ಪಿಜಿಗಳಲ್ಲಿ ಹುಡುಗಿಯರ ರಕ್ಷಣೆಗೆ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ

ಪ್ರಗತಿ ಕಾಲೇಜು ಹಾಸ್ಟೆಲ್ ಶೂಟ್‍ಔಟ್ ಪ್ರಕರಣದ ಹಿನ್ನೆಲೆಯಲ್ಲಿ ನಗರದಲ್ಲಿನ ಎಲ್ಲ ಪಿಜಿಗಳ ಸುರಕ್ಷಾ ಕ್ರಮಗಳ ತಪಾಸಣೆಗೆ ನಗರ ಪೊಲೀಸ್ ಇಲಾಖೆ ಮುಂದಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪ್ರಗತಿ ಕಾಲೇಜು ಹಾಸ್ಟೆಲ್ ಶೂಟ್‍ಔಟ್ ಪ್ರಕರಣದ ಹಿನ್ನೆಲೆಯಲ್ಲಿ ನಗರದಲ್ಲಿನ ಎಲ್ಲ ಪಿಜಿಗಳ ಸುರಕ್ಷಾ ಕ್ರಮಗಳ ತಪಾಸಣೆಗೆ ನಗರ ಪೊಲೀಸ್ ಇಲಾಖೆ ಮುಂದಾಗಿದೆ. ಶನಿವಾರ (ಏ.11)ದಿಂದಲೇ ಪರಿಶೀಲನೆ ಕಾರ್ಯ ಆರಂಭವಾಗುತ್ತಿದೆ.

ನಗರ ಪೊಲೀಸ್ ಇಲಾಖೆಯ ಒಂದು ತಂಡ, ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಪಿಜಿಗಳಿಗೆ ಭೇಟಿ ನೀಡಿ, ಅಲ್ಲಿನ ಸುರಕ್ಷತೆ ಕ್ರಮಗಳ ಪರಿಶೀಲನೆ ನಡೆಸಲಿದೆ ಎಂದು ಪೂರ್ವ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖ ರನ್ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ನಗರದಲ್ಲಿರುವ ಎಲ್ಲ ಪಿಜಿಗಳಲ್ಲಿ ಮೊಬೈಲ್, ಲ್ಯಾಪ್‍ಟಾಪ್ ಕಳ್ಳತನ ವಾಗುತ್ತಿರುವ ಬಗ್ಗೆ ಹೆಚ್ಚು ದೂರು ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಪಿಜಿಗಳಲ್ಲೂ ಸಿಸಿಟಿವಿ ಅಳವಡಿಸುವುದು ಕಡ್ಡಾಯವೆಂದು ಸೂಚಿಸಲಾಗಿದೆ.

ಹಾಗೇಯೇ ಸೂಕ್ತ ಭದ್ರತೆಗೆ ಸೆಕ್ಯೂರಿಟಿ ಗಾರ್ಡ್‍ಗಳನ್ನು ನೇಮಿಸಿಕೊಳ್ಳಬೇಕು. ಇವೆಲ್ಲವನ್ನು ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿಸಿದರು. ತಿಳಿಸಿದರು. ಮೊದಲು ನಗರದ ಪೂರ್ವ ಭಾಗದಲ್ಲಿ ಈ ಕಾರ್ಯಾಚರಣೆ ನಡೆಯಲಿದೆ. ಆನಂತರ ಆಗ್ನೇಯ, ಈಶಾನ್ಯ ವಿಭಾಗಗಳಲ್ಲಿ ಕಾರ್ಯಾ ಚರಣೆ ನಡೆಸಲಿದ್ದೇವೆ ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com