
ಬೆಂಗಳೂರು: ಮಹಾನಗರಗಳಲ್ಲಿ ಅಪಘಾತಕ್ಕೀಡಾದವರನ್ನು ಸಕಾಲಕ್ಕೆ ತಲುಪಿ ತುರ್ತು ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ `ಬೈಕ್ ಆ್ಯಂಬುಲೆನ್ಸ್ 24x7' ಸೇವೆ ಆರಂಭಿಸಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಮುಂಭಾಗ ಬೈಕ್ ಸೇವೆಗೆ ಬುಧವಾರ ಚಾಲನೆ ನೀಡಲಿದ್ದಾರೆ. ರು.175 ಲಕ್ಷ ವೆಚ್ಚದಲ್ಲಿ 30 ಬೈಕ್ ಆ್ಯಂಬುಲೆನ್ಸ್
ಸಿದ್ಧವಾಗಿದ್ದು, 21 ಆ್ಯಂಬುಲೆನ್ಸ್ ಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲಿವೆ. 108 ಆರೋಗ್ಯ ಕವಚ ಅಡಿಯಲ್ಲೇ ಈ ಸೇವೆಯನ್ನೂ ಸೇರಿಸಲಾಗಿದೆ. ಸಾರ್ವಜನಿಕರು 108 ಸಂಖ್ಯೆಗೆ ಕರೆ ಮಾಡಿದ ನಂತರ ವಾಹನ ದಟ್ಟಣೆ ಹೆಚ್ಚಿರುವ ಹಾಗೂ ನಾಲ್ಕು ಚಕ್ರದ ಆ್ಯಂಬುಲೆನ್ಸ್ ತಲುಪಲು ಸಾಧ್ಯವಾಗದ ಸ್ಥಳಗಳಿಗೆ ಬೈಕ್ ಕಳುಹಿಸಲಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ ಆರೋಗ್ಯ ಸಚಿವ ಯು.ಟಿ.ಖಾದರ್, `ಆ್ಯಂಬುಲೆನ್ಸ್‍ಗಾಗಿ ಪ್ರತ್ಯೇಕ ರಸ್ತೆ ಮಾರ್ಗ ನಿರ್ಮಿಸಲು ಸಾಧ್ಯವಿಲ್ಲ. ಮಹಾನಗರಗಳಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಅಪಘಾತಕ್ಕೊಳಗಾದವರಿಗೆ ಬೈಕ್ ಆ್ಯಂಬುಲೆನ್ಸ್ ಮೂಲಕ ತುರ್ತು ಚಿಕಿತ್ಸೆ ನೀಡಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಬೈಕ್ ಆ್ಯಂಬುಲೆನ್ಸ್ ಗಳ ಸಫಲತೆ ಗಮನಿಸಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು' ಎಂದು ತಿಳಿಸಿದರು.
ಕಾರ್ಯ ನಿರ್ವಹಣೆ ಹೇಗೆ
Advertisement