ಮದ್ಯಪಾನ ಮಾಡಿ ಕಾಲೇಜಿಗೆ ಬಂದರೆ 1 ವರ್ಷ ಡಿಬಾರ್

ಇನ್ನು ಮುಂದೆ ಮದ್ಯಪಾನ ಸೇವಿಸಿ ಕಾಲೇಜಿಗೆ ಬಂದರೆ ಒಂದು ವರ್ಷ ಮನೆಯಲ್ಲೇ ಕೂರಬೇಕಾಗುತ್ತದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇನ್ನು ಮುಂದೆ ಮದ್ಯಪಾನ ಸೇವಿಸಿ ಕಾಲೇಜಿಗೆ ಬಂದರೆ ಒಂದು ವರ್ಷ ಮನೆಯಲ್ಲೇ ಕೂರಬೇಕಾಗುತ್ತದೆ.

ಇತ್ತೀಚೆಗೆ ವಿದ್ಯಾರ್ಥಿಗಳು ಕುಡಿದ ಕಾಲೇಜಿಗೆ ಬರುತ್ತಿದ್ದು, ದೊಡ್ಡ ಸಮಸ್ಯೆಯಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕ್ರಮ ಕೈಗೊಳ್ಳಲು ಮುಂದಾಗಿದ್ದು, ಕುಡಿದು ಕಾಲೇಜಿಗೆ ಬಂದ ವಿದ್ಯಾರ್ಥಿಗಳನ್ನು ಒಂದು ವರ್ಷ ಡಿಬಾರ್ ಮಾಡಿ ಎಂದು ತನ್ನ ಎಲ್ಲ 200 ಕಾಲೇಜುಗಳಿಗೂ ಸೂಚನೆ ನೀಡಿದೆ.

ಕಾಲೇಜಿನ ಆವರಣದಲ್ಲಿ ಕುಡಿದಿರುವುದು ಕಂಡುಬಂದರೆ ಅಥವಾ ತರಗತಿಗೆ ಕುಡಿದು ಬಂದರೆ ಅಂತಹ ವಿದ್ಯಾರ್ಥಿಗಳನ್ನು ಒಂದು ವರ್ಷ ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗುವುದು ಎಂದು ಎಂದು ವಿಸಿ ಎಚ್. ಮಹೇಶಪ್ಪ ತಿಳಿಸಿದ್ದಾರೆ.

ಕಾಲೇಜುಗಳಲ್ಲಿ ತರಗತಿ ಮುಗಿದ ನಂತರ ವಿದ್ಯಾರ್ಥಿಗಳು ಪಾರ್ಟಿ ಮಾಡುವುದಲ್ಲದೇ, ಮದ್ಯಪಾನ ಸೇವಿಸುವುದು ಹೆಚ್ಚಾಗಿದೆ. ಇದನ್ನು ಕಾಲೇಜು ಆಡಳಿತ ಮಂಡಳಿ ಪ್ರಶ್ನಿಸಿದರೆ ಇದು ನಮ್ಮ ವೈಯಕ್ತಿಕ ವಿಚಾರ ಎಂದು ವಿದ್ಯಾರ್ಥಿಗಳು ಹೇಳುವಂತಹ ಘಟನೆಗಳು ಹೆಚ್ಚಾಗಿರುವುದೇ ಈ ಕ್ರಮಕ್ಕೆ ವಿಟಿಯು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com