ. ರಾಜ್ಯ ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಹಕಾರ ನೀಡುವುದಾಗಿ ತಿಳಿಸಿದೆ. ಕೈಗಾ ಪ್ರದೇಶದಲ್ಲಿ ಮುಂದಿನ ಎರಡು ಘಟಕಗಳಿಗಾಗಿ ಸ್ಥಳ ಗೊತ್ತುಪಡಿಸಲಾಗಿದೆ. ಮಣ್ಣಿನ ಪರೀಕ್ಷೆ, ವಾತಾವರಣ ಅಧ್ಯಯನ ಮುಂತಾದ ಬಹಳಷ್ಟು ಪರೀಕ್ಷೆಗಳು ನಡೆಯುತ್ತಿವೆ.

5ನೇ ಮತ್ತು 6ನೇ ಘಟಕದಿಂದ ಉತ್ಪಾದನೆ ಆಗುವ ವಿದ್ಯುತ್ ಸರಬರಾಜಿಗಾಗಿ ಹೊಸ ಮಾರ್ಗಗಳನ್ನು ಆರಂಭಿಸುವ ಅಥವಾ ಈಗಿರುವ ಮಾರ್ಗದಲ್ಲೇ ಸರಬರಾಜು ಸಾಧ್ಯವಾಗಿಸುವ ಬಗ್ಗೆ ಜಿಪಿಸಿ ಅಧ್ಯಯನ ನಡೆಸುತ್ತಿದೆ ಎಂದರು.

ಪರಿಸರ ಸ್ನೇಹಿ
ಕೈಗಾ ಅಧಿಕಾರಿ ಎಚ್.ಕೆ.ಸುಬ್ರಹ್ಮಣ್ಯ, ಎನ್‌ಪಿಸಿಐಎಲ್ ಕೈಗಾ ಬಗ್ಗೆ ಜನರಲ್ಲಿ ತಪ್ಪು ತಿಳುವಳಿಕೆ ಇದೆ. ಅಣು ವಿದ್ಯುತ್ ಕೇಂದ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ವಿಕಿರಣ ಬಿಡುಗಡೆಯಾಗುತ್ತದೆ ಹಾಗೂ ಇದರಿಂದ ಹೆಚ್ಚು ಕ್ಯಾನ್ಸರ್ ಹರಡುತ್ತದೆ ಎಂಬ ವದಂತಿ ಹೆಚ್ಚಾಗಿ ಹಬ್ಬಿದೆ. ಆದರೆ, ಕೈಗಾದಲ್ಲಿ ವಿಕಿರಣ ಸೋರಿಕೆಯಂತಹ ಯಾವುದೇ ಅವಘಡ ನಡೆಯುವ ಸಾಧ್ಯತೆ ಇಲ್ಲ.


ನೈಸರ್ಗಿಕವಾಗಿ ಬಿಡುಗಡೆಯಾಗುವ ವಿಕಿರಣ ಪ್ರಮಾಣ ಹೋಲಿಸಿದರೆ ಅಣುವಿದ್ಯುತ್ ಕೇಂದ್ರದಿಂದ ಹೊರ ಹೊಮ್ಮುವ ವಿಕಿರಣ ಪ್ರಮಾಣ ತೀರಾ ಕಡಿಮೆ ಇರುತ್ತದೆ ಎಂದರು. ವಾತಾವರಣದಲ್ಲಿ ಬಿಡುಗಡೆಯಾಗುವ ವಿಕಿರಣದ ಬಗ್ಗೆ ನಿರಂತರವಾಗಿ ಕಾರವಾರ ನಗರ ಹಾಗೂ ಬೆಂಗಳೂರಿನಲ್ಲಿ ಪರಿಸರ ಸಮೀಕ್ಷೆ ನಡೆಯುತ್ತಿರುತ್ತದೆ.

ಹೀಗಾಗಿ ಜನ ಆತಂಕ ಪಡುವ ಯಾವುದೇ ಅಗತ್ಯವಿಲ್ಲ. ಸುರಕ್ಷತೆ ಹಾಗೂ ವಿಶ್ವಾಸಾರ್ಹ ಅಗತ್ಯವಿಲ್ಲ. ಸುರಕ್ಷತೆ ಹಾಗೂ ವಿಶ್ವಾಸಾರ್ಹ ನಿರ್ವಹಣೆಗಾಗಿ ಕೈಗಾ ಘಟಕಕ್ಕೆ ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿಗಳು ಲಭಿಸಿವೆ. ಕೈಗಾ ಅಣುವಿದ್ಯುತ್ ಕೇಂದ್ರ ಪರಿಸರ ಮತ್ತು ಸಾರ್ವಜನಿಕ ರಕ್ಷಣೆಗೆ ಬದ್ಧವಾಗಿದೆ ಎಂದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com