ಏ.30ರಂದು ಕೆಎಸ್‌ಆರ್‌ಟಿಸಿ ಮುಷ್ಕರ

ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ನೌಕರರ ಒಕ್ಕೂಟ ಏಪ್ರಿಲ್ 30ರಂದು ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ವಿರೋಧಿಸಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ನೌಕರರ ಒಕ್ಕೂಟ ಏಪ್ರಿಲ್ 30ರಂದು ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ವಿರೋಧಿಸಿ ರಾಷ್ಟ್ರವ್ಯಾಪಿ ಮುಷ್ಕರ ಕೈಗೊಂಡಿದೆ.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್.ವಿ ಅನಂತಸುಬ್ಬರಾವ್ ಮಾತನಾಡಿ, ಬಡವರು, ಮಧ್ಯಮ ವರ್ಗದವರು ಹೆಚ್ಚಾಗಿ ರಸ್ತೆ ಸಾರಿಗೆಯನ್ನು ಅವಲಂಭಿಸಿದ್ದಾರೆ. ದೇಶದ 54 ರಾಜ್ಯ ರಸ್ತೆ ಸಾರಿಗೆ ನಿಗಮಗಳನ್ನು ಮುಚ್ಚಿ, ಖಾಸಗಿ ಕ್ಷೇತ್ರಕ್ಕೆ ಕೊಡುವುದು ಮಸೂದೆಯ ಉದ್ದೇಶವಾಗಿದೆ. ಇದರಿಂದ ಲಕ್ಷಾಂತರ ಜನ ಬೀದಿಗೆ ಬೀಳುತ್ತಾರೆ. ಅಲ್ಲದೇ ರಾಜ್ಯದ ಸಾರಿಗೆ ಸಂಸ್ಥೆಗಳ ಹಕ್ಕನ್ನು ಕಸಿಯುವ ಹುನ್ನಾರ ಈ ಮಸೂದೆ ಹಿಂದಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ಈ ನೀಲುವು ಜನ ವಿರೋಧಿಯಾಗಿದ್ದು, ಅನೇಕ ನೌಕರರನ್ನು ಬೀದಿಗೆ ತಳ್ಳುತ್ತದೆ. ಅಲ್ಲದೇ, ಉದ್ಯೋಗವಕಾಶಗಳು ಕೂಡ ಖಾಸಗಿ ಅವರ ಪಾಲಾಗುತ್ತದೆ. ಇದರಿಂದ ಮಧ್ಯಮವರ್ಗದ ಜನತೆಗೆ ತೊಂದರೆಯಾಗಲಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿ ಏಪ್ರಿಲ್ 30 ರಂದು ರಾಷ್ಟ್ರವ್ಯಾಪಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com