ರಾಮ-ಕೃಷ್ಣನ ಲೆಕ್ಕ ಕಳ್ಳಗಂಟಿನ ನಂಟು

ಅಭಿವೃದ್ಧಿ ಯೋಜನೆಗೆ ಬಳಕೆಯಾಗಬೇಕಿದ್ದ ರು. 134 ಕೋಟಿ ಅನುದಾನವನ್ನು `ಕಳ್ಳಗಂಟು' ಮಾಡಿ ಬ್ಯಾಂಕ್‍ನಲ್ಲಿ ಠೇವಣಿ ಇಟ್ಟಿದ್ದಲ್ಲದೇ...
ಹಗರಣ (ಸಾಂದರ್ಭಿಕ ಚಿತ್ರ )
ಹಗರಣ (ಸಾಂದರ್ಭಿಕ ಚಿತ್ರ )

ಬೆಂಗಳೂರು: ಅಭಿವೃದ್ಧಿ ಯೋಜನೆಗೆ ಬಳಕೆಯಾಗಬೇಕಿದ್ದ ರು. 134 ಕೋಟಿ ಅನುದಾನವನ್ನು `ಕಳ್ಳಗಂಟು' ಮಾಡಿ ಬ್ಯಾಂಕ್‍ನಲ್ಲಿ ಠೇವಣಿ ಇಟ್ಟಿದ್ದಲ್ಲದೇ ಕೋಟ್ಯಂತರ ರು.ದುರುಪಯೋಗ ಮಾಡಿದ್ದ ಗ್ರಾಮೀಣ ನೀರು  ಸರಬರಾಜು ಇಲಾಖೆ ಉಪ ಕಾರ್ಯದರ್ಶಿಯ ಖದೀಮತನವನ್ನು ಖುದ್ದು ಗ್ರಾಮೀಣಾಭಿವೃದ್ಧಿ  ಸಚಿವರೇ ಪತ್ತೆ ಹಚ್ಚಿದ್ದಾರೆ. ಆಂಧ್ರ ಬ್ಯಾಂಕ್‍ನಲ್ಲಿ ನಾಲ್ಕು ವರ್ಷಗಳ ಹಿಂದೆ ಠೇವಣಿ ಖಾತೆ ತೆರೆದು ಕಳ್ಳಗಂಟು ಬಚ್ಚಿಟ್ಟಿದ್ದ ರಾಮಕೃಷ್ಣ 9 ಬಾರಿ ವಹಿವಾಟು ನಡೆಸಿದ್ದಾನೆ. ಸುಮಾರು ರು. 5,79,97,860 ಹಣ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಆಂತರಿಕ ಆರ್ಥಿಕ ಸಲಹೆಗಾರರು, ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಸಚಿವರ ಗಮನಕ್ಕೆ ಬಾರದಂತೆ ನಾಲ್ಕು ವರ್ಷ `ವ್ಯವಹಾರ' ನಡೆಸಿದ್ದು ಎಲ್ಲರ
ಹುಬ್ಬೇರಿಸಿದೆ. ಇಲಾಖೆಯಲ್ಲಿ ಹಣ ಕಾಸು ಅಶಿಸ್ತಿಗೆ ಕಾರಣೀಕರ್ತನಾದ ಈ ಅಧಿಕಾರಿಯನ್ನು ತಕ್ಷಣ ಜಾರಿಗೆ ಬರುವಂತೆ ಅಮಾನತುಗೊಳಿಸಿ, ಲೋಕಾ ಯುಕ್ತ ತನಿಖೆ ನಡೆಸುವಂತೆ ಸಚಿವ ಎಚ್.ಕೆ.ಪಾಟೀಲ್ ಆದೇಶಿಸಿದ್ದಾರೆ.

ಶೀಘ್ರಲಿಪಿಕಾರ: ಕುತೂಹಲಕಾರಿ ಸಂಗತಿ ಎಂದರೆ, ಈತ ಆರಂಭದಲ್ಲಿ ರೇಷ್ಮೆ ಇಲಾಖೆಯಲ್ಲಿ ಶೀಘ್ರ ಲಿಪಿಕಾರನಾಗಿ ಕೆಲಸಕ್ಕೆ ಸೇರಿದ್ದ. ಆದರೆ ಶರವೇಗದಲ್ಲಿ ಬಡ್ತಿ ಪಡೆಯುತ್ತಾ ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿಕೊಂಡಿದ್ದ. ಕಳೆದ 20 ವರ್ಷದಿಂದ ಈತ ಗ್ರಾಮೀಣ ನೀರು ಸರಬರಾಜು ಇಲಾಖೆಯಲ್ಲೇ ಬಿಡಾರ ಹೂಡಿದ್ದು, 8 ವರ್ಷದಿಂದಇಲಾಖೆಗೆ ತನ್ನ ಆಸ್ತಿ ವಿವರದ ಲೆಕ್ಕ ಕೊಟ್ಟಿಲ್ಲ. ಕಾಲ ಕಾಲಕ್ಕೆ ಪಂಚಾಯಿತ್ ರಾಜ್ ಇಲಾಖೆಗೆ ಬರುವ ಪ್ರಧಾನ ಕಾರ್ಯದರ್ಶಿಗಳೂ ಸೇರಿದಂತೆ ಆಡಳಿತ ಶಾಹಿಯ `ಮುಖ್ಯ'ರ ಜತೆ ನಿಕಟ ಸಂಪರ್ಕ ಸಾಧಿಸುವ `ಕೌ'ಶಲ್ಯ ಪಡೆದಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com