ಇಸಿಸ್ ಮೇಲೆ ಸಿರಿಯಾ ವೈಮಾನಿಕ ದಾಳಿ: ಕನಿಷ್ಟ 95 ಸಾವು

ರಾಖಾ ನಗರದ ಮೇಲೆ ಸಿರಿಯಾ ಪಡೆಗಳು ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಟ 95 ಮಂದಿ ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿರಿಯಾ ಪಡೆಗಳು ನಡೆಸಿದ ವೈಮಾನಿಕ ದಾಳಿ ಬಳಿಕ ರಾಖಾ ನಗರದಲ್ಲಿ ಉಂಟಾಗಿದ್ದ ದಟ್ಟ ಹೊಗೆ (ಎಎಫ್‌ಪಿ ಚಿತ್ರ)
ಸಿರಿಯಾ ಪಡೆಗಳು ನಡೆಸಿದ ವೈಮಾನಿಕ ದಾಳಿ ಬಳಿಕ ರಾಖಾ ನಗರದಲ್ಲಿ ಉಂಟಾಗಿದ್ದ ದಟ್ಟ ಹೊಗೆ (ಎಎಫ್‌ಪಿ ಚಿತ್ರ)

ರಾಖಾ: ರಾಖಾ ನಗರದ ಮೇಲೆ ಸಿರಿಯಾ ಪಡೆಗಳು ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಟ 95 ಮಂದಿ ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿರಿಯಾ ಸರ್ಕಾರದ ಆದೇಶದ ಮೇರೆಗೆ ವೈಮಾನಿಕ ಪಡೆಗಳು ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ (ಐಎಸ್‌ಐಸ್‌ಎಸ್) ಉಗ್ರ ಸಂಘಟನೆಯ ಪ್ರಬಲ ಹಿಡಿತದಲ್ಲಿರುವ ರಾಖಾ ನಗರದಲ್ಲಿ ವಾಯುದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಟ 95 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ 120ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿರಿಯಾದಲ್ಲಿರುವ ಲಂಡನ್ ಮೂಲದ ಮಾನವ ಹಕ್ಕು ಸಂಘಟನೆಯ ಕಾರ್ಯಕರ್ತರು ತಿಳಿಸಿರುವಂತೆ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಗಾಯಾಳುಗಳಲ್ಲಿ ಸಾಕಷ್ಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಖಾ ನಗರದ ಮೇಲೆ ಸಿರಿಯಾ ಪಡೆಗಳು ಕನಿಷ್ಟ 10 ಬಾರಿ ವಾಯು ದಾಳಿ ನಡೆಸಿದ್ದು, ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆದರೆ ಸಿರಿಯಾ ಪಡೆಗಳ ವಾಯು ದಾಳಿ ಕುರಿತ ಸುದ್ದಿಗಳು ಸಿರಿಯಾದ ಯಾವುದೇ ಸುದ್ದಿವಾಹಿನಿ ಅಥವಾ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿಲ್ಲ. ಸಿರಿಯಾ ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಈ ಸುದ್ದಿ ವಿಶ್ವ ಸಮುದಾಯದಿಂದ ಮುಚ್ಚಿಡಲು ಸಿರಿಯಾ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಮಾನವ ಹಕ್ಕು ಕಾರ್ಯಕರ್ತರು ಆರೋಪಿಸಿದ್ದಾರೆ.

ಇರಾಕ್ ಮತ್ತು ಸಿರಿಯಾ ದೇಶಗಳ ಮೇಲೆ ತನ್ನ ಹಿಡಿತ ಸಾಧಿಸಲು ಹವಣಿಸುತ್ತಿರುವ ಇಸಿಸ್ ಉಗ್ರ ಸಂಘಟನೆಯನ್ನು ಮಟ್ಟ ಹಾಕಲು ಅಮೆರಿಕ ನೇತೃತ್ವದ ಮಿತ್ರ ಪಡೆಗಳು ಕೂಡ ಈ ಹಿಂದೆ ಇಸಿಸ್ ಪ್ರಾಬಲ್ಯವಿರುವ ನಗರಗಳ ಮೇಲೆ ಕಳೆದ ಸೆಪ್ಟೆಂಬರ್‌ನಲ್ಲಿ ವಾಯು ದಾಳಿ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com