ಬಿಬಿಎಂಪಿ ವಿಭಜನೆ: ಹೈಕೋರ್ಟ್ ತಿರ್ಪೀಗೆ ಕಾದು ಕುಳಿತ ಸರ್ಕಾರ

ಬಿಬಿಎಂಪಿ ವಿಭಜನೆ ಕುರಿತು ರಾಜ್ಯ ಹೈಕೋರ್ಟ್ ನೀಡುವ ತೀರ್ಪನ್ನು ಕಾದು ನೋಡುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ ಎಂದು ಮೂಲಗಳು ತಿಳಿಸಿವೆ...
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ಬಿಬಿಎಂಪಿ ವಿಭಜನೆ ಕುರಿತು ರಾಜ್ಯ ಹೈಕೋರ್ಟ್ ನೀಡುವ ತೀರ್ಪನ್ನು ಕಾದು ನೋಡುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಬಿಬಿಎಂಪಿ ವಿಭಜನೆ ಬಗ್ಗೆ ರಾಜ್ಯಪಾಲ ವಿ.ಆರ್.ವಾಲಾ ಸ್ಪಷ್ಟನೇ ಕೇಳಿದ ಬೆನ್ನಲ್ಲೇ, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವರ ಸಭೆ ನಡೆಸಲಾಯಿತು. ಸಭೆಯಲ್ಲಿ ರಾಜ್ಯಪಾಲ ವಾಲ ಅವರಿಗೆ ಸ್ಪಷ್ಟನೇ ನೀಡುವ ಬದಲು, ಹೈಕೋರ್ಟ್ ತೀರ್ಪನ್ನು ಕಾದು ನೋಡುವ ಸರ್ಕಾರ ನಿರ್ಧರಿಸಿದೆ.

ನಾಳೆ ಹೈಕೋರ್ಟ್‌ನಲ್ಲಿ ಬಿಬಿಎಂಪಿ ವಿಭಜನೆ ಕುರಿತ ಪ್ರಕರಣದ ವಿಚಾರಣೆ ನಡೆಯಲಿದ್ದು, ಆ ಸಂದರ್ಭದಲ್ಲಿ ನ್ಯಾಯಪೀಠ ವ್ಯಕ್ತಪಡಿಸುವ ಅಭಿಪ್ರಾಯ ಆಧರಿಸಿ ಮುಂದಿನ ಹೆಜ್ಜೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಬಿಬಿಎಂಪಿ ರದ್ದು ಮಾಡಿ, ಮೂರು ಪಾಲಿಕೆ ಸೃಷ್ಟಿಸುವ ಸುಗ್ರೀವಾಜ್ಞೆ ಪ್ರಸ್ತಾವಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದರು.

ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್(ಕೆಎಂಸಿ) ಕಾಯಿದೆಗೆ 2007ರಲ್ಲಿ ತಂದಿದ್ದ ತಿದ್ದುಪಡಿಯಲ್ಲಿನ 'ಬಿಬಿಎಂಪಿ' ಎಂಬ ಪದ ತೆಗೆದುಹಾಕಿ 'ಪಾಲಿಕೆ' ಎಂದಷ್ಟೇ ಉಲ್ಲೇಖಿಸಿದ ತಿದ್ದುಪಡಿ ಕಾಯಿದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಸರಕಾರ ನಿರ್ಧರಿಸಿತ್ತು.

ಕೆಎಂಸಿ ಕಾಯಿದೆಗೆ ತಿದ್ದುಪಡಿ ಏಕೆ, ಬಿಬಿಎಂಪಿ ಆಡಳಿತಾವಧಿಯ ಗಡುವು ಮುಗಿಯುತ್ತಿರುವ ಹೊತ್ತಿನಲ್ಲಿ ವಿಭಜನೆ ಪ್ರಕ್ರಿಯೆ ಬೇಕಿತ್ತೇ ಎಂದು ಸ್ಪಷ್ಟನೆ ಕೇಳಿದ ಪತ್ರವನ್ನು ರಾಜ್ಯಪಾಲರು ಸರಕಾರಕ್ಕೆ ಶುಕ್ರವಾರ ಕಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com