
ಆಲಮಟ್ಟಿ: ಮಗಳು ಅನಾರೋಗ್ಯದಿಂದ ಮೃತಪಟ್ಟ ಸುದ್ದಿ ಕೇಳಿದ ತಾಯಿಯೂ ಸ್ವಲ್ಪ ಹೊತ್ತಿನಲ್ಲಿಯೇ ಹೃದಯಾಘಾತದಿಂದ ನಿಧನ ಹೊಂದಿದ ಘಟನೆ ತಾಲೂಕಿನ ನಿಡಗುಂದಿಯಲ್ಲಿ ನಡೆದಿದೆ.
ಶಾಂತವ್ವ ಸಿದ್ದಪ್ಪ ಗೌಡರ (45), ಈಕೆಯ ತಾಯಿ ದ್ಯಾವಕ್ಕ ಯಮನಪ್ಪ ದಳವಾಯಿ (75) ಮೃತರು. ಕೆಲವರ್ಷ ಹಿಂದೆ ಅಳಿಯ ಸಿದ್ದಪ್ಪ ಮೃತಪಟ್ಟ ನಂತರ ಮಗಳನ್ನು ದ್ಯಾವಕ್ಕ ನಿಡಗುಂದಿಗೆ ಕರೆದುಕೊಂಡು ಬಂದಿದ್ದಳು.
ಬುಧವಾರ ಬೆಳಗ್ಗೆ ಅನಾರೋಗ್ಯದಿಂದ ಮಗಳು ಶಾಂತವ್ವ ಮೃತಪಟ್ಟಳು. ಆ ಸುದ್ದಿ ಕೇಳಿ ಮಗಳ ಶವದ ಮುಂದೆ ಅಳುತ್ತಾ ಕೂತಿದ್ದ ತಾಯಿ ದ್ಯಾವಕ್ಕ ಒಮ್ಮೆಲೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಳು. ದ್ಯಾವಕ್ಕಳಿಗೆ ನಾಲ್ವರು ಪುತ್ರರು ಹಾಗೂ ಮೃತ ಶಾಂತವ್ವ ಸೇರಿ ನಾಲ್ವರು ಪುತ್ರಿಯರು.
Advertisement